ಮಡಿಕೇರಿ, ಡಿ. ೮: ಬೊಟ್ಟಿಯತ್‌ನಾಡ್, ಕುತ್ತ್ನಾಡ್ ಹಾಗೂ ಬೇರಳಿನಾಡ್ ಈ ಮೂರು ನಾಡುಗಳಿಗೆ ಸೇರಿದ ಇತಿಹಾಸ ಪ್ರಸಿದ್ಧ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ತಾ. ೯ ರಂದು (ಇಂದು) ನಡೆಯಲಿದೆ.
ಈ ಕುರಿತು ಮಾಹಿತಿ ನೀಡಿರುವ ಮೂರು ನಾಡಿನ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಸಂಬAಧ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಆಸಕ್ತ ತಂಡ ಸ್ಥಳದಲ್ಲಿಯೇ ತಮ್ಮ ಹೆಸರನ್ನು ನೀಡಬಹುದಾಗಿದೆ. ಬೆಳಿಗ್ಗೆ ೧೦.೩೦ ಗಂಟೆಗೆ ಮೂರು ನಾಡಿನವರ ಸಾಂಪ್ರದಾಯಿಕ ಪುತ್ತರಿ ಕೋಲಾಟ್ ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಹತ್ತನೇ ತರಗತಿಯ ಒಳಗೆ ಒಂದು ವಿಭಾಗ, ಪಿ.ಯು.ಸಿ ಹಾಗೂ ಪದವಿ ತರಗತಿ ಸೇರಿ ಮತ್ತೊಂದು ವಿಭಾಗ, ಹಾಗೂ ಜಿಲ್ಲೆಯ ವಿವಿಧ ಮಂದ್ ಅಥವಾ ಸಂಘ ಸಂಸ್ಥೆ, ಸಮಾಜಗಳು ಸೇರಿ ಸಾರ್ವಜನಿಕರ ಮೂರು ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಪರೆಯ ಕಳಿ, ಕಪ್ಪೆಯಾಟ್, ದುಡಿಕೊಟ್ಟ್ಪಾಟ್, (ವಾಲಗತಾಟ್, ಕೊಡವ ಪಾಟ್ ಪೈಪೋಟಿ ಸೇರಿದಂತೆ ಯರವ ಜನಾಂಗಕ್ಕಾಗಿ ಯರವಾಟ್ ಪೈಪೋಟಿಯೊಂದಿಗೆ ಚೀನಿ ದುಡಿಯನ್ನು ನುಡಿಸುವ ವಿಶೇಷ ಪೈಪೋಟಿಯನ್ನು ಏರ್ಪಡಿಸಲಾಗಿದ್ದು ಇದರ ಪರಿಕರವನ್ನು ಅವರೇ ತರಬೇಕು ಸಾರ್ವಜನಿಕರಿಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಬೊಟ್ಟಿಯತ್ ನಾಡಿಗೆ ಸೇರಿದ ಹಳ್ಳಿಗಟ್ಟು, ಹುದೂರು, ಈಚೂರು, ಕುಂದಾ, ಮುಗುಟಗೇರಿ, ಆರ್ವತೋಕ್ಲು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಕುತ್ತ್ ನಾಡಿಗೆ ಸೇರಿದ ಬಿ. ಶೆಟ್ಟಿಗೇರಿ, ಕೊಂಗಣ, ಸುತ್ತಮುತ್ತಲಿನ ಗ್ರಾಮಗಳು ಹಾಗೂ ಬೇರಳಿನಾಡಿಗೆ ಸೇರಿದ ವಿ. ಬಾಡಗ, ಕುಟ್ಟಂದಿ, ಕಂಡAಗಾಲ, ರುದ್ರಗುಪ್ಪೆ ಸೇರಿದಂತೆ ಸುತ್ತಮುತ್ತಲ ಗ್ರಾಮಗಳು ಈ ಕೈಮುಡಿಕೆ ಮಂದ್ ವ್ಯಾಪ್ತಿಗೆ ಸೇರಲಿದೆ ಎಂದು ಅವರು ತಿಳಿಸಿದ್ದಾರೆ.