ಮಡಿಕೇರಿ, ಡಿ. ೯: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಮನೆಯಪಂಡ ಕುಟುಂಬದ ಸದಸ್ಯರನ್ನು ತಾ. ೧೧ ರಂದು ಕುಟುಂಬದ ಐನ್‌ಮನೆಯ ಮುದುರೆಪಾಲ ಮೈದಾನದಲ್ಲಿ ಸನ್ಮಾನಿಸಲಾಗುವುದು. ಮನೆಯಪಂಡ ಕುಟುಂಬದ ೧೨೦ನೇ ಪುತ್ತರಿ ಹಬ್ಬದ ಕ್ರೀಡಾ ದಿನಾಚರಣೆಯ ಸಂದರ್ಭ ಕುಟುಂಬದ ಸದಸ್ಯರಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಕೇಂದ್ರ ಸರ್ಕಾರದ ಪೊಲೀಸ್ ಇಲಾಖೆಯ ಎನ್.ಎಸ್.ಜಿಯ ಮಹಾನಿರ್ದೇಶಕರಾಗಿರುವ ಎಂ.ಎ. ಗಣಪತಿ (ಪವನ್), ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಹಾಗೂ ಭಾರತ ಯೋಜನಾ ಆಯೋಗದ ಉಪ ಕಾರ್ಯದರ್ಶಿ ಆಗಿದ್ದ ದಿವಂಗತ ಎಂ.ಪಿ. ಕಾರ್ಯಪ್ಪ ಅವರ ಧರ್ಮಪತ್ನಿ

ಮೇರಿಕಾರ್ಯಪ್ಪ (ತಾಮನೆ ಪಾಂಡAಡ), ಬೆಂಗಳೂರು ಪ್ರೆಸ್‌ಕ್ಲಬ್ ಹಾಗೂ ಕರ್ನಾಟಕ ಸರ್ಕಾರದ ಮಾಧ್ಯಮ ಅಕಾಡೆಮಿಯ ಮಾಜಿ ಅಧ್ಯಕ್ಷರಾಗಿದ್ದ ಮತ್ತು ಶಕ್ತಿ ದಿನಪತ್ರಿಕೆಯ ಕ್ರೀಡಾ ಅಂಕಣಕಾರರಾಗಿದ್ದ ಎಂ.ಎ. ಪೊನ್ನಪ್ಪ, ಒಲಿಂಪಿಕ್ ಸ್ವರ್ಣಪದಕ ವಿಜೇತ ಹಾಗೂ ಮೂರು ಒಲಿಂಪಿಕ್ಸ್ನಲ್ಲಿ ಭಾಗವಹಿಸಿದ್ದ ಭಾರತ ಹಾಕಿ ತಂಡದ ಮಾಜಿ ನಾಯಕ ಎಂ.ಎA. ಸೋಮಯ್ಯ, ಭಾರತೀಯ ಸೇನೆಯಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ್ದ ಬ್ರಿಗೇಡಿಯರ್‌ಎಂ.ಎ.ದೇವಯ್ಯ (ವಿಜು), ಕರ್ನಾಟಕ ಸರ್ಕಾರದ ಕೆ.ಎ.ಎಸ್ ಅಧಿಕಾರಿ ಹಾಗೂ ನಿವೃತ್ತ ಸಹಾಯಕ ಆಯುಕ್ತರಾಗಿದ್ದ ಎಂ.ಬಿ. ತಿಮ್ಮಯ್ಯ (ನೀಲಕಂಠ), ಮದರಾಸು ಐಐಟಿಯಲ್ಲಿ ಇಂಜಿನಿಯರಿAಗ್ ಪದವಿ ಪಡೆದು ಸಾಕಷ್ಟು ಹೆಸರು ಮಾಡಿದ್ದ ಎಂ.ಸಿ. ಗಣಪತಿ (ಚಿಮ್ಮ), ಭಾರತದ ರೇಸಿಂಗ್ ಕ್ಷೇತ್ರದಲ್ಲಿ (ಕುದುರೆರೇಸ್) ಚಾಂಪಿಯನ್ ಜಾಕಿ ಆಗಿದ್ದ ಎಂ.ಜೆ. ಅಯ್ಯಣ್ಣ (ರಾಜು), ಭಾರತ ಬಾಸ್ಕೆಟ್‌ಬಾಲ್ ತಂಡದ ಮಾಜಿ ಆಟಗಾರ್ತಿ ಕಾಡ್ಯಮಾಡ ದಿವ್ಯಾ ದೇಚಮ್ಮ (ತಾಮನೆ ಮನೆಯಪಂಡ) ಅವರುಗಳು ಸನ್ಮಾನಕ್ಕೆ ಪಾತ್ರರಾಗಿದ್ದಾರೆ.