ಚೆಟ್ಟಳ್ಳಿ, ಡಿ. ೮: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಚೆಟ್ಟಳ್ಳಿ ಹಾಗೂ ಕೆಮಿಕಲ್ಸ್ ಮತ್ತು ಫರ್ಟಿಲರ‍್ಸ್ ಲಿಮಿಟೆಡ್ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಪೂರ್ವಾಹ್ನ ೧೦.೩೦ ಗಂಟೆಗೆ ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ರೈತ ಸಹಕಾರ ಭವನದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ವಿಶ್ವ ಮಣ್ಣು ದಿನಾಚರಣಾ ಕಾರ್ಯಕ್ರಮ ನೆರವೇರಿತು.

ರೈತರಿಗೆ ಅನುಕೂಲವಾಗುವಂತೆ ಚೆಟ್ಟಳ್ಳಿ ಸಹಕಾರ ಸಂಘದಲ್ಲಿ ಮಣ್ಣು ಪರೀಕ್ಷಾ ಕೇಂದ್ರವನ್ನು ಪ್ರಾರಂಭಿಸ ಲಾಗಿದೆ. ಮಣ್ಣಿನ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಮಣ್ಣನ್ನು ಭೂಮಿತಾಯಿ ಎಂದು ಕಾಪಾಡುವುದು ನಮ್ಮೆಲ್ಲರ ಹೊಣೆ ಯಾಗಿದೆ. ರಾಸಾಯನಿಕ ಬಳಕೆ ಯನ್ನು ಕಡಿಮೆ ಮಾಡಬೇಕೆಂದು ಬಲ್ಲಾರಂಡ ಮಣಿ ಉತ್ತಪ್ಪ ತಿಳಿಸಿದರು.

ಅತಿಥಿಗಳಾಗಿ ಚೆಟ್ಟಳ್ಳಿ ಕೇಂದ್ರಿಯ ತೋಟಗಾರಿಕಾ ಪ್ರಯೋಗ ಕೇಂದ್ರ ಮೇಲ್ವಿಚಾರಕ ಡಾ. ರಾಜೇಂದ್ರನ್ ಎಸ್. ಮಾತನಾಡಿ, ಪ್ರತಿ ಮೂರು ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆ ಮಾಡುವ ಮೂಲಕ ವಿವಿಧ ಬೆಳೆಗಳಿಗೆ ಸೂಕ್ತ ಪೌಷ್ಟಿಕಾಂಶಗಳನ್ನು ನೀಡುವ ಮೂಲಕ ಅಧಿಕ ಇಳುವರಿ ಪಡೆಯಬೇಕೆಂದರು.

ಕೇAದ್ರಿಯ ತೋಟಗಾರಿಕಾ ಪ್ರಯೋಗ ಕೇಂದ್ರ ಚೆಟ್ಟಳ್ಳಿಯ ವಿಜ್ಞಾನಿ ಡಾ. ಮಧು ಜಿ.ಎಸ್, ಮಾತನಾಡಿ ಸೂಕ್ತ ರಕ್ಷಣೆ ಹಾಗೂ ವಿವಿಧ ಪೋಷಕಾಂಶಯುಕ್ತ ಗೊಬ್ಬರಗಳನ್ನು ಸಕಾಲದಲ್ಲಿ ಕರಿಮೆಣಸು ಬಳ್ಳಿಗೆ ಬಳಸುವ ಮೂಲಕ ಅಧಿಕ ಇಳುವರಿ ಹಾಗೂ ಬಳ್ಳಿಗಳ ರಕ್ಷಣೆ ಮಾಡಬೇಕೆಂದರು. ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲರ‍್ಸ್ ಲಿಮಿಟೆಡ್ ನ ಮಾರ್ಕೆಟಿಂಗ್ ಡೆಪ್ಯೂಟಿ ಮ್ಯಾನೇಜರ್ ಧೃತಿರಾಜ್ ಬಿ.ಎಸ್ ಮಾತನಾಡಿ ವಿವಿಧ ಸೂಕ್ತ ಗೊಬ್ಬರಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಕಣಜಾಲು ಪೂವಯ್ಯ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನಂದಿನಿ, ಸಂಘದ ನಿರ್ದೇಶಕರುಗಳು ರೈತರು ಭಾಗವಹಿಸಿದ್ದರು.