ಗೋಣಿಕೊಪ್ಪ ವರದಿ, ಡಿ. ೮: ಪೊನ್ನಂಪೇಟೆ ವಕೀಲರ ಸಂಘದ ವತಿಯಿಂದ ವಕೀಲರ ದಿನಾಚರಣೆ ಏರ್ಪಡಿಸಲಾಗಿತ್ತು. ಹಿರಿಯ ಸಿವಿಲ್ ನ್ಯಾಯಾಧೀಶ ಲೋಕೇಶ್ ಉದ್ಘಾಟಿಸಿ ಮಾತನಾಡಿ, ವಕೀಲರು ಹೆಚ್ಚು ಓದುವುದರಿಂದ ಜ್ಞಾನ ವೃದ್ಧಿಯಾಗುತ್ತದೆ. ಇದು ಸಮಾಜಕ್ಕೆ ನ್ಯಾಯ ಒದಗಿಸಲು ಸಾಧ್ಯವಾಗುತ್ತದೆ.

ದೇಶದಲ್ಲಿ ನ್ಯಾಯ ಒದಗಿಸಲು ವಕೀಲರ ಕಾಣಿಕೆ ದೊಡ್ಡದು ಎಂದರು.

ಪೊನ್ನಂಪೇಟೆ ಸಿವಿಲ್ ನ್ಯಾಯಾಧೀಶೆ ಕೆ. ಆಶಾ ಮಾತನಾಡಿ, ನಿಷ್ಠೆಯಿಂದ ವಕೀಲ ವೃತ್ತಿ ನಿಭಾಯಿಸುವುದರಿಂದ ಸಮಾಜದಲ್ಲಿ ಗೌರವ, ನಂಬಿಕೆ ಹೆಚ್ಚುತ್ತದೆ. ನ್ಯಾಯಾಂಗದ ಮೇಲೆ ಗೌರವ ಹೆಚ್ಚುತ್ತದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಕಳಕಂಡ ಮುತ್ತಪ್ಪ ಮಾತನಾಡಿ, ವಕೀಲರು ನಿರ್ಲಕ್ಷö್ಯಕ್ಕೆ ಒಳಗಾಗದೆ ಸಮಸ್ಯೆ ಬಗೆಹರಿಸಲು ವೃತ್ತಿಯನ್ನು ಬಳಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು. ಕಾರ್ಯದರ್ಶಿ ಅಜ್ಜಮಾಡ ಮೋನಿ ಪೊನ್ನಪ್ಪ ಇದ್ದರು.