ಕುಶಾಲನಗರ, ಡಿ.೮: ಭಾರತದ ಸೆಸ್ಟೋ ಬಾಲ್‌ನ ಉಪನಾಯಕ ಸಾಹಿಲ್ ಉಸ್ಮಾನ್ ಹಾಗೂ ಸೆಸ್ಟೋಬಾಲ್ ಆಟಗಾರ್ತಿ ನಂದಿನಿಯವರಿಗೆ ಕುಶಾಲನಗರದಲ್ಲಿ ಸ್ಥಳೀಯರು ಭವ್ಯ ಸ್ವಾಗತವನ್ನು ನೀಡಿದರು.

ಬ್ಯಾಂಕಾಕ್‌ನಲ್ಲಿ ನಡೆದ ಅಂತರರಾಷ್ಟಿçÃಯ ಸೆಸ್ಟೋ ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಸಾಹಿಲ್ ಉಸ್ಮಾನ್ ಹಾಗೂ ನಂದಿನಿ ಭಾಗವಹಿಸಿದ್ದರು. ಎಂಟು ರಾಷ್ಟçಗಳ ಪೈಕಿ, ಭಾರತ ದೇಶ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಥೈಲ್ಯಾಂಡ್‌ನಿAದ ಭಾರತಕ್ಕೆ ಮರಳಿದ, ಕೊಡಗಿನ ಕ್ರೀಡಾ ಪಟುಗಳನ್ನು ಕುಶಾಲನಗರದಲ್ಲಿ ಸ್ಥಳೀಯ ನಾಗರಿಕರು ಗೌರವಿಸಿ ಸನ್ಮಾನಿಸಿದರು.

ಈ ಸಂದರ್ಭ ಕುಶಾಲನಗರದ ಕಾರ್ಯಪ್ಪ ವೃತ್ತದಲ್ಲಿ ಮಾತನಾಡಿದ ಸಾಹಿಲ್ ಉಸ್ಮಾನ್ ಹಾಗೂ ನಂದಿನಿ, ಸೆಸ್ಟೋಬಾಲ್‌ನಲ್ಲಿ ಕೊಡಗಿನವರಾಗಿ ಭಾರತವನ್ನು ಪ್ರತಿನಿಧಿಸಿರುವುದು ಹೆಮ್ಮೆಯಾಗುತ್ತಿದೆ ಎಂದರು.

ಸುAಟಿಕೊಪ್ಪದ ಉಸ್ಮಾನ್ ಅವರ ಪುತ್ರ ಸಾಹಿಲ್ ಕರ್ನಾಟಕದ ಸೆಸ್ಟೋ ಬಾಲ್ ನಾಯಕ ಹಾಗೂ ಭಾರತದ ಉಪ ನಾಯಕನಾಗಿದ್ದಾರೆ. ಚೆಟ್ಟಳ್ಳಿಯ ವಾಸು ಮತ್ತು ಪುಷ್ಪ ದಂಪತಿ ಪುತ್ರಿ ನಂದಿನಿಯವರು ಮಹಿಳಾ ವಿಭಾಗದ ಸೆಸ್ಟೋ ಬಾಲ್ ಆಟಗಾರ್ತಿಯಾಗಿ ಭಾಗವಹಿಸಿದ್ದರು.