ಚೆಟ್ಟಳ್ಳಿ, ಡಿ. ೫: ಜಿಲ್ಲಾ ಪಂಚಾಯತ್, ಸೋಮವಾರಪೇಟೆ ತಾಲೂಕು ಹಾಗೂ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಚೆಟ್ಟಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಗ್ರಾಮೀಣ ಕ್ರೀಡಾಕೂಟ ಗಮನ ಸೆಳೆಯಿತು.
ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಇಡೀ ದಿನವನ್ನು ಸಂಭ್ರಮಿಸಿದರು.
೧ ರಿಂದ ೪ನೇ ತರಗತಿಯವರೆಗಿನ ಬಾಲಕಿಯರ ೧೦೦ ಮೀ ಓಟದಲ್ಲಿ ಕಂಡಕೆರೆ ಪ್ರಾಥಮಿಕ ಶಾಲೆಯ ಅಫ್ನಾ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಆರ್.ಎಸ್.ಚೆಟ್ಟಳ್ಳಿ ಶಾಲೆಯ ಮುಬಶ್ಶೀರ ಪಡೆದುಕೊಂಡರು.
೧ ರಿಂದ ೦೪ ತರಗತಿಯವರೆಗಿನ ಬಾಲಕರ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚೆಟ್ಟಳ್ಳಿ ಮಾದರಿ ಪ್ರಾಥಮಿಕ ಶಾಲೆಯ ಸುಮಿತ್ ಹಾಗೂ ದ್ವಿತೀಯ ಸ್ಥಾನವನ್ನು ಆರ್.ಎಸ್. ಚೆಟ್ಟಳ್ಳಿ ಶಾಲೆಯ ಶಾನಿದ್ ಪಡೆದುಕೊಂಡರು.
೫ ರಿಂದ ೭ ನೇ ತರಗತಿಯ ಬಾಲಕರ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚೆಟ್ಟಳ್ಳಿ ಮಾದರಿ ಪ್ರಾಥಮಿಕ ಶಾಲೆಯ ಸಂದೇಶ ಪ್ರಥಮ ಹಾಗೂ ಆರ್.ಎಸ್ ಚೆಟ್ಟಳ್ಳಿ ಶಾಲೆಯ ಮಣಿಕಂಠ ದ್ವಿತೀಯ ಸ್ಥಾನ ಪಡೆದರು.
೫ ರಿಂದ ೭ನೇ ತರಗತಿಯವರೆಗಿನ ಬಾಲಕಿಯರ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಆರ್.ಎಸ್.ಚೆಟ್ಟಳ್ಳಿ ಶಾಲೆಯ ನಸೀಯ ಪ್ರಥಮ ಹಾಗೂ ಕಂಡಕರೆ ಶಾಲೆಯ ಅಸ್ನಾ ದ್ವಿತೀಯ ಸ್ಥಾನ ಪಡೆದುಕೊಂಡರು.
ಪ್ರೌಢಶಾಲಾ ವಿಭಾಗದ ಬಾಲಕರ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಚೆಟ್ಟಳ್ಳಿ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಪವನ್ ಪ್ರಥಮ ಹಾಗೂ ಮದನ್ ದ್ವಿತೀಯ ಸ್ಥಾನ ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಚೆಟ್ಟಳ್ಳಿ ಪ್ರೌಢ ಶಾಲೆಯ ಶಜಿನಾ ಪ್ರಥಮ ಹಾಗೂ ತೇಜಸ್ವಿ ದ್ವಿತೀಯ ಸ್ಥಾನ ಪಡೆದರು.
ಮಹಿಳೆಯ ವಿಷದ ಚೆಂಡು ಸ್ಪರ್ಧೆಯಲ್ಲಿ ಜನಿತಾ ಪ್ರಥಮ ಹಾಗೂ ನಸೀಮ ದ್ವಿತೀಯ ಸ್ಥಾನ ಪಡೆಯಿತು.
ಮಹಿಳೆಯರ ೨೦ ರಿಂದ ೩೦ ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಶಾಂಭವಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ರಸೀನಾ ಪಡೆದುಕೊಂಡರು.
೩೧ ವರ್ಷದಿಂದ ೪೦ ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಜೆನಿತಾ ಪ್ರಥಮ ಹಾಗೂ ವತ್ಸಲ ದ್ವಿತೀಯ ಸ್ಥಾನವನ್ನು ಪಡೆದರು.
೪೧ ವರ್ಷದಿಂದ ೫೦ ವರ್ಷದೊಳಗಿನ ಓಟದ ಸ್ಪರ್ಧೆಯಲ್ಲಿ ಸುಮಿತ್ರ ಪ್ರಥಮ ಹಾಗೂ ಪ್ರಮೀಳಾ ದ್ವಿತೀಯ ಸ್ಥಾನ ಪಡೆದರು.
ಪುರುಷರ ೪೧ ರಿಂದ ೫೦ ವರ್ಷದೊಳಗಿನ ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ತಾಜುದ್ದೀನ್ ಪ್ರಥಮ ಹಾಗೂ ಉದಯ ದ್ವಿತೀಯ ಸ್ಥಾನ ಪಡೆದರು.
೨೦ ರಿಂದ ೩೦ ವರ್ಷದೊಳಗಿನ ಓಟದಲ್ಲಿ ಇಸ್ಮಾಯಿಲ್ ಕಂಡಕರೆ ಪ್ರಥಮ ಹಾಗೂ ಅಶ್ರಫ್ ದ್ವಿತೀಯ ಸ್ಥಾನ ಪಡೆದರು.
೩೦ ರಿಂದ ೪೦ ವರ್ಷದೊಳಗಿನ ಓಟದಲ್ಲಿ ಮಹೇಂದ್ರ ಪ್ರಥಮ ಹಾಗೂ ಜಂಶಾದ್ ದ್ವಿತೀಯ ಸ್ಥಾನ ಪಡೆದರು.
ಅಂಗನವಾಡಿ ಮಕ್ಕಳ ೬೦ ಮೀಟರ್ ಓಟದ ಸ್ಪರ್ಧೆಯಲ್ಲಿ ರಮ್ಯ ಪ್ರಥಮ ,ದಕ್ಷಿತ್ ದ್ವಿತೀಯ ಹಾಗೂ ನಕುಲ್ ತೃತೀಯ ಸ್ಥಾನ ಪಡೆದರು.
ಕಾಳು ಹೆಕ್ಕುವ ಸ್ಪರ್ಧೆಯಲ್ಲಿ ಮುಫಿಲಿಯಾ ಪ್ರಥಮ, ಪ್ರಜ್ವಲ್ ದ್ವಿತೀಯ ಹಾಗೂ ರಮ್ಯ ತೃತೀಯ ಸ್ಥಾನ ಪಡೆದರು.
ಪುರುಷರ ವಾಲಿಬಾಲ್ ಪಂದ್ಯದಲ್ಲಿ ಪೊನ್ನತ್ಮೊಟ್ಟೆ ಪ್ರಥಮ ಹಾಗೂ ಗಾಂಧಿ ಯೂತ್ ಕ್ಲಬ್ ಕಂಡಕರೆ ದ್ವಿತೀಯ ಸ್ಥಾನ ಪಡೆದವು.
ಬಾಲಕರ ಕಬಡ್ಡಿ ಪಂದ್ಯದಲ್ಲಿ ಜೆಡ್ ಎಕ್ಸ್ ಬಾಯ್ಸ್ ಕೂಡ್ಲೂರು ಚೆಟ್ಟಳ್ಳಿ ಪ್ರಥಮ ಹಾಗೂ ಬುಲ್ಲಿ ಬಾಯ್ಸ್ ಚೆಟ್ಟಳ್ಳಿ ದ್ವಿತೀಯ ಸ್ಥಾನ ಪಡೆದುಕೊಂಡವು.
ಮಹಿಳೆಯರ ಥ್ರೋಬಾಲ್ ಪಂದ್ಯದಲ್ಲಿ ಸರ್ಕಾರಿ ನೌಕರರ ತಂಡ ಪ್ರಥಮ ಹಾಗೂ ಪ್ರೌಢಶಾಲಾ ಶಿಕ್ಷಕಿಯರ ತಂಡ ದ್ವಿತೀಯ ಸ್ಥಾನ ಪಡೆದವು.
ಮಹಿಳೆಯರ ಕಬಡ್ಡಿ ಪಂದ್ಯದಲ್ಲಿ ಸರ್ಕಾರಿ ನೌಕರರ ತಂಡ ಪ್ರಥಮ ಹಾಗೂ ಚೆಟ್ಟಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದುಕೊಂಡರು.
ಗ್ರಾಮೀಣ ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುತ್ತಪ್ಪ ವಹಿಸಿದ್ದರು.
ಉಪಾಧ್ಯಕ್ಷೆ ವಿಮಲಾಕ್ಷಿ, ಪಿ.ಡಿ.ಓ ರಾಕೇಶ್, ಸದಸ್ಯರಾದ ಸಿಂಧೂ, ಮಾಲಾಶ್ರೀ ರಸೀನಾ, ಪತ್ರಕರ್ತ ಇಸ್ಮಾಯಿಲ್ ಕಂಡಕರೆ, ಚೆಟ್ಟಳ್ಳಿ ಭಾಗದ ಎಲ್ಲಾ ಶಾಲೆಗಳ ಮುಖ್ಯೋಪಾಧ್ಯಾಯರು ಹಾಗೂ ದೈಹಿಕ ಶಿಕ್ಷಕರು ಹಾಜರಿದ್ದರು.