ಕುಶಾಲನಗರ, ಡಿ. ೫: ಸಾಂಪ್ರದಾಯಿಕ ಹುತ್ತರಿ ಹಬ್ಬವನ್ನು ತಾ. ೭ ರಂದು ಕುಶಾಲನಗರ ಗೌಡಸಮಾಜದ ಆಶ್ರಯದಲ್ಲಿ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಆಚರಿಸಲಾಗುವುದು ಎಂದು ಸಮಾಜದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಗೌಡ ಸಮಾಜದ ಆಶ್ರಯದಲ್ಲಿ ಗೌಡ ಯುವಕ ಸಂಘ, ಮಹಿಳಾ ಸ್ವ ಸಹಾಯ ಸಂಘ, ಪದ್ಮಾವತಿ ಮಹಿಳಾ ಒಕ್ಕೂಟ, ಅರೆಭಾಷೆ ಯುವಕ ಸಂಘ, ಗೌಡ ಮಾಜಿ ಸೈನಿಕರ ಸಂಘ ಹಾಗೂ ಗೌಡ ಸಾಂಸ್ಕೃತಿಕ ವೇದಿಕೆ ಸಹಯೋಗದೊಂದಿಗೆ ಅಂದು ಸಂಜೆ ೬.೩೦ ಗೌಡ ಸಮಾಜದಲ್ಲಿ ಸೇರಿ ನಂತರ ೭.೫೦ ಕ್ಕೆ ಸಮಾಜದಲ್ಲಿ ನೆರೆ ಕಟ್ಟುವುದು ನಂತರ ಸಮಾಜದಿಂದ ಒಡ್ಡೋಲಗ ಸಹಿತ ಕುಶಾಲನಗರ ಗಣಪತಿ ದೇವಸ್ಥಾನಕ್ಕೆ ಮೆರವಣಿಗೆ ಮೂಲಕ ತೆರಳಲಾಗುವುದು ಎಂದು ತಿಳಿಸಿದರು.

ಪೂಜೆ ಸಲ್ಲಿಸಿದ ನಂತರ ಗುಮ್ಮನಕೊಲ್ಲಿಯ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘದ ಗದ್ದೆಯಲ್ಲಿ ರಾತ್ರಿ ೮.೫೦ ಕ್ಕೆ ಕದಿರು ಕೊಯ್ದು ಸಮಾಜ ಬಾಂಧವರಿಗೆ ಮತ್ತು ಸಾರ್ವಜನಿಕರಿಗೆ ಹಂಚಲಾಗುವುದು ಎಂದು ತಿಳಿಸಿದರು. ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಹಬ್ಬಗಳ ಸಡಗರ ಕ್ಷೀಣಗೊಂಡಿತ್ತು. ಈ ಬಾರಿ ಹುತ್ತರಿ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಗೌಡ ಸಮಾಜದ ಉಪಾಧ್ಯಕ್ಷ ಸೆಟ್ಟೆಜನ ದೊರೆ ಗಣಪತಿ, ಕುಲ್ಲಚೆಟ್ಟಿ ಕಾಶಿ ಪೂವಯ್ಯ, ಗೌಡ ಮಹಿಳಾ ಸ್ವ ಸಹಾಯ ಸಂಘದ ಅಧ್ಯಕ್ಷೆ ಕುಲ್ಲಚನ ಭಾಗಿರಥಿ, ಮಾಜಿ ಅಧ್ಯಕ್ಷರಾದ ಕೂರನ ಪ್ರಕಾಶ್ ಇದ್ದರು.