ಮಡಿಕೇರಿ, ಡಿ. ೧೧: ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಮಹಾಸಭೆ ಜಿಲ್ಲಾಧ್ಯಕ್ಷ ಗೌತಮ್ ಶಿವಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಸಭೆಯನ್ನು ಸಮಾಜದ ರಾಜ್ಯ ಉಪಾಧ್ಯಕ್ಷ ಬಿ.ಶಿವಪ್ಪ ಹಾಗೂ ಹಿರಿಯರಾದ ಬಾಬು ಮೊಗೇರ ಉದ್ಘಾಟಿಸಿದರು.
ಮೊಗೇರ ಸೇವಾ ಸಮಾಜದ ಕೊಡಗು ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಯಿತು. ಸಮಾಜದ ಅಧ್ಯಕ್ಷರಾಗಿ ಗೌತಮ್ ಶಿವಪ್ಪ ಅವರನ್ನು ಎರಡನೇ ಬಾರಿಗೆ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಕಂಬಿಬಾಣೆ, ಉಪಾಧ್ಯಕ್ಷರುಗಳಾಗಿ ಚಂದ್ರಾವತಿ ಮದೆನಾಡು, ಎಂ.ಪಿ.ದೇವಪ್ಪ ಗರಂಗದೂರು, ಕೃಷ್ಣ ಪಾಲಿಬೆಟ್ಟ, ಖಜಾಂಚಿಯಾಗಿ ಮಂಜು ಸಿದ್ದಾಪುರ ಅವರನ್ನು ನೇಮಕ ಮಾಡಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ಇಪ್ಪತ್ತು ಮಂದಿಯನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ಪುನರ್ ರಚನೆಗೂ ಮೊದಲು ನಡೆದ ಸಭೆಯಲ್ಲಿ ಬಿ.ಶಿವಪ್ಪ ಅವರು ಮಾತನಾಡಿ ಸಂಘಟನೆಯನ್ನು ಬಲಿಷ್ಠಗೊಳಿಸಲು ಪ್ರತೀ ಗ್ರಾಮ ಸಮಿತಿಯನ್ನು ರಚನೆ ಮಾಡುವುದರೊಂದಿಗೆ ಸಮುದಾಯದ ಸಮಸ್ಯೆಗಳಿಗೆ ಸ್ಪಂದಿಸಬೇಕೆAದು ಕಿವಿ ಮಾತು ಹೇಳಿದರು.
ಪ್ರಮುಖರಾದ ಲೋಹಿತ್, ಸೋಮಯ್ಯ, ಪಿ.ಎಂ.ರವಿ, ಸೋಮವಾರಪೇಟೆ ಪ.ಪಂ ಅಧ್ಯಕ್ಷ ಪಿ.ಕೆ.ಚಂದ್ರು ಉಪಸ್ಥಿತರಿದ್ದರು.
ಸಭೆಯಲ್ಲಿ ೨೦೨೦-೨೧ರ ವರದಿಯನ್ನು ಸುರೇಶ್ ವಾಚಿಸಿದರು. ವರದಿ ಕುರಿತು ಚರ್ಚಿಸಿ ಸಭೆಯಲ್ಲಿ ಅಂಗೀಕಾರ ಪಡೆಯಲಾಯಿತು. ರಮ್ಯ ಪ್ರಾರ್ಥಿಸಿ, ಸುರೇಶ್ ಕಂಬಿಬಾಣೆ ನಿರೂಪಿಸಿ, ಎಂ.ಪಿ.ದೇವಪ್ಪ ಸ್ವಾಗತಿಸಿ, ವಂದಿಸಿದರು.