ಮಡಿಕೇರಿ, ಡಿ. ೯: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ., ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ., ಮುಂಜಾವಿನ ಸೂರ್ಯೋದಯ ಹಾಗೂ ಇಳಿ ಸಂಜೆಯ ಸೂರ್ಯಾಸ್ಥಮದ ಸೌಂದರ್ಯವನ್ನು ಉಣಬಡಿಸುವ ಮಂಜಿನನಗರಿ ಮಡಿಕೇರಿಯ ರಾಜಾಸೀಟಿನಲ್ಲಿ ಇಂದಿನಿAದ ಎರಡು ದಿನಗಳ ಕಾಲ ಕಾಫಿ ಪೇಯ ಘಮ ಘಮಿಸಲಿದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಕಾಫಿಯ ಬಗ್ಗೆ ವಿಶ್ವದಾದ್ಯಂತ ಪ್ರಚುರ ಪಡಿಸುವದಲ್ಲದೆ, ಕಾಫಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ, ಭಾರತೀಯ ಕಾಫಿ ಮಂಡಳಿ ಹಾಗೂ ತೋಟಗಾರಿಕಾ ಇಲಾಖಾ ವತಿಯಿಂದ ಹಮ್ಮಿಕೊಳ್ಳಲಾಗಿರುವ ‘ಕಾಫಿ ಉತ್ಸವ’ದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ದೇಶದ ವಿವಿಧ ಕಾಫಿ ಉದ್ದಿಮೆದಾರರು ಉತ್ಕೃಷ್ಟ ಕಾಫಿಯ ಉತ್ಪನ್ನಗಳ ಸವಿಯನ್ನು ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಉಣಬಡಿಸಲಿದ್ದಾರೆ.

‘ಒಂದು ಬೆಳೆ ಒಂದು ಜಿಲ್ಲೆ’ ಯೋಜನೆಯಡಿ ಕಾಫಿ ಕೂಡ ಪರಿಗಣನೆಯಾಗಿದ್ದು, ಕಾಫಿಯ ಬಗ್ಗೆ ಪ್ರವಾಸಿಗರು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡುವ ಸಲುವಾಗಿ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ ಅವರ ಆಸಕ್ತಿಯ ಮೇರೆಗೆ ಜಿಲ್ಲೆಯಲ್ಲಿ ಕಾಫಿ, ಜೇನು ಹಾಗೂ ವೈನ್ ಉತ್ಸವ ಆಚರಿಸಲಾಗುತ್ತಿದ್ದು, ಮೊದಲ ಹೆಜ್ಜೆಯಾಗಿ ವಾರಾಂತ್ಯದ ತಾ. ೧೦ (ಇಂದು) ಹಾಗೂ ೧೧ ರಂದು ಕಾಫಿ ಉತ್ಸವ ಆಚರಿಸಲಾಗುತ್ತಿದೆ. ಮಡಿಕೇರಿಯ ಸುಂದರ ತಾಣ ರಾಜಾಸೀಟು ಉದ್ಯಾನದಲ್ಲಿ ಉತ್ಸವ ನಡೆಯಲಿದ್ದು, ಜಿಲ್ಲೆ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಕಾಫಿ ಉದ್ಯಮ ಪಾಲುದಾರರು ತಯಾರಿಸುವ ವಿವಿಧ ಬಗೆಯ ಪೇಯ, ತಿನಿಸುಗಳನ್ನು ಪರಿಚಯಿಸಲಿದ್ದಾರೆ.

ಪೂರ್ವ ಸಿದ್ಧತೆ: ಉತ್ಸವದ ಅಂಗವಾಗಿ ರಾಜಾಸೀಟಿನಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಒಟ್ಟು ೨೩ ಕಾಫಿ ಉದ್ಯಮ ಪಾಲುದಾರ ಸಂಸ್ಥೆಗಳು ಭಾಗವಹಿಸಲಿದ್ದು, ತಾತ್ಕಾಲಿಕ ಮಳಿಗೆಗಳನ್ನು

(ಮೊದಲ ಪುಟದಿಂದ) ನಿರ್ಮಿಸಲಾಗಿದೆ. ಆಯಾಯ ಸಂಸ್ಥೆಗಳಿಗೆ ಮಳಿಗೆಗಳನ್ನು ಹಂಚಲಿದ್ದು, ಅಲ್ಲಿ ಅವುಗಳು ತಾವು ಸಿದ್ಧಪಡಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಾಡಲಿವೆ.

೨೩ ಸಂಸ್ಥೆಗಳು ಭಾಗಿ: ಇದೇ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ ಕಾಫಿ ಉತ್ಸವದಲ್ಲಿ ಕೊಡಗು ಜಿಲ್ಲೆ ಸೇರಿದಂತೆ ರಾಷ್ಟçದ ವಿವಿಧ ಭಾಗಗಳಿಂದ ಒಟ್ಟು ೨೩ ಸಂಸ್ಥೆಗಳು ನೋಂದಾಯಿಸಿಕೊAಡಿವೆ. ಮಡಿಕೇರಿಯ ಶರ್ಮಾ ಕಾಫಿ, ಬಿಗ್ ಕಪ್, ಕಿಂಬರ್ಲಿ, ಕುಶಾಲನಗರದ ಡಿಕ್ಸನ್, ಎಸ್‌ಎಲ್‌ಎನ್, ಜಿಲಾನಿ, ೧೮೫೪, ಚೇರಂಬಾಣೆಯ ಮಹಿಳಾ ಸಂಘ, ಗೋಣಿಕೊಪ್ಪದ ರಶ್ಮಿ, ಬೆಂಗಳೂರಿನ ಕೋಥಾಸ್, ಹಾಲ್ ಮಾರ್ಕ್ಸ್, ಚಿಕ್ಕಮಗಳೂರಿನ ೧೯೫೨ ಸೇರಿದಂತೆ ಒಟ್ಟು ೨೩ ಸಂಸ್ಥೆಗಳು ಭಾಗವಹಿಸಲಿವೆ ಎಂದು ಕಾಫಿ ಮಂಡಳಿ ಉಪನಿರ್ದೇಶಕ ಚಂದ್ರಶೇಖರ್ ಹಾಗೂ ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಪ್ರಮೋದ್ ಮಾಹಿತಿ ನೀಡಿದ್ದಾರೆ.

ಸಂಜೆ ೪ ಗಂಟೆಗೆ ಆರಂಭ

ಕಾಫಿ ಉತ್ಸವ ತಾ. ೧೦ ರಂದು (ಇಂದು) ಸಂಜೆ ೪ ಗಂಟೆಗೆ ಆರಂಭಗೊಳ್ಳಲಿದೆ. ರಾಜಾಸೀಟಿನಲ್ಲಿ ಜಿಲ್ಲೆಯ ಶಾಸಕರುಗಳು, ನಿಗಮ ಮಂಡಳಿ ಅಧ್ಯಕ್ಷರುಗಳು, ನಗರದ ಜನಪ್ರತಿನಿಧಿಗಳು ಉತ್ಸವವನ್ನು ಉದ್ಘಾಟಿಸಲಿದ್ದಾರೆ.

ಒಟ್ಟಿನಲ್ಲಿ ಜಿಲ್ಲೆಯ ಪ್ರಮುಖ ಬೆಳೆ ಹಾಗೂ ಬೆಳೆಗಾರರ ಸಂರಕ್ಷಣೆ ಹಾಗೂ ಉತ್ತೇಜನಕೋಸ್ಕರ ಏರ್ಪಡಿಸಲಾಗಿರುವ ಈ ಕಾಫಿ ಉತ್ಸವದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ಸುಗೊಳಿಸಿದಲ್ಲಿ ಕಾಫಿ ಉದ್ಯಮದಲ್ಲಿ ಭವಿಷ್ಯ ಕಾಣಬಹುದು.

? ಕುಡೆಕಲ್ ಸಂತೋಷ್