ಮಡಿಕೇರಿ, ಡಿ. ೧೧: ಕಡಗದಾಳು ಗ್ರಾಮದ ಇತಿಹಾಸ ಪ್ರಸಿದ್ಧ ಹಾಗೂ ಕೊಡಗಿನ ಆಖೀರಿ ಪುತ್ತರಿ ಕೋಲ್ ನಮ್ಮೆ ಎಂದೇ ಹೆಸರಾಗಿರುವ ಕುರೂಳಿ ಅಂಬಲ ಮಂದ್ ಪುತ್ತರಿ ಕೋಲ್ ತಾ. ೧೨ ರಂದು (ಇಂದು) ನಡೆಯಲಿದೆ.
ಮಧ್ಯಾಹ್ನ ೧೨.೩೦ ಗಂಟೆಗೆ ಊರವರು ತಕ್ಕರ ಮನೆಗೆ ಹೋಗುವುದು, ಫಲಾಹಾರ ಮುಗಿಸಿ ಮಧ್ಯಾಹ್ನ ೨ ಗಂಟೆಗೆ ತಕ್ಕರನ್ನು ಸಾಂಪ್ರದಾಯಿಕವಾಗಿ ಮಂದ್ ಹತ್ತಿಸುವುದು, ೩ ಗಂಟೆಗೆ ದೇಶ ತಕ್ಕರು ಹಾಗೂ ನಾಡಿನವರನ್ನು ಮಂದ್ ಹತ್ತಿಸುವುದು ನಂತರ ಪುತ್ತರಿ ಕೋಲಾಟ್ ನಡೆಯಲಿದೆ.