ಮಡಿಕೇರಿ, ಡಿ. ೫: ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬAಧಿಸಿದAತೆ ಮಂಗಳೂರು ಪೊಲೀಸರು ನಿನ್ನೆ ದಿನ ಕೊಡಗಿನ ಹೋಂಸ್ಟೇಯೊAದಕ್ಕೆ ಆಗಮಿಸಿ ವಿಚಾರಣೆ ನಡೆಸಿದ್ದು, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ನಡೆದ ಎರಡು ಪ್ರತ್ಯೇಕ ಸ್ಫೋಟ ಪ್ರಕರಣಗಳ ಪ್ರಮುಖ ಆರೋಪಿಗಳೇ ಹೋಂಸ್ಟೇಗೆ ಬಂದಿದ್ದ ಕುರಿತು ಪೊಲೀಸರು ಮಾಹಿತಿ ಸಂಗ್ರಹಿಸಿರುವುದಾಗಿ ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಮAಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ಸಂಬAಧ ಪೊಲೀಸರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಕೈಗೊಂಡ ಸಂದರ್ಭ ಆರೋಪಿಗಳ ಪೈಕಿ ಇಬ್ಬರು ಕಳೆದ ಮೇ ತಿಂಗಳಿನಲ್ಲಿ
ಕೊಡಗಿಗೆ ಬಂದಿದ್ದ ಪ್ರಮುಖ ಆರೋಪಿಗಳು
(ಮೊದಲ ಪುಟದಿಂದ) ದಕ್ಷಿಣ ಕೊಡಗಿನ ವೆಸ್ಟ್ನೆಮ್ಮಲೆಯ ಹೋಂಸ್ಟೇಯೊAದರಲ್ಲಿ ನಡೆದಿದ್ದ ‘ಕಾಡಿನ ಉಳಿವು’ ಕುರಿತಾದ ತರಬೇತಿ ಶಿಬಿರದಲ್ಲಿ ತಾವು ಭಾಗವಹಿಸಿದ್ದುದಾಗಿ ನೀಡಿದ ಮಾಹಿತಿ ಅನ್ವಯ ನಿನ್ನೆದಿನ ಮಂಗಳೂರು ಪೊಲೀಸರು ಹೋಂಸ್ಟೇಗೆ ಆಗಮಿಸಿ ಹೋಂಸ್ಟೇ ಮಾಲೀಕರು ಹಾಗೂ ಇತರರನ್ನು ವಿಚಾರಣೆ ಒಳಪಡಿಸಿದ್ದರು. ಈ ವೇಳೆ ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಶಾರೀಕ್ ಹಾಗೂ ಶಿವಮೊಗ್ಗದಲ್ಲಿ ನಡೆದಿದ್ದ ಮತ್ತೊಂದು ಸ್ಫೋಟ ಪ್ರಕರಣದ ಆರೋಪಿ ಇಬ್ಬರು ಸೇರಿ ಅಂದು ಹೋಂಸ್ಟೇಗೆ ಆಗಮಿಸಿದ್ದ ಬಗ್ಗೆ ಖಚಿತಗೊಂಡಿದ್ದು, ಪೊಲೀಸರು ತನಿಖೆ ಮುಂದುವರಿಸಿರುವುದಾಗಿ ತಿಳಿದು ಬಂದಿದೆ.