ಗೋಣಿಕೊಪ್ಪಲು, ಡಿ. ೬: ರಾಜ್ಯದಲ್ಲಿ ಮುಂದೆ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ವ್ಯಕ್ತಿ ಮತದಾನದಿಂದ ವಂಚಿತನಾಗದAತೆ ಅತ್ಯಂತ ಎಚ್ಚರಿಕೆ ವಹಿಸಬೇಕು ಎಂದು ಕರ್ನಾಟಕ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಜಿಲ್ಲೆಯ ಅಧಿಕಾರಿಗಳಿಗೆ ಹಾಗೂ ಸಹ ಸಿಬ್ಬಂದಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.
ಕೊಡಗು ಜಿಲ್ಲೆಗೆ ನಿನ್ನೆ ಆಗಮಿಸಿದ ರಾಜ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಕೊಡಗು ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ, ಸಭೆಯಲ್ಲಿದ್ದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದರು. ಬಳಿಕ ಇಂದು ಮುಂಜಾನೆಯಿAದಲೇ ಜಿಲ್ಲೆಯ ವಿವಿಧ ಭಾಗಗಳಿಗೆ ಹಿರಿಯ ಅಧಿಕಾರಿಗಳೊಂದಿಗೆ ತೆರಳಿದರು.
ಮಾಲ್ದಾರೆ ಸಮೀಪದ ಗೇಟ್ ಹಾಡಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದರು. ನಂತರ ಚೊಟ್ಟೆಪಾರೆ ಗಿರಿಜನ ಹಾಡಿಗಳಿಗೆ ಭೇಟಿ ನೀಡಿ ಚುನಾವಣೆ ಹಿನ್ನೆಲೆಯಲ್ಲಿ ಇಲಾಖೆಯ ಅಧಿಕಾರಿಗಳು ಕೈಕೊಂಡ ಕ್ರಮಗಳ ಬಗ್ಗೆ ಸಮಗ್ರ ವರದಿ ಪಡೆದರು.
ಸಂಜೆಯ ವೇಳೆ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಜ್ಜಿಗೆ ಹಳ್ಳ ಗಿರಿಜನ ಹಾಡಿಗೆ ಆಗಮಿಸಿದ ಮುಖ್ಯ ಚುನಾವಣಾ ಅಧಿಕಾರಿಯನ್ನು ಗ್ರಾ.ಪಂ.ವತಿಯಿAದ ಆತ್ಮೀಯವಾಗಿ ಬರಮಾಡಿ ಕೊಳ್ಳಲಾಯಿತು.
ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವ ಬಿಎಲ್ಒ ಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.
ಚುನಾವಣಾ ಆಯೋಗ ನೀಡಿರುವ ನಿಗದಿತ ದಿನಾಂಕದ ಒಳಗೆ ೧೮ ವರ್ಷ ಮೇಲ್ಪಟ್ಟ ಎಲ್ಲಾ ವಯಸ್ಸಿನವರನ್ನು ಗುರುತಿಸಿ ಮತದಾನ ಚೀಟಿ ನೀಡುವುದು ಕಡ್ಡಾಯವಾಗಿದ್ದು, ಈ ನಿಯಮ ಪಾಲಿಸಬೇಕು.
ಯಾವುದೇ ಕಾರಣಕ್ಕೂ ಮತದಾನದಿಂದ ಯಾರು ಕೂಡ ವಂಚಿತರಾಗದAತೆ ಎಚ್ಚರ ವಹಿಸಬೇಕಾಗಿರುವುದು ಇಲಾಖೆಯ ಸಿಬ್ಬಂದಿಗಳ ಬಹುದೊಡ್ಡ ಜವಾಬ್ದಾರಿ ಎಂದರು.
ರಾಜ್ಯ ಚುನಾವಣಾ ಅಧಿಕಾರಿಗಳೊಂದಿಗೆ ಆಗಮಿಸಿದ್ದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಚುನಾವಣಾ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು ಆಧಾರ್ ಹಾಗೂ ಇತರೆ ದಾಖಲೆಗಳು ಕಡ್ಡಾಯವಲ್ಲ, ಯಾವುದೇ ದಾಖಲೆ ಇಲ್ಲದಿದ್ದರೂ ವ್ಯಕ್ತಿ ಒಂದು ಸ್ಥಳದಲ್ಲಿ ಆರು ತಿಂಗಳಿನಿAದ ವಾಸ ಮಾಡುತ್ತಿದ್ದಾನೆ ಎಂಬುದು ತಿಳಿದಲ್ಲಿ ಪಂಚಾಯಿತಿ ದೃಢೀಕರಣದೊಂದಿಗೆ ಸ್ಥಳೀಯ ವೈದ್ಯರ ವಯಸ್ಸಿನ ದೃಢೀಕರಣ ದೊಂದಿಗೆ ಮತದಾರರಾಗಿ ನೊಂದಾವಣೆ ಮಾಡಬೇಕು, ಯಾರು ಕೂಡ ಮತದಾನದಿಂದ ವಂಚಿತರಾಗದAತೆ ಎಚ್ಚರ ವಹಿಸಬೇಕು ಎಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಭೇಟಿ ವೇಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಆಕಾಶ್, ಅಪರ ಜಿಲ್ಲಾಧಿಕಾರಿ ನಂಜುAಡೆಗೌಡ, ಉಪವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಐಟಿಡಿಪಿ ಜಿಲ್ಲಾ ಅಧಿಕಾರಿ ಹೊನ್ನೆಗೌಡ, ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಎನ್.ಎಸ್. ಪ್ರಶಾಂತ್, ವೀರಾಜಪೇಟೆ ತಾಲೂಕು ತಹಶೀಲ್ದಾರ್
(ಮೊದಲ ಪುಟದಿಂದ) ಡಿ. ಅರ್ಚನಾ ಭಟ್, ಇಒ ಅಪ್ಪಣ್ಣ, ತಾಲೂಕು ಗಿರಿಜನ ಕಲ್ಯಾಣಧಿಕಾರಿ ಗುರುಶಾಂತಪ್ಪ, ಪೊನ್ನಂಪೇಟೆ ನಾಡು ಕಚೇರಿಯ ಕಂದಾಯ ಪರಿವೀಕ್ಷಕರಾದ ಪಿ.ಕೆ. ಸುಧೀಂದ್ರ, ರೆವಿನ್ಯೂ ಇಲಾಖೆಯ ಸಿಬ್ಬಂದಿಗಳಾದ ಹನುಮಂತ, ಮಹೇಶ್, ಕಾವ್ಯ, ಪೂರ್ಣಿಮಾ, ಮುಕುಂದ, ಪೂವಯ್ಯ, ಸುನೀಲ್, ರಾಜೇಶ್, ಜಿತನ್ ಸೇರಿದಂತೆ ಅನೇಕ ಅಧಿಕಾರಿ ವರ್ಗದವರು ಹಾಜರಿದ್ದರು.
ಮನೆ ಕೊಡಿ.. ನೀರು ಕೊಡಿ..!
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿಗಳು ತಿತಿಮತಿ ಪಂಚಾಯಿತಿ ವ್ಯಾಪ್ತಿಯ ಮಜ್ಜಿಗೆ ಹಳ್ಳ ಗಿರಿಜನ ಹಾಡಿಗೆ ಆಗಮಿಸಿದ ವೇಳೆ ಅಧಿಕಾರಿ ಮನೋಜ್ ಕುಮಾರ್ ಮೀನಾ ನೆರೆದಿದ್ದ ಗಿರಿಜನರನ್ನು ಔಪಚಾರಿಕವಾಗಿ ಮಾತನಾಡಿಸಿದರು. ಈ ವೇಳೆ ಮುಗ್ದ ಗಿರಿಜನರು ‘ಸ್ವಾಮಿ ನಮಗೆ ಮನೆ ಕೊಡಿ, ಕುಡಿಯಲು ನೀರು ಕೊಡಿ’ ಎಂದು ಮನವಿ ಮಾಡಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಡಾ. ಬಿ.ಸಿ. ಸತೀಶ್, ಇವರು ಆ ಕೆಲಸಕ್ಕಾಗಿ ಬಂದಿಲ್ಲ, ಮತದಾನ ಚೀಟಿಯಿಂದ ಯಾರೂ ಹೊರಗೆ ಉಳಿಯದಂತೆ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಬಂದಿದ್ದಾರೆ ಎಂದು ತಿಳಿಸಿದರಲ್ಲದೇ, ಸ್ಥಳದಲ್ಲಿದ್ದ ಐಟಿಡಿಬಿ ಅಧಿಕಾರಿಯನ್ನು ಕರೆದು ಮನೆ ನಿರ್ಮಾಣದ ಬಗ್ಗೆ ಮಾಹಿತಿ ಪಡೆದರು. ಕೆಲವು ಮನೆ ನಿರ್ಮಾಣವಾಗಿದ್ದು ಹಣ ಬಿಡುಗಡೆ ಆಗದ ಬಗ್ಗೆ ಅಧಿಕಾರಿ ವಿವರ ನೀಡಿದರು.
ಹುತ್ತರಿ ಹಬ್ಬ ಕಳೆದ ಕೂಡಲೇ ಹಣ ಮಂಜೂರು ಮಾಡುವುದಾಗಿ ಗಿರಿಜನರಿಗೆ ಸ್ವತಃ ಜಿಲ್ಲಾಧಿಕಾರಿಯವರೆ ಉತ್ತರ ನೀಡಿದರು.
ಅಲ್ಲಿದ್ದ ಮಹಿಳೆಯರು ಕುಡಿಯುವ ನೀರಿನ ಸಮಸ್ಯೆಯನ್ನು ಹಲವು ಸಮಯದಿಂದ ಎದುರಿಸುತ್ತಿದ್ದೇವೆ, ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಗ್ರಾಮ ಪಂಚಾಯಿತಿ ಸದಸ್ಯರಾದ ಅನೂಪ್ ಕುಮಾರ್ ಉತ್ತರಿಸಿ, ಈ ಭಾಗದಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಇರುವುದರಿಂದ ನೀರಿನ ಸಮಸ್ಯೆ ಎದುರಾಗಿದೆ ಎಂದು ಹೇಳಿದರು.
- ಹೆಚ್.ಕೆ. ಜಗದೀಶ್
ಮತದಾನದಿಂದ ಯಾವುದೇ ವ್ಯಕ್ತಿ ವಂಚಿತನಾಗದAತೆ ಎಚ್ಚರ ವಹಿಸಿ