ಮಡಿಕೇರಿ, ಡಿ. ೧೦: ಬಹುತೇಕ ಅಂಗನವಾಡಿ ಕೇಂದ್ರಗಳ ಜಾಗಗಳಿಗೆ ಮೂಲ ದಾಖಲಾತಿ ಇಲಾಖೆ ಹೆಸರಿನಲ್ಲಿ ಇಲ್ಲದೆ ಇರುವುದರಿಂದ ಹಲವಾರು ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಅಂಗನವಾಡಿ ಕೇಂದ್ರಗಳ ದಾಖಲಾತಿ ಆರ್.ಟಿ.ಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅಭಿಯಾನ ಕೈಗೊಳ್ಳಲಾಗಿದೆ. ಪ್ರಾರಂಭಿಕ ಹಂತವಾಗಿ ಮಡಿಕೇರಿ ತಾಲೂಕಿನ ರಾಜೇಶ್ವರಿ ನಗರ ಅಂಗನವಾಡಿ ಕೇಂದ್ರದಲ್ಲಿ ಚಾಲನೆ ನೀಡಲಾಗಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸಿ.ಪಿ. ಸವಿತ ತಿಳಿಸಿದ್ದಾರೆ.

ಅಂಗನವಾಡಿ ಹದ್ದುಬಸ್ತ್ ಸಂಕೇತವಾಗಿ ಕೆಂಪು ಬಣ್ಣದ ಕಲ್ಲಿನ ವರ್ಲಿಆರ್ಟ್ ಮಾದರಿಯ ಕಲ್ಲುನೆಡಲಾಗಿದೆ. ಈ ಸಂದರ್ಭ ಬಾಲವಿಕಾಸ ಸಮಿತಿಯ ಅಧ್ಯಕ್ಷೆ ಸಕೀನಾ, ನಗರಸಭಾ ಸದಸ್ಯ ಮನ್ಸೂರ್ ಆಲಿ, ಅಂಗನವಾಡಿ ಕಾರ್ಯಕರ್ತೆ ಇಂದಿರಾ ಉಪನಿರ್ದೇಶಕ ಮಂಜುನಾಥ್, ಕಾರ್ಯಕರ್ತೆ ಸುಮಿತ್ರ, ಸಹಾಯಕಿ ವೀಣಾ ಸೇರಿದಂತೆ ಮತ್ತಿತರರು ಹಾಜರಿದ್ದರು.