ಮಡಿಕೇರಿ, ಡಿ. ೫: ಪ್ರಸಕ್ತ (೨೦೨೨-೨೩) ಸಾಲಿನಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ವೃತ್ತಿಪರ, ತಾಂತ್ರಿಕ, ಉನ್ನತ ವ್ಯಾಸಂಗ ಕೋರ್ಸ್ಗಳ ವ್ಯಾಸಂಗಕ್ಕೆ ಶೈಕ್ಷಣಿಕ ಸಾಲ ಮಂಜೂರಾತಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ತಾ. ೨೦ ರವರೆಗೆ ಅವಧಿ ವಿಸ್ತರಿಸಲಾಗಿದೆ.

ಒಕ್ಕಲಿಗ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ವೃತ್ತಿಪರ, ತಾಂತ್ರಿಕ, ಉನ್ನತ ವ್ಯಾಸಂಗದ ಕೋರ್ಸ್ಗಳಲ್ಲಿನ ಶಿಕ್ಷಣಕ್ಕೆ ವಾರ್ಷಿಕ ಗರಿಷ್ಠ ರೂ. ೧ ಲಕ್ಷ ಗಳಂತೆ ಅಥವಾ ವ್ಯಾಸಂಗದ ವಾಸ್ತವಿಕ ವೆಚ್ಚದ ಮಿತಿಗೆ ಒಳಪಟ್ಟು ಕೋರ್ಸ್ನ ಅವಧಿ ಅನುಸಾರ ಗರಿಷ್ಠ ರೂ. ೪ ಲಕ್ಷದಿಂದ ರೂ. ೫ ಲಕ್ಷಗ¼ Àವರೆಗೆ ವಾರ್ಷಿಕ ಶೇ. ೨ರ ಬಡ್ಡಿದರಲ್ಲಿ ಸಾಲ ಮಂಜೂರು ಮಾಡಲು ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳ ಬೇಡಿಕೆ ಯಿಂದ ಹಾಗೂ ವಿವಿಧ ಕಾರಣ ಗಳಿಂದ ತಾ. ೨೦ ರವರೆಗೆ ವಿಸ್ತರಿ¸ Àಲಾಗಿದೆ. ಈ ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸೌಲಭ್ಯ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಸೇವಾ ಸಿಂಧು ಪೋರ್ಟಲ್ ಮುಖಾಂತರ ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ನಿಗಮದ hಣಣಠಿs://ಞvಛಿಜಛಿ.ಞಚಿಡಿಟಿಚಿಣಚಿಞಚಿ.gov.iಟಿ/ ವೆಬ್‌ಸೈಟ್‌ನಲ್ಲಿ ಅಥವಾ ನಿಗಮದ ದೂ.ಸಂ.೦೮೦-೨೯೯೦೪೨೬೮ ಹಾಗೂ ಇ-ಮೇಲ್ ವಿಳಾಸ mಜಞvಛಿಜಛಿ@ gmಚಿiಟ.ಛಿomನ್ನು ಹಾಗೂ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಒಕ್ಕಲಿಗರ ಸಮುದಾಯ ಅಭಿವೃದ್ಧಿ ನಿಗಮ(ನಿ), ಮಡಿಕೇರಿ ಇವರನ್ನು ಕಚೇರಿ ವೇಳೆಯಲ್ಲಿ ಅಥವಾ ದೂ.ಸಂ. ೦೮೨೭೨-೨೨೧೬೫೬ ನ್ನು ಸಂಪರ್ಕಿಸ ಬಹುದು ಎಂದು ಕರ್ನಾಟಕ ಒಕ್ಕಲಿಕ ಸಮುದಾಯ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.