ವೀರಾಜಪೇಟೆ, ಡಿ. ೧೦: ಉದಯೋನ್ಮುಖ ಆಟಗಾರರನ್ನು ಗುರುತಿಸುವುದೇ ಕ್ರೀಡಾಕೂಟಗಳು. ಕ್ರೀಡಾಪಟುಗಳು ಉತ್ತಮವಾದ ಪ್ರದರ್ಶನ ನೀಡುವುದರೊಂದಿಗೆ ವಿವಿಧ ತಂಡಗಳಲ್ಲಿ ಸ್ಥಾನಪಡೆದುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಂರ‍್ರಾಷ್ಟಿçÃಯ ರಗ್ಬಿ ಪಟು ಮಾದಂಡ ತಿಮ್ಮಯ್ಯ ಅವರು ಅಭಿಪ್ರಾಯಪಟ್ಟರು.

ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘ, ಸಂತ ಅನ್ನಮ್ಮ ದೇವಾಲಯ ವೀರಾಜಪೇಟೆ ಆಶ್ರಯದಲ್ಲಿ ನಡೆದ ೧೧ನೇ ವರ್ಷ ವಾರ್ಷಿಕೋತ್ಸವದ ಅಂಗವಾಗಿ ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಮುಕ್ತ ಸೂಪರ್ ಸೆವನ್ ಕಾಲ್ಚೆಂಡು ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಆಗಮಿಸಿ ಮಾತನಾಡಿದ ರಗ್ಬಿ ಪಟು ಮಾದಂಡ ತಿಮ್ಮಯ್ಯ ಅವರು, ಕೊಡಗು ಕ್ರೀಡಾಕಲಿಗಳ ಬೀಡಾಗಿದೆ. ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಕಾಲ್ಚೆಂಡು ಪಂದ್ಯಾಟಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸಿಕೊಂಡು ಬರುತ್ತಿದ್ದು ಕಾಲ್ಚೆಂಡು ಪಂದ್ಯಾಟಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕುವಂತಾಗಿದೆ. ಗ್ರಾಮೀಣ ಭಾಗದಲ್ಲಿ ಚಾಕಚಕ್ಯತೆ ಹೊಂದಿರುವ ಕ್ರೀಡಾಪಟುಗಳಿದ್ದು, ಕ್ರೀಡಾಕೂಟಗಳಲ್ಲಿ ಪ್ರತಿಭೆಯನ್ನು ಅನಾವರಣ ಮಾಡಿದ್ದಲ್ಲಿ ಪ್ರತಿಷ್ಠಿತ ತಂಡಗಳಲ್ಲಿ ಸ್ಥಾನಗಿಟ್ಟಸಿಕೊಳ್ಳಲು ಹೆಚ್ಚು ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘವು ಪಂದ್ಯಾಟವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮ ಉದ್ದೇಶಿಸಿ ಸಹಾಯಕ ಧರ್ಮಗುರುಗಳು ಸಂತ ಅನ್ನಮ್ಮ ದೇವಾಲಯ ರೆ.ಫಾ. ಯೇಸು ಪ್ರಸಾದ್ ಅವರು ಮಾತನಾಡಿದರು.

ಸಂತ ಅನ್ನಮ್ಮ ದೇವಾಲಯದ ಪಾಲನ ಸಮಿತಿಯ ಸದಸ್ಯ ಬೆನಡಿಕ್ಟ್ ಸಾಲ್ಡಾನ ಮತ್ತು ನಿವೃತ್ತ ಶಿಕ್ಷಕರಾದ ಆಲ್ಬರ್ಟ್ ಡಿ.ಸೋಜ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘದ ಅಧ್ಯಕ್ಷ ಇ.ಪಿ. ನೆಲ್ಸನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಪೊನ್ನಂಪೇಟೆ ಗುತ್ತಿಗೆದಾರರಾದ ರಾಬಿನ್, ಪುರಸಭೆಯ ಸದಸ್ಯರಾದ ಬೆನ್ನಿ ಅಗಸ್ಟಿನ್, ಉದ್ಯಮಿಗಳಾದ ಚೋಪಿ ಜೋಸೆಫ್, ಸಂತ ಅನ್ನಮ್ಮ ವಿವಿದೋದ್ಧೇಶ ಸಹಕಾರ ಸಂಘದ ಅಧ್ಯಕ್ಷ ಮರ್ವಿನ್ ಲೋಬೋ, ಟ್ರೋಫಿ ದಾನಿಗಳಾದ ಎಗ್ನೀಸ್ ಬ್ರೀಟ್ಟೊ, ಉಪಸ್ಥಿತರಿದ್ದರು.

ಸಂಘದ ಸದಸ್ಯರಾದ ವರ್ಗೀಸ್ ಅವರು ಸರ್ವರನ್ನು ಸ್ವಾಗತಿಸಿದರು ಉಪನ್ಯಾಸಕರಾದ ಚಾರ್ಲ್ಸ್ ಡಿಸೋಜಾ ಅವರು ಕಾರ್ಯಕ್ರಮ ನಿರೂಪಿಸಿದರು.