ಮೈಸೂರು, ಡಿ. ೮: ನಗರದ ವಿದ್ಯಾರಣ್ಯಪುರಂ ಫಾರ್ಚೂನ್ ಶಟಲ್ಸ್'ನಲ್ಲಿ ಭಾನುವಾರ ಪಡುಕೋಣೆ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಹಮ್ಮಿಕೊಂಡ ೧೧ ವರ್ಷ ವಯೋಮಿತಿಯ ಪಿಎಸ್'ಎಂ ಜೂನಿಯರ್ ಓಪನ್ ಶೆಟಲ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮುಕ್ಕಾಟಿರ ಕನುಷಿ ಕಾವೇರಮ್ಮ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಈಕೆ ಮೂಲತಃ ಕೊಡಗು ಜಿಲ್ಲೆಯ ನಿಟ್ಟೂರು ಕಾರ್ಮಾಡ್ ನಿವಾಸಿ, ಪ್ರಸ್ತುತ ಮೈಸೂರಿನಲ್ಲಿ ನೆಲೆಸಿರುವ ಮುಕ್ಕಾಟಿರ ನಿತನ್ ಪೂಣಚ್ಚ - ನಿಲನ್ ಪೂಣಚ್ಚ ದಂಪತಿ ಪುತ್ರಿ. ನಿಲನ್ ಪೂಣಚ್ಚ ಭಾರತ ಹಾಕಿ ತಂಡದ ಮಾಜಿ ಗೋಲ್ ಕೀಪರ್ ಆಗಿದ್ದಾರೆ. ಕನುಷಿ ವಿಜಯನಗರದ ಸೆಂಟ್ ಜೋಸೆಫ್ ಸೆಂಟ್ರಲ್ ಸ್ಕೂಲ್'ನಲ್ಲಿ ೫ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.