ಕೂಡಿಗೆ, ಡಿ. ೧೦: ಪದವಿಪೂರ್ವ ಶಿಕ್ಷಣ ಇಲಾಖೆಯ ವತಿಯಿಂದ ಜಿಲ್ಲಾಮಟ್ಟದ ಮೇಲಾಟಗಳ ಕ್ರೀಡಾಕೂಟ ವೀರಾಜಪೇಟೆಯ ಸೆಂಟ್ ಆನ್ಸ್ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆಯಿತು.
೧೦ಕ್ಕೂ ಹೆಚ್ಚು ಮೇಲಾಟಗಳಲ್ಲಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಳ್ಳುವುದರ ಮೂಲಕ ಕೂಡಿಗೆ ಸರಕಾರಿ ಪದವಿಪೂರ್ವ ಕಾಲೇಜು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಬಾಲಕರ ಮತ್ತು ಬಾಲಕಿಯರ ವಿಭಾಗದ ೫ ಸಾವಿರ ಮೀಟರ್ ಓಟ, ೧,೫೦೦ ಮೀಟರ್ ಓಟ ಎತ್ತರ ಜಿಗಿತ, ಉದ್ದಜಗಿತ, ಟ್ರಿಪಲ್ ಜಂಪ್, ತಟ್ಟೆ ಎಸೆತ, ೮೦೦ ಮತ್ತು ೪೦೦ ಮೀಟರ್ ಓಟ, ೪೦೦x೪ ಮೀಟರ್ ರಿಲೇ, ೧೦೦x೪ ಮೀಟರ್ ರಿಲೇ ಸೇರಿದಂತೆ ವಿವಿಧ ಮೇಲಾಟಗಳಲ್ಲಿ ಪ್ರಥಮ ಸ್ಥಾನ ಕಾಲೇಜಿನ ವಿದ್ಯಾರ್ಥಿಗಳು ಗಳಿಸಿ ತಾ. ೧೭ ರಂದು ಮಂಗಳೂರಿನಲ್ಲಿ ನಡೆಯುವ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಗೊಂಡಿದ್ದಾರೆ.