ಮಡಿಕೇರಿ, ಡಿ. ೧೦: ಕೊಡಗು ಅನುದಾನ ರಹಿತ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಸಿಇಓ ಅವರನ್ನು ಭೇಟಿಯಾಗಿ ಕೊಡಗಿನ ಶಾಲೆಗಳ ಕಟ್ಟಡ ತೆರಿಗೆಗೆ ರಿಯಾಯಿತಿ ಕೊಡಬೇಕಾಗಿ ಮನವಿ ಸಲ್ಲಿಸಲಾಯಿತು. ಎಸ್‌ಟಿ, ಎಸ್‌ಸಿ, ಓಬಿಸಿ ಹಾಗೂ ಮೈನಾರಿಟಿ ಮಕ್ಕಳ ಪ್ರಿ ಮ್ಯಾಟ್ರಿಕ್ ಸ್ಕಾಲರ್ಶಿಪ್ ಸರಕಾರ ನಿಲ್ಲಿಸಿದ್ದು ಅದನ್ನು ಪುನರಾರಂಭಿಸಬೇಕಾಗಿ ಸರಕಾರಕ್ಕೆ ಡಿಸಿ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.

ಸಂಘದ ಪದಾಧಿಕಾರಿಗಳು ನೂತನ ಡಿಡಿಪಿಐ ದಾಮಯ್ಯ ಅವರನ್ನೂ ಭೇಟಿ ಮಾಡಿದರು.

ಅಧ್ಯಕ್ಷ ಝರು ಗಣಪತಿ, ಉಪಾಧ್ಯಕ್ಷ ದಾಮೋದರ್, ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ ಕೋಟ್ರಂಗಡ, ಕಾನೂನು ಸಲಹೆಗಾರ ಎಂ.ಎಸ್. ಪೂವಯ್ಯ ಮತ್ತು ಸಮಿತಿ ಸದಸ್ಯರು ಸಚಿನ್ ವಾಸುದೇವ್, ಲಿಖಿತ್ ದಾಮೋದರ ಹಾಜರಿದ್ದರು.