ಕುಶಾಲನಗರ, ಡಿ. ೮ : ಕುಶಾಲನಗರದಲ್ಲಿ ಅದ್ಧೂರಿಯಾಗಿ ನಡೆದ ಹನುಮ ಜಯಂತ್ಯೋತ್ಸವ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಹೆಚ್‌ಆರ್‌ಪಿ ಕಾಲೋನಿಯ ಶ್ರೀ ರಾಮ ಮಂದಿರದ ಹಿಂದೂ ಜಾಗರಣಾ ವೇದಿಕೆ, ಅಂಜನಿ ಪುತ್ರ ಜಯಂತ್ಯೋತ್ಸವ ಸಮಿತಿ ಮಂಟಪ ಪ್ರಥಮ ಬಹುಮಾನ ಗಳಿಸಿದೆ. ದ್ವಿತೀಯ ಬಹುಮಾನವನ್ನು ಬೈಚನಹಳ್ಳಿ ಶ್ರೀ ಮಾರಿಯಮ್ಮ ದೇವಸ್ಥಾನ ಸಮಿತಿ ಮತ್ತು ಗೆಳೆಯರ ಬಳಗದ ಮಂಟಪ ತನ್ನದಾಗಿಸಿಕೊಂಡಿದೆ.ಮೂರನೇ ಬಹುಮಾನವನ್ನು ಗುಡ್ಡೆಹೊಸೂರು ಶ್ರೀ ವೀರಾಂಜನೇಯ ಸೇವಾ ಸಮಿತಿ ಹಾಗೂ ವಿಶ್ವ ಹಿಂದೂ ಪರಿಷತ್, ಭಜರಂಗದಳದ ಮಂಟಪ ಪಡೆಯಿತು.
ಪ್ರಥಮ ಬಹುಮಾನ ೧೫ ಸಾವಿರ ರೂ. ಮತ್ತು ಪಂಚಲೋಹದ ಆಂಜನೇಯ ವಿಗ್ರಹ, ದ್ವಿತೀಯ ಬಹುಮಾನ ರೂ.೧೦ ಸಾವಿರ, ತೃತೀಯ ಬಹುಮಾನರೂ. ೭,೫೦೦ ಹಾಗೂ ನಾಲ್ಕು ಸಮಾಧಾನಕರ ಬಹುಮಾನ ರೂ. ೫ ಸಾವಿರ ಮತ್ತು ಸ್ಮರಣಿಕೆಗಳನ್ನು ವಿತರಿಸಲಾಯಿತು.
ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಬಿ ಭಾರತೀಶ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ್, ಗಣಪತಿ ದೇವಾಲಯ ಸೇವಾಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಮಂಟಪದ ಪದಾಧಿಕಾರಿಗಳಿಗೆ ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಶಿಕ್ಷಣಾಧಿಕಾರಿ ಕೆ.ವಿ ಸುರೇಶ್, ಉದ್ಯಮಿಗಳಾದ ಬಿ.ಆರ್ ನಾಗೇಂದ್ರಪ್ರಸಾದ್, ಕರಂದ್ಲಾಜೆ ಆನಂದ್, ಎಸ್.ಕೆ ಸತೀಶ್, ನಾಗೇಂದ್ರ, ಶಿಕ್ಷಕರುಗಳಾದ ಗಾಯತ್ರಿ, ಚೇತನ್, ಪುಷ್ಪ, ಪತ್ರಕರ್ತಎಂ.ಎನ್. ಚಂದ್ರಮೋಹನ್ ಕಾರ್ಯನಿರ್ವಹಿಸಿದರು. ಹನುಮ ಜಯಂತಿ ದಶಮಂಟಪಗಳ ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್ ದೇವರಾಜ್, ಖಜಾಂಚಿ ವಿಶ್ವಗಿರಿ, ಸಲಹೆಗಾರರಾದ ಅಮೃತ್‌ರಾಜ್, ಜನಾರ್ಧನ್ ಮತ್ತಿತರರು ಇದ್ದರು.