ವೀರಾಜಪೇಟೆ, ಡಿ. ೧೧: ಚಿತ್ರಕಲೆಯನ್ನು ಆಸ್ವಾದಿಸುವ ಚಿತ್ರಕಲಾ ರಸಿಕರಿಗಾಗಿ ಆಯೋಜನೆಗೊಳ್ಳುವ ಚಿತ್ರಕಲಾ ಉತ್ಸವ ಕೊಡಗು ೨೦೨೨ರ ಪ್ರದÀರ್ಶನ ಮತ್ತು ಶಿಬಿರ ನಗರದಲ್ಲಿ ತಾ. ೨೧ ರಂದು ಉದ್ಘಾಟನೆಗೊಳ್ಳಲಿದೆ.

ವೀರಾಜಪೇಟೆ ನಗರದ ಹವ್ಯಾಸಿ ಚಿತ್ರ ಕಲಾವಿದ ಸಾದಿಕ್ ಹಂಸ ಅವರ ಸಾದಿಕ್ ಆರ್ಟ್ ಲಿಂಕ್ಸ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರ್ಕಾರ ಇವರ ಸಂಯುಕ್ತ ಆಶ್ರಯದಲ್ಲಿ ‘ಕಲಾ ಉತ್ಸವ ಕೊಡಗು-೨೦೨೨’ ಎಂಬ ಶೀರ್ಷಿಕೆಯಡಿಯಲ್ಲಿ ಚಿತ್ರಕಲೆ, ಶಿಲ್ಪಕಲೆ, ಪ್ರತಿಷ್ಠಾಪನಾ ಕಲೆ, ಛಾಯಾಚಿತ್ರಕಲೆ ನಿರ್ಮಾಣ ಮತ್ತು ಪ್ರದರ್ಶನ ಕಾರ್ಯಕ್ರಮ ನಗರದ ಮೊಗರಗಲ್ಲಿಯ ಸಾದಿಕ್ ಆರ್ಟ್ಸ್ ಲಿಂಕ್ಸ್ ಕಲಾಭೂಮಿಯಲ್ಲಿ ನಡೆಯಲಿದೆ.

ತಾ. ೨೧ ರಿಂದ ೩೧ರ ವರೆಗೆ ಬೆಳಿಗ್ಗೆ ೧೦ ರಿಂದ ಸಂಜೆ ೫ ಗಂಟೆಯವರೆಗೆ ಛಾಯಾಚಿತ್ರಕಲೆ ನಿರ್ಮಾಣ ಮತ್ತು ಪ್ರದರ್ಶನ ನಡೆಯಲಿದೆ.

ಈ ಸಂದರ್ಭ ಕಲಾವಿದರು ಕಲೆಯ ಬಗ್ಗೆ ಮತ್ತು ಅವರ ಅನಿಸಿಕೆಗಳ ಸಂವಾದ ಕಾರ್ಯಕ್ರಮ, ಕಲಾವಿದರು ಕಲಾಕೃತಿಗಳನ್ನು ನಿರ್ಮಾಣ ಮಾಡುವುದು, ಕಲಾವಿದರಿಂದ ಕಲಾಕೃತಿಗಳ ಪ್ರದರ್ಶನ ಹಾಗೂ ಕಲಾವಿದರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಬಿ.ಆರ್. ಸತೀಶ್, ಪ್ರಸನ್ನ ಕುಮಾರ್, ಸುರೇಶ್ ಕೆ., ರೂಪೇಶ್ ನಾಣಯ್ಯ, ರಾಮ್ ಗೌತಮ್, ಅರುಣ ಗೌತಮ್, ಬಾವಾ ಮಾಲ್ದಾರೆ, ಜ್ಯೋತಿಲಾಲ್, ಜಯರಾಮ್, ಸಜಿತ್ ಕುಮಾರ್, ಚಂದ್ರಶೇಖರ್, ಪ್ರವೀಣ್ ವರ್ಣಕುಠೀರ, ವಾಹಿದ್ ಜಾನ್, ರವಿಚಂದ್ರನ್, ಸೋಹನ್, ಗಿಣಿ, ಸಜೇಶ್ ರಾಜ್, ಸುನಾದ್, ಮಂಜುನಾಥ್, ಸಚಿನ್ ಬೆಳ್ಯಪ್ಪ, ಹರ್ಷ ಕಾವಾ, ವಿಠಲ್ ಸೋಮಯ್ಯ, ಸಂದೀಪ್ ಕುಮಾರ್, ಸಾದಿಕ್ ಹಂಸ, ಮಣಿಕಂಠ, ವಿನೋದ್ ಕುಮಾರ್, ರಚನ್, ದರ್ಶನ್ ಸುಬ್ಬಯ್ಯ, ಪ್ರತೀಕ್ ಕುಶಾಲಪ್ಪ, ಶಹಜಹಾನ್, ಹರೀಶ್, ಕುಮಾರ್, ಸುಲೈಮಾನ್, ಅನೀಶ್ ಕುಮಾರ್, ಕೋಡಿ ಭರತ್, ದೀನ ಪೂವಣ್ಣ, ಆಶಾ ಮಂದಪ್ಪ ಸೇರಿದಂತೆ ಅನೇಕ ಕಲಾವಿದರು ಭಾಗವಹಿಸಲಿದ್ದಾರೆ.

ಕಲಾ ಉತ್ಸವದ ಆಯೋಜಕರಾದ ಸಾದಿಕ್ ಹಂಸ ಅವರು ಪತ್ರಿಕೆಯೊಂದಿಗೆ ಮಾತನಾಡಿ, ಕಲಾ ಉತ್ಸವವನ್ನು ೨೦೧೭ರಿಂದ ನಡೆಸಿಕೊಂಡು ಬರುತ್ತಿದ್ದು, ಜಿಲ್ಲೆಯ ಹೆಸರಾಂತ ಚಿತ್ರಕಲಾವಿದರು ರಚಿಸಿದ ಚಿತ್ರಗಳ ಪ್ರದÀರ್ಶನಕ್ಕೆ ವೇದಿಕೆ ಕಲ್ಪಿಸುವ ಮತ್ತು ಚಿತ್ರಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೊಡಗು ಕಲಾ ಉತ್ಸವವನ್ನು ಅಯೋಜಿಸಿಕೊಂಡು ಬರುತಿದ್ದೇವೆ. ಕಲಾ ಉತ್ಸವದಲ್ಲಿ ಕೇರಳ ರಾಜ್ಯದ ಹೆಸರಾಂತ ರಾಜ್ಯ ಮತ್ತು ಅಂತರ್ ರಾಷ್ಟಿçÃಯ ಪ್ರಶಸ್ತಿ ಪಡೆದ ಚಿತ್ರಕಲಾವಿದರು, ರಾಜ್ಯದ ಮತ್ತು ಜಿಲ್ಲೆಯ ಖ್ಯಾತ ಚಿತ್ರಕಲೆ ಶಿಲ್ಪಕಲೆಯ ತಜ್ಞರು, ಚಿತ್ರಕಲಾವಿದರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.