ಕೂಡಿಗೆ, ಡಿ. 12: ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಈಗಾಗಲೇ ಹೈಬ್ರೀಡ್ ತಳಿಯ ಮತ್ತು ಸುಧಾರಿತ ತಳಿಗಳ ಭತ್ತದ ಬೆಳೆಯು ಕಟಾವಿಗೆ ಬಂದಿವೆಯಾದರೂ ಅಕಾಲಿಕ ಮಳೆ ಗಾಳಿಯಿಂದಾಗಿ ರಾಜಮುಡಿ, ಬಾಂಗ್ಲಾರೈಸ್ ಸೇರಿದಂತೆ ವಿವಿಧ ಬೆಳೆಗಳು ನಷ್ಟವಾಗಿವೆ.
ಜಿಲ್ಲಾ ಹಾರಂಗಿ ಅಚ್ಚುಕಟ್ಟು ಪ್ರದೇಶಗಳಾದ ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ ಗ್ರಾಮಗಳು ಸೇರಿದಂತೆ ಅನೇಕ ಗ್ರಾಮಗಳಲ್ಲಿ ಮಳೆಯಿಂದಾಗಿ ಭತ್ತದ ಬೆಳೆಯು ನೆಲ ಕಚ್ಚಿದೆ. ಕಳೆದ ವಾರದಲ್ಲಿ ಬಿಸಿಲು ತಾಪ ಇದ್ದುದರಿಂದಾಗಿ ಬೆಳೆ ಕಟಾವಿಗೆ ಮುಂದಾಗಿದ್ದ ರೈತರು ಇದೀಗ ಭಾರೀ ನಷ್ಟ ಅನುಭವಿಸುತ್ತಿದ್ದಾರೆ.