ಶ್ರೀಮಂಗಲ: ಬಾಡಗರಕೇರಿಯ ಇತಿಹಾಸ ಪ್ರಸಿದ್ಧ ಮೃತ್ಯುಂಜಯ ದೇವಸ್ಥಾನದಲ್ಲಿ ಪುತ್ತರಿ ಹಬ್ಬದ ಪ್ರಯುಕ್ತ ದೇವ ಕದಿರು ತೆಗೆಯುವ ಪದ್ಧತಿಯನ್ನು ತಕ್ಕ ಮುಖ್ಯಸ್ಥರು ಮತ್ತು ದೇವಸ್ಥಾನ ಆಡಳಿತ ಮಂಡಳಿ ನೇತೃತ್ವದಲ್ಲಿ ಗ್ರಾಮಸ್ಥರು ಸಾಂಪ್ರದಾಯಿಕವಾಗಿ ಆಚರಿಸಿದರು.

ದೇವಸ್ಥಾನದಿಂದ ತಳಿಯತಕ್ಕಿ ಬೊಳಕ್, ಒಡ್ಡೋಲಗ ಸಹಿತ ಮಲ್ಲೇಂಗಡ ಕುಟುಂಬಸ್ಥರ ಭತ್ತದ ಗದ್ದೆಗೆ ತೆರಳಿ ಕದಿರು ತೆಗೆದು ಪೊಲಿ ಪೊಲಿ ದೇವಾ... ಎಂಬ ಘೋಷದೊಂದಿಗೆ ನೂರಾರು ಗ್ರಾಮಸ್ಥರು ದೇವಸ್ಥಾನಕ್ಕೆ ಕದಿರು ತಂದರು.

ಕದಿರು ತರುವ ದಾರಿಯುದ್ದಕ್ಕೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭ ದೇವತಕ್ಕ ಅಣ್ಣೀರ ಕುಟುಂಬದ ದಾದ ಗಣಪತಿ, ನಾಡ್ ತಕ್ಕರಾದ ಕಾಯಪಂಡ ಕುಟುಂಬದ ಹಿರಿಯರಾದ ಅಯ್ಯಪ್ಪ, ಮಲ್ಲೇಂಗಡ ಉಮೇಶ್, ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಬಲ್ಯಮೀದೇರಿರ ಸುರೇಶ್, ಉಪಾಧ್ಯಕ್ಷ ಚೋನಿರ ಮಧು ಕಾರ್ಯಪ್ಪ, ಗೌರವ ಕಾರ್ಯದರ್ಶಿ ಅಣ್ಣೀರ ಪ್ರತೀಕ್ ಪೊನ್ನಣ್ಣ, ಆಡಳಿತ ಮಂಡಳಿ ಸದಸ್ಯರು, ದೇವಸ್ಥಾನದ ಹಿರಿಯ ಅರ್ಚಕರಾದ ಗಿರೀಶ್, ಹರೀಶ್ ಸೇರಿದಂತೆ ನೂರಾರು ಗ್ರಾಮಸ್ಥರು ಪಾಲ್ಗೊಂಡಿದ್ದರು.