ಮಡಿಕೇರಿ, ಡಿ. ೮: ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್‌ನಲ್ಲಿ ಪೊದುವಾಡ ಸಮೃದ್ಧ ಉತ್ತಯ್ಯ ಬೆಳ್ಳಿ ಪದಕ ಗೆದ್ದಿದ್ದಾರೆ. ಇವರು ಕೊಡಗು ಕಿಕ್ ಬಾಕ್ಸಿಂಗ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುದರ್ಶನ್ ಹಾಗೂ ತರಬೇತುದಾರ ಬಿ.ಎ.ಆನಂದ ಪೂಜಾರಿ ಅವರ ಮಾರ್ಗದರ್ಶನ ದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. ಪೊದುವಾಡ ಸುಜಯ್ ಹಾಗೂ ಕೃತಿಕಾ ದಂಪತಿಯ ಪುತ್ರನಾಗಿರುವ ಪೊದವಾಡ ಸಮೃದ್ಧ ಉತ್ತಯ್ಯ ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ.