ಸೋಮವಾರಪೇಟೆ,ಡಿ.೧೧: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗರಗಂದೂರು ಡಿ. ಚೆನ್ನಮ್ಮ ಎಜುಕೇಷನ್ ಸೊಸೈಟಿ ಮೈದಾನದಲ್ಲಿ ಆಯೋಜನೆಗೊಂಡಿದ್ದ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮೀಣ ಕ್ರೀಡಾಕೂಟ ಸಂಭ್ರಮಕ್ಕೆ ಸಾಕ್ಷಿಯಾಯಿತು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರು, ಯುವಜನಾಂಗ, ಪುಟಾಣಿ ಮಕ್ಕಳು ವಿವಿಧ ಕ್ರೀಡಾಸ್ಪರ್ಧೆಯಲ್ಲಿ ಸಂಭ್ರಮದಿAದ ಭಾಗಿಯಾಗಿದ್ದರು. ಕ್ರೀಡಾಕೂಟದ ಉದ್ಘಾಟನೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಪದ್ಮನಾಭ ಅವರು ಪಾರಿವಾಳವನ್ನು ಹಾರಿಬಿಡುವ ಮೂಲಕ ನೆರವೇರಿಸಿದರು.
ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲ ಲೋಕೇಶ, ಪಿಡಿಓ ಪೂರ್ಣಿಮಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಉಷಾ, ಸದಸ್ಯರುಗಳಾದ ಸಲೀಂ ಹೊಸತೋಟ, ಉಷಾ ಕುಂಬಾರಬಾಣೆ, ರಮೇಶ್, ಬೋಜಮ್ಮ, ಸುಬ್ಬಯ್ಯ, ಮುಸ್ತಫಾ, ಚೆನ್ನಮ್ಮ ಕಾಲೇಜು ಪ್ರಾಂಶುಪಾಲ ಮಂದಪ್ಪ, ಸುಂಟಿಕೊಪ್ಪ ಪೊಲೀಸ್ ಉಪ ಠಾಣಾಧಿಕಾರಿ ಶ್ರೀನಿವಾಸ್, ಗ್ರಾಮಸ್ಥರು ಹಾಜರಿದ್ದರು. ಕ್ರೀಡಾಕೂಟವನ್ನು ಸಲೀಂ ಹೊಸತೋಟ ನಿರ್ವಹಿಸಿದರು.