ವೀರಾಜಪೇಟೆ, ೧೦: ಇತ್ತೀಚೆಗೆ ಉಡುಪಿ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಕಾವೇರಿ ವಿದ್ಯಾಸಂಸ್ಥೆಯ ೯ನೇ ತರಗತಿಯ ವಿದ್ಯಾರ್ಥಿಗಳಾದ ಆಕರ್ಷ್ ಕೊಂಗAಡ ಹಾಗೂ ಅಯ್ಯಪ್ಪ ಎಂ.ಜಿ. ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿ ಬೆಂಗಳೂರು, ಬೆಳಗಾವಿ ತಂಡದೊAದಿಗೆ ಸ್ಪರ್ಧಿಸಿ ಅಂತಿಮ ಪಂದ್ಯಾವಳಿಯನ್ನು ಗುಲ್ಬರ್ಗ ತಂಡದೊAದಿಗೆ ಸ್ಪರ್ಧಿಸಿ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ತರಬೇತುದಾರರಾದ ರಘುರಾಜ್ ಅವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದು, ಶಾಲೆಯ ದೈಹಿಕ ಶಿಕ್ಷಕಿ ಸರಿತಾ ಬಿ.ಯು. ಸಹಕರಿಸಿದ್ದಾರೆ.