ಶನಿವಾರಸಂತೆ, ಡಿ. 12: ಅಜ್ಞಾನದಿಂದ ಸುಜ್ಞಾನದೆಡೆಗೆ ಕರೆದೊಯ್ಯುವದೇ ಶಿಕ್ಷಣವಾಗಿದ್ದು, ಇದು ಮನುಷ್ಯನ ವರ್ತನೆಯನ್ನು ಬದಲಾವಣೆ ಮಾಡುತ್ತದೆ ಎಂದು ಕೂಡಿಗೆ ಡಯಟ್‍ನ ಉಪನ್ಯಾಸಕ ಕೆ.ಎಸ್. ಶಿವಕುಮಾರ್ ಅಭಿಪ್ರಾಯಪಟ್ಟರು.

ಪಟ್ಟಣದ ಕಾವೇರಿ ವಿದ್ಯಾಸಂಸ್ಥೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ಕಾವೇರಿ ಸಂಭ್ರಮ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು.

ಪುಟಕ್ಕಿಟ್ಟಾಗ ಚಿನ್ನಕ್ಕೆ ಮೆರುಗು ಬರುವಂತೆ ಶಿಕ್ಷಣ ಪಡೆಯುವುದರಿಂದ ವಿದ್ಯಾರ್ಥಿಯು ಪುಟಕ್ಕಿಟ್ಟ ಚಿನ್ನವಾಗುತ್ತಾನೆ. ವಿದ್ಯಾರ್ಥಿ ಜವಾಬ್ದಾರಿ ಅರಿತಾಗ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಆದರೆ, ಇಂದಿನ ವಿದ್ಯಾರ್ಥಿಯ ಜವಾಬ್ದಾರಿ ಆತನ ಮೊಬೈಲ್‍ನಲ್ಲಿ ಇದೆ ಎಂದರು.

ಸೋಮವಾರಪೇಟೆ ತಾಲೂಕು ಶಿಕ್ಷಣ ಸಂಯೋಜಕ ಎಚ್.ಆರ್. ಶೇಖರ್ ಮಾತನಾಡಿ, ಶಿಕ್ಷಣ ದೀಪದಂತೆ ಪ್ರಜ್ವಲಿಸಿ ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಹೊರಹೊಮ್ಮಿಸಬೇಕು, ಹೊಸದೇನು ಎಂದು ಆಲೋಚಿಸುವುದೇ ಶಿಕ್ಷಣವಾಗಿದೆ ಎಂದರು.

ಕಾರ್ಯಕ್ರಮದ ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ಗಳನ್ನು ವಿತರಿಸಲಾಯಿತು.

ಪ್ರಜ್ವಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಪಿ. ಗುಂಡಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಟ್ರಸ್ಟ್‍ನ ಕಾರ್ಯದರ್ಶಿ ಜಿ.ಎಂ. ಹೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿರ್ದೇಶಕ ಜಿ.ವಿ. ತಿಮ್ಮಪ್ಪ, ಬಿ. ಧರ್ಮೇಂದ್ರ, ಖಾನರಾಮ್, ಪ್ರಾಂಶುಪಾಲ ಎಚ್.ಎನ್. ದೇವರಾಜ್, ಮುಖ್ಯ ಶಿಕ್ಷಕ ಕೆ.ಎಲ್. ಅಶ್ವಥ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್, ಗೌಡಳ್ಳಿ ಗ್ರಾಮ ಲೆಕ್ಕಾಧಿಕಾರಿ ಅಬ್ದುಲ್ ರಜಾಕ್, ಪ್ರಮುಖರಾದ ಪ್ರೀತಿ ದೇವರಾಜ್, ತಾಯಮ್ಮ, ಎಸ್.ಕೆ. ರಾಜಪ್ಪ, ವಿಶ್ಚನಾಥ್, ಕೆ.ಪಿ. ಜಯಕುಮಾರ್, ಶಿಕ್ಷಕರಾದ ಲಲಿತಾ, ಕಾಂತರಾಜ್ ಹಾಗೂ ವನಿತಾ ಉಪಸ್ಥಿತರಿದ್ದರು.