ಶನಿವಾರಸAತೆ, ಡಿ. ೮: ಪಟ್ಟಣದ ವಿಘ್ನೇಶ್ವರ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆಯಲಿದ್ದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮಸಭೆಯನ್ನು ಗ್ರಾಮಸ್ಥರು ಹಾಗೂ ಅಧಿಕಾರಿಗಳ ಗೈರು ಹಾಜರಿಯ ಹಿನ್ನೆಲೆ ಮುಂದೂಡುವAತೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಹೊರಬಂದು ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಗ್ರಾಮದ ಮುಖಂಡರಾದ ರಕ್ಷಿತ್, ಕೆ.ಟಿ. ಹರೀಶ್, ಪ್ರಸಾದ್, ಪ್ರಣೀತ್, ಬೂದನೂರ್ ಧರ್ಮಪ್ಪ, ಮುತ್ತೇಗೌಡ, ಸುಬ್ರಮಣ್ಯ ಅವರು ಗ್ರಾಮಸ್ಥರು ಹಾಗೂ ಅಧಿಕಾರಿಗಳ ಗೈರುಹಾಜರಿಯನ್ನು ಗಂಭೀರವಾಗಿ ಪರಿಗಣಿಸಿ, ಕರಪತ್ರ ಹಂಚಲಿಲ್ಲ, ಚೆನ್ನಾಗಿ ಪ್ರಚಾರ ನಡೆಯಲಿಲ್ಲ. ಸೆಪ್ಟೆಂಬರ್- ಅಕ್ಟೋಬರ್ ತಿಂಗಳಲ್ಲಿ ನಡೆಸಬೇಕಿದ್ದ ಗ್ರಾಮಸಭೆಯನ್ನು ಡಿಸೆಂಬರ್ ಮೊದಲ ವಾರ ಕಾಫಿ ಮತ್ತು ಭತ್ತದ ಕೊಯ್ಲು ನಡೆಯುತ್ತಿರುವ ಸಮಯದಲ್ಲಿ ನಡೆಸುವುದು ತಪ್ಪು ಎಂದು ಆರೋಪಿಸಿ ಸಭೆಯನ್ನು ಮುಂದೂಡುವAತೆ ಆಗ್ರಹಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೇಂದ್ರ ಗಲಾಟೆ ನಡುವೆಯೇ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಹೇಳಲಾರಂಭಿಸುತ್ತಿದ್ದAತೆ ವಿರೋಧಿಸಿದ ಮುಖಂಡರ ಜೊತೆ ಪಂಚಾಯಿತಿ ಸದಸ್ಯರಾದ ಡಿ.ಪಿ. ಬೋಜಪ್ಪ ಮತ್ತು ದೇವರಾಜ್ ವೇದಿಕೆಯಿಂದ ಇಳಿದು ಹೊರಬಂದು ಧಿಕ್ಕಾರ ಕೂಗಿ ಪ್ರತಿಭಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್ ಮಾತನಾಡಿ, ಗ್ರಾಮಾಭಿವೃದ್ಧಿ, ಗ್ರಾಮ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾಗಿದ್ದ ಸಭೆಯಲ್ಲಿ ಗ್ರಾಮಸ್ಥರ, ಅಧಿಕಾರಿಗಳ ಗೈರುಹಾಜರಿಯನ್ನೇ ಮುಂದಿಟ್ಟು ಜಗಳ ತೆಗೆಯುವುದು ಸರಿಯಲ್ಲ. ಗ್ರಾಮಸಭೆ ನಡೆಯದೇ ಕ್ರಿಯಾ ಯೋಜನೆ ಮಾಡಲು ಸಾಧ್ಯವಿಲ್ಲ. ಪ್ರಚಾರ ಮಾಡಿದರೂ ಜನ ಬಾರದಿದ್ದರೆ ಪಂಚಾಯಿತಿ ಹೊಣೆಯಲ್ಲ. ಬೈಲಾ ನಿಯಮವಿದೆ. ಮುಂದೂಡಿರುವ ಗ್ರಾಮಸಭೆಯನ್ನು ಮುಂದಿನ ಜನವರಿಯಲ್ಲಿ ನಡೆಸಲಾಗುವುದು ಎಂದರು.
ನೋಡೆಲ್ ಅಧಿಕಾರಿ ಅಕ್ಷರ ದಾಸೋಹ ತಾಲೂಕು ನಿರ್ದೇಶಕ ಕಾಳನಾಯಕ್, ಮುಖಂಡರಾದ ಸರೋಜಮ್ಮ, ಪಂಚಾಯಿತಿ ಉಪಾಧ್ಯಕ್ಷ ನಿತಿನ್, ಸದಸ್ಯರು, ಸಿಬ್ಬಂದಿ ಹಾಜರಿದ್ದರು.