ಮಡಿಕೇರಿ, ಡಿ. ೯: ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟದ ಸದಸ್ಯೆಯರಿಗೆ ಕ್ಯಾನ್ಸರ್ ಬಗ್ಗೆ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.

ಜನರಲ್ ತಿಮ್ಮಯ್ಯ ಶಾಲೆಯ ಸಭಾಂಗಣದಲ್ಲಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟದ ಸದಸ್ಯೆಯರಿಗೆ ಸ್ತನ, ಗರ್ಭಕೋಶದ ಅಂಡಾಣುವಿನ ಹಾಗೂ ಸೇರ್ವಿಯಾಕಲ್ ಕ್ಯಾನ್ಸರ್ ಬಾರದಂತೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮತ್ತು ರೋಗ ಲಕ್ಷಣಗಳ ಬಗ್ಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಹಾಯಕ ಶಿಕ್ಷಕಿ ಡಾ. ಸೌಮ್ಯ ಡಿ. ಸಮಗ್ರ ಮಾಹಿತಿ ನೀಡಿದರು.

ಅಶ್ವಿನಿ ಆಸ್ಪತ್ರೆಯ ವೈದ್ಯೆ ಡಾ. ದಿವ್ಯ ಜ್ಯೋತಿ ಬಾಯಿ, ಗಂಟಲು ಹಾಗೂ ಥೈರಡ್ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು.

ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷೆ ಡಾ. ರೇಣುಕಾ ಸುಧಾಕರ್, ಕಾರ್ಯದರ್ಶಿ ಲಲಿತಾ ರಾಘವನ್, ಸದಸ್ಯೆಯರಾದ ಉಮಾಗೌರಿ, ಮಲ್ಲಿಗೆ ಪೈ, ಶಾಂತಿ ಕಾಮತ್, ಆಗ್ನೇಸ್ ಮುತ್ತಣ್ಣ, ರಶ್ಮಿ ಪ್ರವೀಣ್ ಪಾಲ್ಗೊಂಡಿದ್ದರು. ಕೊಡವ ಪೊಮ್ಮಕ್ಕಡ ಕೂಟದ ಗಂಗಮ್ಮ ಸ್ವಾಗತಿಸಿದರು.