ಮಡಿಕೇರಿ, ಡಿ. ೧೦: ಕೊಡಗು ಜಿಲ್ಲೆಯ ಪರಿಸರ, ವಾತಾವರಣ ಎಷ್ಟು ಅನುಭೂತಿ ನೀಡುತ್ತದೆಯೋ ಅದೇ ರೀತಿ ಇಲ್ಲಿನ ಕಾಫಿ ಬೆಳೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡು ಜನಪ್ರಿಯತೆ ಗಳಿಸಿಕೊಂಡಿದೆ. ರೋಬಸ್ಟ, ಅರೇಬಿಕ ಕಾಫಿ ತಳಿಗಳು ಎಲ್ಲರಿಗೂ ಸಹಜವಾಗಿ ಖುಷಿ ನೀಡುತ್ತದೆ. ಜಿಲ್ಲೆಗೆ ಬಂದರೆ ಜನ ಸ್ವಾದಿಷ್ಟಭರಿತ ಕಾಫಿ ಪೇಯ ಸವಿಯದೆ ತೆರಳುವುದಿಲ್ಲ. ಹಾಗೆಯೇ ಕಾಫಿ ಪುಡಿಯನ್ನು ಖರೀದಿಸಿ ಕೊಂಡೊಯ್ಯುತ್ತಾರೆ. ಈ ಹಿನ್ನೆಲೆ ಕೊಡಗಿನ ಕಾಫಿ ಮಾರುಕಟ್ಟೆಯನ್ನು ಉತ್ತೇಜಿಸುವುದರ ಜೊತೆಗೆ ವ್ಯಾಪಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ‘ಕಾಫಿ ಉತ್ಸವ’ಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಜಿಲ್ಲಾಡಳಿತ, ಭಾರತೀಯ ಕಾಫಿ ಮಂಡಳಿ ಹಾಗೂ ತೋಟಗಾರಿಕಾ ಇಲಾಖಾ ವತಿಯಿಂದ ನಗರದ ರಾಜಾಸೀಟ್ ಉದ್ಯಾನವನದಲ್ಲಿ ಆಯೋಜಿಸಿದ್ದ ಕೊಡಗು ಕಾಫಿ ಉತ್ಸವ ಪ್ರವಾಸಿಗರನ್ನು ಆಕರ್ಷಿಸುವ ಜೊತೆಗೆ ಉದ್ಯಮದ ಬೆಳವಣಿಗೆಗೆ ಪೂರಕವಾಗಿದೆ.
ಜಿಲ್ಲೆ ಸೇರಿದಂತೆ ವಿವಿಧೆಡೆಯಿಂದ ಕಾಫಿಗೆ ಸಂಬAಧಿಸಿದ ಸಂಸ್ಥೆ ಹಾಗೂ ಇಲಾಖೆಗಳ ಮಳಿಗೆಗಳನ್ನು ಗ್ರೇಟರ್ ರಾಜಾಸೀಟ್ನಲ್ಲಿ ಸ್ಥಾಪಿಸಲಾಗಿದೆ. ಬರುವ ಪ್ರವಾಸಿಗರು ಕಾಫಿಯ ಬಗ್ಗೆ ಮಾಹಿತಿ ಪಡೆದು ಖರೀದಿಸಲು ಅವಕಾಶ ನೀಡಲಾಗಿದೆ. ಕಾಫಿ ಮಂಡಳಿ, ತೋಟಗಾರಿಕೆ, ಕೃಷಿ ಇಲಾಖೆಯ ಸ್ಟಾಲ್ ಸೇರಿದಂತೆ ೨೦ಕ್ಕೂ ಹೆಚ್ಚು ಖಾಸಗಿ ಸಂಸ್ಥೆಗಳು ಭಾಗವಹಿಸಿವೆ.
ಕಾಫಿಯ ಘಮಲು
ಸದಾ ಪ್ರವಾಸಿಗರಿಂದ ಗಿಜಿಗಿಡುತ್ತಿದ್ದ ರಾಜಾಸೀಟ್ನಲ್ಲಿ ಕಾಫಿಯ ಘಮಲು ತನ್ನತ್ತ ಸೆಳೆಯುತ್ತಿದೆ. ಅಲ್ಲಿಯೇ ತಾಜಾ ಕಾಫಿ ಬೀಜಗಳನ್ನು ಬಳಸಿ ತಯಾರಿಸುತ್ತಿರುವ ಬಿಸಿ, ಬಿಸಿ ಪಾನೀಯವನ್ನು ಸವಿದು ಹಿತವಾದ ವಾತಾವರಣವನ್ನು ಅಸ್ವಾದಿಸುತ್ತಿದ್ದಾರೆ.
ವಿದೇಶಗಳಿಂದ ಬಂದ ಪ್ರವಾಸಿಗರು ಕೂಡ ಕಾಫಿ ಕುಡಿದು ‘ವಾವ್’ ಎಂದರು. ರೋಬಸ್ಟ ಹಾಗೂ ಅರೇಬಿಕ ತಳಿಯೊಂದಿಗೆ ಕಬ್ಬೆಕ್ಕಿನಿಂದ ಹೊರಬರುವ ಕಾಫಿ ಬೀಜ ಗಮನ ಸೆಳೆಯುತ್ತಿದೆ. ಕಾಫಿಯಿಂದ ತಯಾರಿಸಿದ ತಿಂಡಿ, ತಿನಿಸುಗಳು ಪ್ರವಾಸಿಗರಿಗೆ ರುಚಿಸುತ್ತಿವೆ.
ಕಾಫಿಗೆ ಮಾರುಕಟ್ಟೆ ಒದಗಿಸುವುದರ ಜೊತೆಗೆ ಉದ್ಯಮಕ್ಕೆ ಪ್ರೇರೇಪಿಸುವಂತೆ ಈ ಉತ್ಸವ ಮಾಡಿತು. ಹಲವರು ಕಾಫಿಯ ಬಗ್ಗೆ ಮಾಹಿತಿ ಪಡೆದು ಉದ್ಯಮ ಸ್ಥಾಪಿಸುವ ಚಿಂತನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಾಫಿ ರಫ್ತು ಕುರಿತು ಮಾಹಿತಿಯನ್ನು ಪಡೆದುಕೊಳ್ಳುವ ಜೊತೆಗೆ ಬೇರೆ ರಾಜ್ಯದಿಂದ ಪ್ರವಾಸಕ್ಕೆಂದು ಬಂದ ಉದ್ಯಮಿಗಳು ಸ್ಟಾಲ್ಗಳನ್ನು ಕಂಡು ಕಾಫಿಗೆ ಸಂಬAಧಿಸಿದ ವಹಿವಾಟು ನಡೆಸುವ ಇಂಗಿತ ವ್ಯಕ್ತಪಡಿಸಿದ ದೃಶ್ಯಗಳು ಕಂಡುಬAದವು. ಇದರೊಂದಿಗೆ ಕಾಫಿ ಹಾಗೂ ಕೃಷಿಗೆ ಸಂಬAಧಿಸಿದ ಸಲಕರಣೆ, ರಸಗೊಬ್ಬರ ಮಾರಾಟವೂ ಇದೆ.
ಕಾಫಿಗೆ ಮಾರುಕಟ್ಟೆ ಒದಗಿಸುವ ಉದ್ದೇಶ - ಜಿಲ್ಲಾಧಿಕಾರಿ
ಕೊಡಗು ಕಾಫಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರು, ಕಾಫಿಯ ಕುರಿತು ಮಾಹಿತಿಯೊಂದಿಗೆ ಮಹತ್ವ ತಿಳಿಸುವ ನಿಟ್ಟಿನಲ್ಲಿ ಕಾಫಿ ಉತ್ಸವ ಆಯೋಜಿಸಲಾಗಿದೆ. ಬಗೆಬಗೆಯ ಕಾಫಿಯನ್ನು ಅಸ್ವಾದಿಸಬೇಕೆಂದು ಹೇಳಿದ ಅವರು, ಪ್ರವಾಸಿಗರಿಗೆ ಕಾಫಿಯ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕೊಡಗಿನ ಕಾಫಿ ಅಂತರ ರಾಷ್ಟಿçÃಯ ಮಟ್ಟದಲ್ಲಿ ಜನಪ್ರಿಯ ಗಳಿಸಿದೆ. ಕಾಫಿ ಉದ್ಯಮದ ವ್ಯಾಪ್ತಿ ಹೆಚ್ಚಾಗಲು
(ಮೊದಲ ಪುಟದಿಂದ) ಈ ರೀತಿಯ ಕಾರ್ಯಕ್ರಮ ಅನುಕೂಲಕರ ಎಂದರು.
ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಕಾಫಿ, ಕರಿಮೆಣಸು ವಾಣಿಜ್ಯ ಬೆಳೆಯಾಗಿರುವುದರಿಂದ ಹಲವರು ಇದನ್ನು ಅವಲಂಬಿಸಿದ್ದಾರೆ. ಕಾಫಿಗೆ ಉತ್ತಮ ಮಾರುಕಟ್ಟೆ ದೊರೆತರೆ ಸ್ಥಳೀಯ ಬೆಳೆಗಾರರ ಆದಾಯ ಹೆಚ್ಚಾಗುತ್ತದೆ ಎಂದ ಅವರು, ಕಾಫಿಯಿಂದ ಹಲವು ಉತ್ಪನ್ನಗಳು ತಯಾರಿಸಿ ಉದ್ಯಮ ರೂಪಿಸಬಹುದಾಗಿದೆ ಎಂದು ತಿಳಿಸಿದರು.
ಕಾಫಿ ಬೋರ್ಡ್ ಮಾಜಿ ಉಪಾಧ್ಯಕ್ಷ ಸಣ್ಣುವಂಡ ಕಾವೇರಪ್ಪ ಮಾತನಾಡಿ, ಕಾಫಿ ಉತ್ಸವದಂತೆ ಕೃಷಿ ಉತ್ಸವ ಆಯೋಜಿಸಲು ಸಲಹೆ ನೀಡಿದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆಕಾಶ್, ತಹಶೀಲ್ದಾರ್ ಪಿ. ಮಹೇಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಚೆಕ್ಕೇರ ಪ್ರಮೋದ್, ಕಾಫಿ ಮಂಡಳಿ ಅಧಿಕಾರಿ ಚಂದ್ರಶೇಖರ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ. ಶೇಖ್, ರಾಷ್ಟಿçÃಯ ಕಾಫಿ ಮಂಡಳಿ ಸದಸ್ಯ ತಳೂರು ಕಿಶೋರ್, ಕಾಫಿ ಬೆಳೆಗಾರ ಮೋಹನ್ ದಾಸ್ ಸೇರಿದಂತೆ ಇನ್ನಿತರರು ಹಾಜರಿದ್ದರು. -ಹೆಚ್.ಜೆ. ರಾಕೇಶ್