ವೀರಾಜಪೇಟೆ, ಡಿ. ೬: ಕಳ್ಳತನವನ್ನೇ ಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ಖತರ್‌ನಾಕ್ ಚೋರನೊಬ್ಬ ಶಿಕ್ಷಕರ ಬ್ಯಾಗ್‌ಗಳನ್ನು ಅಪಹರಿಸಿ ಬಂಧನಕ್ಕೊಳಗಾದ ಘಟನೆ ಬೇತ್ರಿಯಲ್ಲಿ ನಡೆದಿದೆ.

ಮೂರ್ನಾಡು ಹೊದ್ದೂರು ಗ್ರಾಮದ ಶಿವಕುಮಾರ್ (೨೫) ಬಂಧಿತ ಆರೋಪಿಯಾಗಿದ್ದಾನೆ. ಶಿವಕುಮಾರ್ ಹೆಸರಿನಲ್ಲಿ ಮೈಸೂರು ನಗರ ಠಾಣೆಯಲ್ಲಿ ೧, ಮಡಿಕೇರಿ ಗ್ರಾಮಾಂತರ ಠಾಣಿಯಲ್ಲಿ ೨ ಮತ್ತು ಸೋಮವಾರಪೇಟೆ ನಗರ ಠಾಣೆಯಲ್ಲಿ ೧ ಕಳ್ಳತನ ಪ್ರಕರಣಗಳು ದಾಖಲಾಗಿದ್ದು ಇದೀಗ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿಯು ಕಳ್ಳತನ ಪ್ರಕರಣ ದಾಖಲಾಗಿದ್ದು ಬಂಧಿಯಾಗಿ ಜೈಲುವಾಸಕ್ಕೆ ಅಣಿಯಾಗಿದ್ದಾನೆ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಹಿಂದಿರುಗಿದ ೧೫ ದಿನಗಳಲ್ಲಿ ಶಾಲೆಯ ಶಿಕ್ಷಕರ ಬ್ಯಾಗ್ ಅಪಹರಿಸಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ತಾ. ೫.೧೨.೨೦೨೨ ರಂದು ಕಾಕೋಟುಪರಂಬು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಈತ ಭೇಟಿ ನೀಡಿ ಶಾಲಾ ಶಿಕ್ಷಕರ ಬಳಿ ತಾನು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ಟಿ.ಸಿ ಕಳೆದುಹೋಗಿದೆ ಎಂದು ಹೇಳಿಕೊಳ್ಳುತ್ತಾನೆ. ಇದನ್ನು ನಂಬಿದ ಶಿಕ್ಷಕರು ಶಾಲಾ ದಾಖಲೆಗಳನ್ನು ಪರಿಶೀಲನೆ ಮಾಡುವ ಹೊತ್ತಿನಲ್ಲಿ ಮಧ್ಯಾಹ್ನ ಊಟದ ವಿರಾಮವಾಗುತ್ತದೆ. ಈ ವೇಳೆ ಹೊಂಚು ಹಾಕಿದ್ದ ಶಿವಕುಮಾರ್ ಶಿಕ್ಷಕರ ಕೊಠಡಿಯಲ್ಲಿದ್ದ ಬ್ಯಾಗ್‌ಗಳನ್ನು ಕಳ್ಳತನ ವೀರಾಜಪೇಟೆ, ಡಿ. ೬: ಕಳ್ಳತನವನ್ನೇ ಕಸುಬು ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ವಿವಿಧ ಠಾಣೆಗಳಲ್ಲಿ ವಿವಿಧ ಪ್ರಕರಣಗಳನ್ನು ಎದುರಿಸುತ್ತಿದ್ದ ಖತರ್‌ನಾಕ್ ಚೋರನೊಬ್ಬ ಶಿಕ್ಷಕರ ಬ್ಯಾಗ್‌ಗಳನ್ನು ಅಪಹರಿಸಿ ಬಂಧನಕ್ಕೊಳಗಾದ ಘಟನೆ ಬೇತ್ರಿಯಲ್ಲಿ ನಡೆದಿದೆ.

ಮೂರ್ನಾಡು ಹೊದ್ದೂರು ಗ್ರಾಮದ ಶಿವಕುಮಾರ್ (೨೫) ಬಂಧಿತ ಆರೋಪಿಯಾಗಿದ್ದಾನೆ. ಶಿವಕುಮಾರ್ ಹೆಸರಿನಲ್ಲಿ ಮೈಸೂರು ನಗರ ಠಾಣೆಯಲ್ಲಿ ೧, ಮಡಿಕೇರಿ ಗ್ರಾಮಾಂತರ ಠಾಣಿಯಲ್ಲಿ ೨ ಮತ್ತು ಸೋಮವಾರಪೇಟೆ ನಗರ ಠಾಣೆಯಲ್ಲಿ ೧ ಕಳ್ಳತನ ಪ್ರಕರಣಗಳು ದಾಖಲಾಗಿದ್ದು ಇದೀಗ ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿಯು ಕಳ್ಳತನ ಪ್ರಕರಣ ದಾಖಲಾಗಿದ್ದು ಬಂಧಿಯಾಗಿ ಜೈಲುವಾಸಕ್ಕೆ ಅಣಿಯಾಗಿದ್ದಾನೆ. ಪ್ರಕರಣವೊಂದರಲ್ಲಿ ಜೈಲುವಾಸ ಅನುಭವಿಸಿ ಹಿಂದಿರುಗಿದ ೧೫ ದಿನಗಳಲ್ಲಿ ಶಾಲೆಯ ಶಿಕ್ಷಕರ ಬ್ಯಾಗ್ ಅಪಹರಿಸಿ ಪೊಲೀಸರಿಗೆ ಅತಿಥಿಯಾಗಿದ್ದಾನೆ. ತಾ. ೫.೧೨.೨೦೨೨ ರಂದು ಕಾಕೋಟುಪರಂಬು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಈತ ಭೇಟಿ ನೀಡಿ ಶಾಲಾ ಶಿಕ್ಷಕರ ಬಳಿ ತಾನು ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದು ಟಿ.ಸಿ ಕಳೆದುಹೋಗಿದೆ ಎಂದು ಹೇಳಿಕೊಳ್ಳುತ್ತಾನೆ. ಇದನ್ನು ನಂಬಿದ ಶಿಕ್ಷಕರು ಶಾಲಾ ದಾಖಲೆಗಳನ್ನು ಪರಿಶೀಲನೆ ಮಾಡುವ ಹೊತ್ತಿನಲ್ಲಿ ಮಧ್ಯಾಹ್ನ ಊಟದ ವಿರಾಮವಾಗುತ್ತದೆ. ಈ ವೇಳೆ ಹೊಂಚು ಹಾಕಿದ್ದ ಶಿವಕುಮಾರ್ ಶಿಕ್ಷಕರ ಕೊಠಡಿಯಲ್ಲಿದ್ದ ಬ್ಯಾಗ್‌ಗಳನ್ನು ಕಳ್ಳತನ