ಮಡಿಕೇರಿ, ಡಿ. ೧೦: ಕೊಡಗು ಜಿಲ್ಲಾ ಬಂಟರ ಸಂಘ ಮೂರ್ನಾಡು ಘಟಕದ ವತಿಯಿಂದ ಜಿಲ್ಲಾ ಮಟ್ಟದ ೭ನೇ ವರ್ಷದ ಬಂಟರ ವಾರ್ಷಿಕ ಕ್ರೀಡೋತ್ಸವ ನಡೆಯಲಿದೆ ಎಂದು ಅಧ್ಯಕ್ಷ ಬಿ.ಕೆ. ಚಂದ್ರಶೇಖರ್ ರೈ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಡು ಪ್ರೌಢಶಾಲಾ ಮೈದಾನದಲ್ಲಿ ಫೆಬ್ರವರಿ ೨೫ ಹಾಗೂ ೨೬ ರಂದು ವಿವಿಧ ಪಂದ್ಯಾಟಗಳು ನಡೆಯಲಿವೆ. ಈ ಬಾರಿ ಹೋಬಳಿ ಮಟ್ಟದ ತಂಡಗಳು ಭಾಗವಹಿಸಲು ಅವಕಾಶ ಮಾಡಿಕೊಡ ಲಾಗಿದೆ. ಹೋಬಳಿಯಿಂದ ಎಷ್ಟು ಬೇಕಾದರು ತಂಡಗಳು ಭಾಗವಹಿಸ ಬಹುದಾಗಿದೆ. ಕ್ರಿಕೆಟ್, ಹಗ್ಗಜಗ್ಗಾಟ, ಲಕ್ಕಿ ಸರ್ಕಲ್, ಲೆಮೆನ್ ಆ್ಯಂಡ್ ಸ್ಪೂನ್, ಮ್ಯೂಸಿಕಲ್ ಚೇರ್, ವಯಸ್ಕರಿಗೆ ಓಟ, ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳು, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟ ನಡೆಯಲಿದೆ ಎಂದರು.

ಜ. ೧೦ ರೊಳಗೆ ತಂಡಗಳನ್ನು ನೋಂದಾಯಿಸಿಕೊಳ್ಳಬೇಕಾಗಿದೆ. ಹೆಚ್ಚಿನ ಮಾಹಿತಿಗೆ ೮೦೯೫೫೭೩೮೦೮ ಸಂಖ್ಯೆಯನ್ನು ಸಂಪರ್ಕಿಸಲು ಕೋರಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಟಿ.ಎನ್. ಜಯರಾಂ ರೈ, ಮಹಿಳಾ ಘಟಕದ ಅಧ್ಯಕ್ಷೆ ಬಿ.ಬಿ. ಜಯಂತಿ, ಸದಸ್ಯರುಗಳಾದ ಬಿ.ಎಸ್. ಕುಶನ್ ರೈ, ಬಿ.ಎಸ್. ಅರುಣ್ ರೈ, ಸುಬ್ಬಣ್ಣ ರೈ ಹಾಜರಿದ್ದರು.