ಸಿದ್ದಾಪುರ, ಡಿ. 12 : ಅಂಗನವಾಡಿ ಕೇಂದ್ರದ ಆವರಣದೊಳಗೆ ಬೀದಿ ನಾಯಿ ಗಳ ಹಾವಳಿ ಹೆಚ್ಚಾಗಿದ್ದು, ಪಂಚಾಯಿತಿಯು ಸೂಕ್ತ ರೀತಿಯ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಸಿದ್ದಾಪುರದ ಎಂ.ಜಿ ರಸ್ತೆಯಲ್ಲಿರುವ ಅಂಗನವಾಡಿ ಕೇಂದ್ರದ ಆವರಣದೊಳಗೆ ಬೀದಿ ನಾಯಿಗಳು ಸುತ್ತಾಡುತ್ತಾ ಅಂಗನವಾಡಿ ಕೇಂದ್ರದ ಎದುರಿನಲ್ಲೇ ಮಲಗುತ್ತಿವೆ. 10 ಕ್ಕೂ ಅಧಿಕ ಬೀದಿ ನಾಯಿಗಳು ಇದ್ದು, ನಾಯಿಗಳ ಹಾವಳಿಯಿಂದಾಗಿ ಅಂಗನವಾಡಿಗೆ ಬರುವ ಪುಟ್ಟ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ ಎಂದು ಗುಲ್ಲು ನವೀದ್ ತಿಳಿಸಿದ್ದಾರೆ. ಕೂಡಲೇ ಪಂಚಾಯಿತಿಯವರು ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದ್ದಾರೆ.