ಕೊಡ್ಲಿಪೇಟೆ, ಡಿ. ೧೦: ಇಲ್ಲಿನ ಕೂರ್ಗ್ ಆಟೋ ಚಾಲಕರ ಮತ್ತು ಮಾಲೀಕರ ಸಂಘದಿAದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಜನಮನಸೂರೆ ಗೊಂಡಿತು.
ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡ್ಲಿಪೇಟೆ ಸೇರಿದಂತೆ ಸುತ್ತಮುತ್ತಲಿನ ಸಾರ್ವಜನಿಕರು ಭಾಗಿಯಾಗಿ ಸಂಭ್ರಮಿಸಿದರು. ಶಾಲಾ ವಿದ್ಯಾರ್ಥಿಗಳಿಂದ ಮೂಡಿ ಬಂದ ಸಾಂಸ್ಕೃತಿಕ ನೃತ್ಯ ಪ್ರದರ್ಶನ, ಮೈಸೂರಿನ ಅಪ್ಪು ಮೆಲೋಡಿಸ್ ತಂಡ ಪ್ರಸ್ತುತಪಡಿಸಿದ ರಸಮಂಜರಿ ಕಾರ್ಯಕ್ರಮ ಎಲ್ಲರನ್ನು ರಂಜಿಸಿತು.
ಸಂಘದ ಅಧ್ಯಕ್ಷ ವೈ.ಎಂ. ಜಯರಾಜ್ ಅಧ್ಯಕ್ಷತೆಯಲ್ಲಿ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಕಾಂಗ್ರೆಸ್ ಮುಖಂಡ ಡಾ. ಮಂತರ್ ಗೌಡ ಮಾತನಾಡಿ, ಕನ್ನಡ ಭಾಷೆ ಬೆಳೆಸಿ ಉಳಿಸುವಲ್ಲಿ ಆಟೋ ಚಾಲಕರು ಪ್ರಮುಖ ಪಾತ್ರವಹಿಸುತ್ತಿದ್ದಾರೆ. ಕನ್ನಡದ ಕಾರ್ಯಗಳು ಇನ್ನಷ್ಟು ಹೆಚ್ಚಾಗಬೇಕು ಎಂದರು. ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಅನಂತ್ ಕುಮಾರ್, ಗ್ರಾ.ಪಂ. ಅಧ್ಯಕ್ಷ ಶೋಭಿತ್ ಗೌಡ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ. ಪ್ರಸನ್ನ, ಕ.ರ.ವೇ. ಅಧ್ಯಕ್ಷ ಡಿ.ಪಿ. ಭೂಪಾಲ್, ರೋಟರಿ ಅಧ್ಯಕ್ಷ ದಿನೇಶ್ ಮಿಲ್, ಗ್ರಾ.ಪಂ. ಮಾಜಿ ಅಧ್ಯಕ್ಷ ಔರಂಗಜೇಬ್, ಕಂದಾಯ ನಿರೀಕ್ಷಕ ಮನು ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷೆ ಪುಷ್ಪಾ ರಾಜೇಶ್, ಆಟೋ ಸಂಘದ ಗೌರವಾಧ್ಯಕ್ಷ ಡಿ.ವಿ. ಜಗದೀಶ್, ಪ್ರಮುಖರಾದ ಡಿ.ಸಿ. ಸೋಮಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ವಿಭಾಗದ ಸಾಂಸ್ಕೃತಿಕ ನ್ಯತ್ಯ ಸ್ಪರ್ಧೆಯಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ದೊಡ್ಡಕೊಡ್ಲಿ ಪ್ರಥಮ, ಎಸ್ಎಸ್ಪಿಯು ಕಿರಿಕೊಡ್ಲಿ ದ್ವಿತೀಯ ಮತ್ತು ಜಿಎಂಪಿ ಕೊಡ್ಲಿಪೇಟೆ ತೃತೀಯ ಸ್ಥಾನ ಪಡೆದವು. ಪ್ರೌಢಶಾಲಾ ವಿಭಾಗದಲ್ಲಿ ಎಸ್ಎಸ್ಪಿಯು ಕಿರಿಕೊಡ್ಲಿ ಪ್ರಥಮ, ಕೊಡ್ಲಿಪೇಟೆ ವಿದ್ಯಾಸಂಸ್ಥೆ ದ್ವಿತೀಯ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತು ಸರಕಾರಿ ಪ್ರೌಢಶಾಲೆ ಬೆಸೂರು ತೃತೀಯ ಸ್ಥಾನ ಪಡೆಯಿತು.
ಕಾಲೇಜು ವಿಭಾಗದಲ್ಲಿ ಎಸ್ಎಸ್ಪಿಯು ಕಿರಿಕೊಡ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿತು. ವಿಜೇತ ತಂಡಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು.