ಕುಶಾಲನಗರ, ಡಿ.12 : ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಕೇಂದ್ರ ಸ್ಥಾನ ಕುಶಾಲನಗರದಲ್ಲಿಯೇ ನಡೆಸುವಂತೆ ಭಾನುವಾರ ನಡೆದ ತಾಲೂಕು ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಈ ಹಿಂದೆ ನಡೆಸಲಾಗಿರುವ ಊರುಗಳಲ್ಲಿ ಮತ್ತೆ ಎರಡನೇ ಬಾರಿ ಸಮ್ಮೇಳನ ನಡೆಸುವಂತಿಲ್ಲ. ಪ್ರತಿ ಗ್ರಾಮಗಳಲ್ಲೂ ಕನ್ನಡದ ಕಂಪನ್ನು ಪ್ರಸರಿಸುವ ಉದ್ದೇಶ ಪರಿಷತ್ತಿನ ಆಶಯವಾಗಿದೆ. ಕುಶಾಲನಗರ, ಡಿ.12 : ಕುಶಾಲನಗರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾಲೂಕಿನ ಕೇಂದ್ರ ಸ್ಥಾನ ಕುಶಾಲನಗರದಲ್ಲಿಯೇ ನಡೆಸುವಂತೆ ಭಾನುವಾರ ನಡೆದ ತಾಲೂಕು ಕಸಾಪ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯಿಸಲಾಯಿತು.

ಸಭೆಯ ಆರಂಭದಲ್ಲಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಕೇಶವ ಕಾಮತ್, ಈ ಹಿಂದೆ ನಡೆಸಲಾಗಿರುವ ಊರುಗಳಲ್ಲಿ ಮತ್ತೆ ಎರಡನೇ ಬಾರಿ ಸಮ್ಮೇಳನ ನಡೆಸುವಂತಿಲ್ಲ. ಪ್ರತಿ ಗ್ರಾಮಗಳಲ್ಲೂ ಕನ್ನಡದ ಕಂಪನ್ನು ಪ್ರಸರಿಸುವ ಉದ್ದೇಶ ಪರಿಷತ್ತಿನ ಆಶಯವಾಗಿದೆ. ಜಿಲ್ಲಾ ಸಮಿತಿಯಲ್ಲಿ ಅನುಮೋದನೆ ಪಡೆದೊಡನೆ ಕ್ಷೇತ್ರದ ಶಾಸಕರಾದ ಅಪ್ಪಚ್ಚು ರಂಜನ್ ಅಧ್ಯಕ್ಷತೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರಮುಖರು, ಶಾಲಾ ಕಾಲೇಜುಗಳ ಮುಖ್ಯಸ್ಥರು, ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಮ್ಮೇಳನಕ್ಕೆ ಸಂಬಂಧಿಸಿದ ಯೋಜನೆಗಳನ್ನು ರೂಪಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಎಸ್.ನಾಗರಾಜು, ಖಜಾಂಚಿ ಕೆ.ವಿ.ಉಮೇಶ್, ಜಿಲ್ಲಾ ಸಮಿತಿಯ ನಿರ್ದೇಶಕರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕೆ.ಎನ್.ದೇವರಾಜು, ಟಿ.ಜಿ.ಪ್ರೇಮಕುಮಾರ್, ಮೆ.ನಾ.ವೆಂಕಟನಾಯಕ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್, ಕಾರ್ಯದರ್ಶಿ ಅನಿಲ್ ಕುಮಾರ್, ಹೆಬ್ಬಾಲೆ ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಕಾರ್ಯದರ್ಶಿ ಹೆಚ್.ಎನ್.ಸುಬ್ರಮಣ್ಯ, ತಾಲೂಕು ಸಮಿತ ಪದಾಧಿಕಾರಿಗಳಾದ ಟಿ.ವಿ.ಶೈಲಾ, ಹೇಮಲತಾ, ಎಂ.ಎನ್.ಕಾಳಪ್ಪ, ಲೀಲಾಕುಮಾರಿ ತೊಡಿಕಾನ, ಫಿಲೋಮಿನಾ, ಟಿ.ಬಿ.ಮಂಜುನಾಥ್, ಕೆ.ಎನ್.ನಾಗೇಂದ್ರ ಮೊದಲಾದವರಿದ್ದರು.

ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ, ಕಾರ್ಯದರ್ಶಿ ಎಸ್.ನಾಗರಾಜು, ಖಜಾಂಚಿ ಕೆ.ವಿ.ಉಮೇಶ್, ಜಿಲ್ಲಾ ಸಮಿತಿಯ ನಿರ್ದೇಶಕರಾದ ಹಂಚೆಟ್ಟಿರ ಫ್ಯಾನ್ಸಿ ಮುತ್ತಣ್ಣ, ಕೆ.ಎನ್.ದೇವರಾಜು, ಟಿ.ಜಿ.ಪ್ರೇಮಕುಮಾರ್, ಮೆ.ನಾ.ವೆಂಕಟನಾಯಕ್, ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಸೆಬಾಸ್ಟಿನ್, ಕಾರ್ಯದರ್ಶಿ ಅನಿಲ್ ಕುಮಾರ್, ಹೆಬ್ಬಾಲೆ ಹೋಬಳಿ ಅಧ್ಯಕ್ಷ ಮಣಜೂರು ಮೂರ್ತಿ, ಕಾರ್ಯದರ್ಶಿ ಹೆಚ್.ಎನ್.ಸುಬ್ರಮಣ್ಯ, ತಾಲೂಕು ಸಮಿತ ಪದಾಧಿಕಾರಿಗಳಾದ ಟಿ.ವಿ.ಶೈಲಾ, ಹೇಮಲತಾ, ಎಂ.ಎನ್.ಕಾಳಪ್ಪ, ಲೀಲಾಕುಮಾರಿ ತೊಡಿಕಾನ, ಫಿಲೋಮಿನಾ, ಟಿ.ಬಿ.ಮಂಜುನಾಥ್, ಕೆ.ಎನ್.ನಾಗೇಂದ್ರ ಮೊದಲಾದವರಿದ್ದರು.