ಗೋಣಿಕೊಪ್ಪ ವರದಿ, ಡಿ. ೯: ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಇಂಡಿಯನ್ ಯುವಕ ಸಂಘ ಮತ್ತು ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ ಸಹಯೋಗದಲ್ಲಿ ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಏಳು ವಿಭಾಗಗಳಲ್ಲಿ ಕುಶಾಲನಗರದ ಕೇಡನ ಎಸ್. ಪ್ರಗತಿ ಪ್ರಥಮ ಸ್ಥಾನ ಗಿಟ್ಟಿಸಿಕೊಂಡರು.
ಕೊಳಲು, ತಬಲ, ಭರತನಾಟ್ಯ, ಒಡಿಸಿ, ಮಣಿಪುರಿ, ಕುಚುಪುಡಿ ಹಾಗೂ ಗಿಟಾರ್ ವಿಭಾಗಗಳಲ್ಲಿ ಸಾಧನೆ ಮಾಡಿದರು. ಪ್ರಥಮ ಸ್ಥಾನ ಪಡೆದ ತಂಡಗಳು ಡಿಸೆಂಬರ್ ೧೬ ರಿಂದ ಚಿಕ್ಕಮಗಳೂರಿನಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಪ್ರವೇಶ ಪಡೆದವು.
ಫಲಿತಾಂಶ: ಜನಪದ ನೃತ್ಯದಲ್ಲಿ ಪೊನ್ನಂಪೇಟೆ ನಿಸರ್ಗ ಯುವತಿ ಮಂಡಳಿ (ಪ್ರ), ಸೋಮವಾರಪೇಟೆ ಡಾ. ಬಿ. ಆರ್. ಅಂಬೇಡ್ಕರ್ ವಸತಿ ಶಾಲೆ (ದ್ವಿ), ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ (ತೃ). ಜನಪದ ಗೀತೆಯಲ್ಲಿ ಸೋಮವಾರಪೇಟೆ ಗಂಧರ್ವ ಯುವಕ ಸಂಘ (ಪ್ರ), ನಿಸರ್ಗ ಯುವತಿ ಮಂಡಳಿ (ದ್ವಿ), ಪೊನ್ನಂಪೇಟೆಯ ದಿಕ್ಸಿತಾ ತಂಡ (ತೃ), ಏಕಾಂಗ ನಾಟಕದಲ್ಲಿ ಲಕ್ಷಿö್ಮ (ಪ್ರ), ಮೊರಾರ್ಜಿ ಶಾಲೆ (ದ್ವಿ), ಕುಶಾಲನಗರದ ಪ್ರಗತಿ (ತೃ). ಶಾಸ್ತ್ರೀಯ ಗಾಯನದಲ್ಲಿ ಸೌಮ್ಯ ನಾಗೇಶ್ (ಪ್ರ), ವಿ. ಧನುಶ್ರೀ (ದ್ವಿ) ಪಂಚಮಿ ನಾಗರಾಜ್ (ತೃ). ಮೃದಂಗದಲ್ಲಿ ಎನ್. ಎಸ್. ಚಂದನ್, ಭರತನಾಟ್ಯದಲ್ಲಿ ಹರ್ಸಿನಿ ಪ್ರದೀಪ್ (ದ್ವಿ), ಕುಚುಪುಡಿಯಲ್ಲಿ ಎಸ್. ನೌಸಿದಾ (ದ್ವಿ), ಕಥಕ್‌ನಲ್ಲಿ ಲಿದೀನ ಸುಹಾಸ್ (ಪ್ರ), ಹಾರ್ಮೋನಿಯಂ ನಲ್ಲಿ ಯು. ಎ. ಲೋಹಿತ್ (ಪ್ರ), ಅಶುಭಾಷಣದಲ್ಲಿ ಗೀತಾ ನಾಯ್ಡು (ಪ್ರ), ಐ. ಟಿ. ಸುಸ್ಮಿತಾ (ಪ್ರ), ಕೆ. ರಮೇಶ್ (ದ್ವಿ) ಸ್ಥಾನ ಪಡೆದುಕೊಂಡರು.
ಶೌರ್ಯ ಪ್ರಶಸ್ತಿ ಪುರಸ್ಕೃತ ನಮೃತಾ, ಸಮಾಜ ಸೇವಕ ರಾಮಕೃಷ್ಣ ಅವರುಗಳನ್ನು ಸನ್ಮಾನಿಸಲಾಯಿತು. ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ. ಪಿ. ಸುಕುಮಾರ, ಶಾಲೆಯ ಉಪ ಪ್ರಾಂಶುಪಾಲ ಚಂಗಪ್ಪ, ಪೊನ್ನಂಪೇಟೆ ಗಾ.ಪಂ. ಅಭಿವೃದ್ಧಿ ಅಧಿಕಾರಿ ಪುಟ್ಟರಾಜು, ಸದಸ್ಯ ಮೂಕಳೇರ ಮಧು ಕುಮಾರ್, ಪೊನ್ನಂಪೇಟೆ ಕಾರ್ಯದರ್ಶಿ ಕೋಟೇರ ಕಿಶನ್, ನಿಸರ್ಗ ಯುವತಿ ಮಂಡಳಿ ಅಧ್ಯಕ್ಷೆ ರೇಖಾ ಶ್ರೀಧರ್, ತಾಲೂಕು ಯುವ ಒಕ್ಕೂಟ ಅಧ್ಯಕ್ಷೆ ಶೀಲಾ ಬೋಪಣ್ಣ ಬಹುಮಾನ ವಿತರಿಸಿದರು.