ನಾಪೋಕ್ಲು, ಡಿ. ೬: ಸಮೀಪದ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಹುತ್ತರಿ ಕಲಾಡ್ಚ ಉತ್ಸವವು ವಿಜೃಂಭಣೆಯಿAದ ನೆರವೇರಿತು.
ಮಂಗಳವಾರ ಬೆಳಿಗ್ಗೆ ದೇವತಕ್ಕರಾದ ಪರದಂಡ ಕುಟುಂಬಸ್ಥರ ಬಲಿವಾಡು ಮತ್ತು ಎತ್ತೇರಾಟದೊಂದಿಗೆ ದೇವಳದಲ್ಲಿ ಉತ್ಸವ ಆರಂಭಗೊAಡಿತು. ಅದರೊಂದಿಗೆ ಇನ್ನಿತರ ತಕ್ಕಮುಖ್ಯಸ್ಥರ ಎತ್ತೇರಾಟ, ತುಲಾಭಾರ ಸೇವೆಗಳು, ಪೂಜಾ ಕಾರ್ಯಗಳು, ಅನ್ನಸಂತರ್ಪಣೆ ಸಂಪ್ರದಾಯದAತೆ ನಡೆದವು.
ಅಪರಾಹ್ನ ಇಗ್ಗುತ್ತಪ್ಪ ದೇವರ ಉತ್ಸವ ಮೂರ್ತಿ ದರ್ಶನ. ಬಳಿಕ ಮೂರು ಮೈಲಿ ದೂರದ ಆದಿ ಸ್ಥಳ ಮಲ್ಮ ಬೆಟ್ಟಕ್ಕೆ
(ಮೊದಲ ಪುಟದಿಂದ) ಉತ್ಸವ ಮೂರ್ತಿಯೊಂದಿಗೆ ತಕ್ಕ ಮುಖ್ಯಸ್ಥರು, ಭಕ್ತಾದಿಗಳು, ಎತ್ತೇರಾಟ, ದುಡಿಕೊಟ್ಟ್ ಪಾಟ್, ವಾದ್ಯಘೋಷಗಳೊಂದಿಗೆ ತೆರಳಿದರು.
ಈ ಸಂದರ್ಭ ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು ಹಾಗೂ ಪೇರೂರು ಶ್ರೀ ಇಗ್ಗುತ್ತಪ್ಪ ದೇವಾಲಯದ ತಕ್ಕಮುಖ್ಯಸ್ಥರು, ಭಕ್ತಾದಿಗಳು ಎತ್ತೇರಾಟದೊಂದಿಗೆ ಮಲ್ಮ ಬೆಟ್ಟದಲ್ಲಿ ಹಾಜರಿದ್ದರು. ಮೂರು ಇಗ್ಗುತ್ತಪ್ಪ ದೇವಾಲಯಗಳ ತಕ್ಕ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಮಲ್ಮ ಸನ್ನಿಧಿಯಲ್ಲಿ ದೇವರಿಗೆ ಬೆಳಗಿನ ಪೂಜೆ, ಮಧ್ಯಾಹ್ನದ ಪೂಜೆ, ದೇವರ ಬಲಿ, ಬಾಳೋಪಾಟ್ ಸೇರಿದಂತೆ ದೈವಿಕ ವಿಧಿವಿಧಾನಗಳನ್ನು ನೆರವೇರಿಸಿ ದೇವ ಕಟ್ಟನ್ನು ಹಿಂತೆಗೆಯಲಾಯಿತು. ಪ್ರಸಾದ ವಿತರಣೆಯ ನಂತರ ರಾತ್ರಿ ದೇವಾಲಯದಲ್ಲಿ ಉತ್ಸವ ಮೂರ್ತಿಯ ನೃತ್ಯೋತ್ಸವದೊಂದಿಗೆ ಉತ್ಸವ ಸಂಪನ್ನಗೊAಡಿತು.
ದೈವಿಕ ವಿಧಿವಿಧಾನಗಳನ್ನು ವೇದ ಮೂರ್ತಿಗಳಾದ ಕುಶ ಭಟ್, ಜಗದೀಶ್, ಶ್ರೀನಿವಾಸ ಹೆಬ್ಬಾರ್ ಮತ್ತಿತರರು ನೆರವೇರಿಸಿದರು. ಈ ಸಂದರ್ಭ ದೇವಳಕ್ಕೆ ಸಂಬAಧಿಸಿದ ಎಲ್ಲಾ ತಕ್ಕಮುಖ್ಯಸ್ಥರು, ಭಕ್ತ ಜನಸಂಘದ ಅಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು, ಭಕ್ತಾದಿಗಳು ಹಾಜರಿದ್ದರು.
ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳ: ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಳದಲ್ಲಿಯೂ ಹುತ್ತರಿ ಹಬ್ಬದ ಪ್ರಯುಕ್ತ ಇಗ್ಗುತ್ತಪ್ಪ ದೇವರಿಗೆ ಹುತ್ತರಿ ಕಲಾಡ್ಚ ಉತ್ಸವ ನಡೆಯಿತು.
ಉತ್ಸವದಲ್ಲಿ ಎತ್ತೇರಾಟ, ಬಲಿವಾಡು, ತುಲಾಭಾರ ಸೇವೆ, ದೇವರ ನೃತ್ಯ ಬಲಿ, ಅನ್ನಸಂತರ್ಪಣೆ ನಡೆಯಿತು. ಭಕ್ತಾಧಿಗಳು ಕಾಫಿ, ಕಾಳು ಮೆಣಸು ಮತ್ತಿತರ ವಸ್ತುಗಳನ್ನು ಕಾಣಿಕೆಯಾಗಿ ಅರ್ಪಿಸಿದರು. ಈ ಸಂದರ್ಭ ಗ್ರಾಮದ ಎಲ್ಲಾ ತಕ್ಕಮುಖ್ಯಸ್ಥರು, ಭಕ್ತಜನ ಸಂಘದ ಅಧ್ಯಕ್ಷ ಮತ್ತು ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತಾಧಿಗಳು ಹಾಜರಿದ್ದರು. ದೇವತಾ ವಿಧಿ ವಿಧಾನಗಳನ್ನು ಸಂತೋಷ್ ಹೆಬ್ಬಾರ್, ರಮೇಶ್ ಶರ್ಮ ಮತ್ತು ಸುರೇಶ್ ಶರ್ಮ ನೆರವೇರಿಸಿದರು. -ಪಿ.ವಿ.ಪ್ರಭಾಕರ್