ಕುಶಾಲನಗರ, ಡಿ. ೧೧: ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಹಿನ್ನೆಲೆ ಕುಶಾಲನಗರದಲ್ಲಿ ಬಿಜೆಪಿ ಪಕ್ಷದಿಂದ ವಿಜಯೋತ್ಸವ ಆಚರಿಸಲಾಯಿತು. ಕುಶಾಲನಗರ ಗಣಪತಿ ದೇವಾಲಯದ ಮುಂದೆ ಸಂಭ್ರಮಾಚರಣೆ ಮಾಡಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ಜಯಘೋಷ ಹಾಕಿ ಹರ್ಷ ವ್ಯಕ್ತಪಡಿಸಿದರು. ನೆರೆದಿದ್ದವರಿಗೆ ಸಿಹಿಹಂಚಿ ಸಂಭ್ರಮ ವ್ಯಕ್ತಪಡಿಸಿದರು.
ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಬಿ. ಜೈವರ್ಧನ್, ಬಿಜೆಪಿ ಜಿಲ್ಲಾ ಮುಖಂಡ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಬಿ. ಅಮೃತರಾಜ್, ಜಿಪಂ ಮಾಜಿ ಸದಸ್ಯೆ ಮಂಜುಳಾ ಮಾತನಾಡಿದರು. ವಿಜಯೋತ್ಸವ ಸಂದರ್ಭ ಬಿಜೆಪಿ ಮುಖಂಡರಾದ ಕುಮಾರಪ್ಪ, ಎಂ.ಡಿ. ಕೃಷ್ಣಪ್ಪ, ಕೆ.ಜಿ. ಮನು, ಚರಣ್, ಶಿವಾಜಿ, ಪುಂಡರೀಕಾಕ್ಷ, ಮಧುಸೂದನ್, ಕುಮಾರಪ್ಪ, ವರದ, ರಾಮಚಂದ್ರ, ನಾರಾಯಣ್, ಪ್ರದೀಪ್, ವೈಶಾಖ್, ಪ್ರವೀಣ್, ಇಂದಿರಾ ರಮೇಶ್, ವೇದಾವತಿ, ಅಣ್ಣಯ್ಯ, ಶಿವಶಂಕರ್, ರಜನಿಕಾಂತ್, ನಿಸಾರ್, ಸುಮನ್ ಮತ್ತಿತರರು ಇದ್ದರು.