ಮಡಿಕೇರಿ, ಡಿ. ೫ : ಪ್ರಸಕ್ತ ಸಾಲಿನ ರಾಷ್ಟಿçÃಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ವಿವಿಧ ಸೌಲಭ್ಯ ಪಡೆಯಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಹಸಿರು ಮನೆಯಲ್ಲಿ ಶಿಥಿಲಗೊಂಡಿರುವ /ಹಾಳಾಗಿರುವ ಪಾಲಿಥೀನ್ ಶೀಟ್ಗಳ ಬದಲಾವಣೆಗೆ ಸಹಾಯಧನ (ಅಸಿಸ್ಟೆಂಟ್ಸ್ ಫಾರ್ ರೀ ಪ್ಲೇಸ್ಮೆಂಟ್ ವಿತ್ ನ್ಯೂ ಪಾಲಿಥೀನ್ ಶೀಟ್) ಹಸಿರು ಮನೆಯಲ್ಲಿ ಬೇಸಾಯ ಮಾಡಿರುವ ಗುಲಾಬಿ, ಕಾರ್ನೆಷಿನ್, ಜರ್ಬೆರಾ, ಸೇವಂತಿಗೆ, ಆರ್ಕಿಡ್, ಆಂಥೋರಿಯA, ಟೊಮ್ಯಟೋ, ಕ್ಯಾಪ್ಸಿಕಂ, ಬದನೆ, ಸೌತೆಕಾಯಿ (ಇಂಗ್ಲೀಷ್ ಕುಕುಂಬರ್) ಬೆಳೆಗಳನ್ನು ಮಾತ್ರ ಸಹಾಯಧನಕ್ಕೆ ಪರಿಗಣಿಸಲಾಗುವುದು.
ಘಟಕ ವೆಚ್ಚ ರೂ. ೬೦ ರಂತೆ ಗರಿಷ್ಠ ೧ ಹೆಕ್ಟೇರ್ (೧೦,೦೦೦ ಚಮೀಗೆ) ರೂ. ೬ ಲಕ್ಷಗಳಿಗೆ ಶೇ. ೨೫ ರಂತೆ ಪ್ರತಿ ಚದರ ಮೀಟರಗೆ ರೂ. ೧೫ ರಂತೆ ಗರಿಷ್ಠ ೧ ಹೆಕ್ಟೇರ್ (೧೦,೦೦೦ ಚಮೀಗೆ) ರೂ. ೧.೫೦ ಲಕ್ಷಗಳಿಗೆ ಮೀರದಂತೆ ಸಹಾಯಧನ ನೀಡಲಾಗುವುದು.
ಹಸಿರು ಮತ್ತು ಅನುತ್ಪಾದಕ ಗಿಡಗಳನ್ನು ತೆಗೆಯುವುದು ಮತ್ತು ಹೊಸ ಗಿಡಗಳನ್ನು ನೆಡಲು ಸಹಾಯಧನ (ಅಸಿಸ್ಟೆಂಟ್ ಫಾರ್ ರೀ ಪ್ಲೇಸ್ಮೆಂಟ್ ಇನ್ ಗ್ರೀನ್ ಹೌಸ್) ಹಸಿರು ಮನೆಯಲ್ಲಿ ಬೇಸಾಯ ಮಾಡಿರುವ ಗುಲಾಬಿ, ಕಾರ್ನೆಷಿನ್, ಜರ್ಬೆರಾ, ಸೇವಂತಿಗೆ, ಆರ್ಕಿಡ್, ಆಂಥೋರಿಯA, ಟೊಮ್ಯಟೋ, ಕ್ಯಾಪ್ಸಿಕಂ, ಬದನೆ, ಸೌತೆಕಾಯಿ, ಬೆಳೆಗಳನ್ನು ಮಾತ್ರ ಸಹಾಯಧನಕ್ಕೆ ಪರಿಗಣಿಸುವುದು.
ಹೂವಿನ ಬೆಳೆಗಳಿಗೆ ಘಟಕ ವೆಚ್ಚ ಪ್ರತಿ ಚ.ಮೀಗೆ ರೂ. ೫೦ ರಂತೆ, ಗರಿಷ್ಠ ೧ ಹೆಕ್ಟೇರಿಗೆ (೧೦೦೦೦ ಚಮೀ) ರೂ. ೫ ಲಕ್ಷಗಳಿಗೆ ಶೇ.೨೫ ರಂತೆ ಪ್ರತಿ ಚ.ಮೀಗೆ ರೂ. ೧೨ ರಂತೆ ಗರಿಷ್ಠ ೧ ಹೆಕ್ಟೇರ್ಗೆ ರೂ. ೧.೨೫ ಲಕ್ಷಗಳಿಗೆ ಸಹಾಯಧನ ಮೀರದಂತೆ ಹಾಗೂ ತರಕಾರಿ ಬೆಳೆಗಳಿಗೆ ಘಟಕ ವೆಚ್ಚ ಪ್ರತಿ ಚ.ಮೀ.ಗೆ ರೂ.೨೫ ರಂತೆ ಗರಿಷ್ಟ ೧ ಹೆಕ್ಟರ್ಗೆ, ರೂ. ೨.೫೦ ಲಕ್ಷಗಳಿಗೆ ಶೇ. ೨೫ ರಂತೆ ಪ್ರತಿ ಚಮೀ.ಗೆ ರೂ. ೬.೨೫ ರಂತೆ ಗರಿಷ್ಠ ೧ ಹೆಕ್ಟೇರಗೆ ರೂ. ೦.೬೨೫ ಲಕ್ಷ ಸಹಾಯಧನ ಮೀರದಂತೆ ಸಹಾಯಧನ ನೀಡಲಾಗುವುದು.
ಸೋಲಾರ್ ಪಂಪ್ ಖರೀದಿ, ನೀರಿನಲ್ಲಿ ಕರಗುವ ರಸ ಗೊಬ್ಬರಗಳ ಖರೀದಿ, ಲಘು ಪೋಷಕಾಂಶಗಳ ಮಿಶ್ರಣ ಖರೀದಿಗೆ ಸಹಾಯಧನ ಪಡೆಯಲು ರೈತರು ಆಯಾಯ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ), ಮಡಿಕೇರಿ, ಸೋಮವಾರಪೇಟೆ, ಪೊನ್ನಂಪೇಟೆ ಕಚೇರಿಗಳಲ್ಲಿ ತಾ. ೧೫ ರೊಳಗೆ ಅರ್ಜಿಯೊಂದಿಗೆ ನೋಂದಾಯಿಸಿಕೊಳ್ಳುವAತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.