ಸಿದ್ದಾಪುರ, ಡಿ. ೬ : ಗುಹ್ಯ ಗ್ರಾಮದ ನಿವಾಸಿ ಸಿ.ಕೆ. ಮಣಿ ಎಂಬವರಿಗೆ ಸೇರಿದ ಎರಡು ಹಸುಗಳನ್ನು ಗ್ರಾಮದ ಪದ್ಮ ಎಸ್ಟೇಟ್‌ನ ಮಾಲೀಕ ನರೇಂದ್ರ ನಾಯ್ಡು ಗುಂಡು ಹಾರಿಸಿ ಸಾಯಿಸಿರುವುದಾಗಿ ನೀಡಿದ ಪುಕಾರಿನ ಮೇರೆಗೆ ನರೇಂದ್ರ ನಾಯ್ಡು ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಆರೋಪಿ ಪರಾರಿಯಾಗಿದ್ದಾನೆ.

ಘಟನೆಯ ವಿವರ : ಗುಹ್ಯ ಗ್ರಾಮದ ನಿವಾಸಿ ಸಿ.ಕೆ ಮಣಿ ಅವರು ತಮ್ಮ ಮೂರು ಹಸುಗಳನ್ನು ತಾ. ೪ ರಂದು ಮನೆ ಸಮೀಪದಲ್ಲಿ ಮೇಯಲು ಬಿಟ್ಟಿದ್ದರು. ಮೇಯಲು ಬಿಟ್ಟ ಹಸುಗಳು ಸಂಜೆಯಾದರೂ ಮನೆಗೆ ಹಿಂತಿರುಗಿ ಬಂದಿರಲಿಲ್ಲ.