ಚೈತ್ರ ಮಾಸದಲ್ಲಿ ಶ್ರೀ ರಾಮನವಮಿಯ ನಂತರ ಆಚರಿಸಲ್ಪಡುವ ಮುಖ್ಯ ಹಬ್ಬ ಹನುಮ ಜಯಂತಿ. ಅಂದು ವಿಜೃಂಭಣೆಯಿAದ ಆರಾಧಿಸಲ್ಪಡುವ ದೇವರು ಹನುಮಂತ. ಆಂಜನೇಯ, ಮಾರುತಿ, ಪ್ರಾಣದೇವರು, ತಿರುವಡಿ ಮುಂತಾದ ಹೆಸರುಗಳಿಂದ ಜ್ಞಾನಿಗಳ ಮತ್ತು ಭಕ್ತರ ಸಾಹಿತ್ಯದಲ್ಲಿ ಪ್ರಸಿದ್ಧನಾಗಿರುವ ಮಹಾತ್ಮ. ರಾಮನವಮಿಯಂದು ಶ್ರೀ ರಾಮನನ್ನು ಪೂಜಿಸಿದ ನಂತರ ಅದಕ್ಕೆ ಹತ್ತಿರದಲ್ಲಿ ಬರುವ ಒಂದು ಪರ್ವದಲ್ಲಿ ಭಕ್ತ ಜನಪ್ರಿಯನೂ, ಬಹುಜನ ಪ್ರಿಯನೂ ಆಗಿರುವ ಈ ದೇವನನ್ನು ಆರಾಧಿಸುವುದು ವಾಡಿಕೆಯಾಗಿದೆ.
ರಾಮಾಯಣ, ಭಾರತ, ಪುರಾಣ, ಧರ್ಮಶಾಸ್ತç, ಸಂಗೀತ, ಕಾವ್ಯ ಮುಂತಾದವುಗಳು ಮಾತ್ರವಲ್ಲದೆ ‘ರಾಮನ ಬಂಟ ಹನುಮಂತ, ತಿರುಪರಿಯೆಂಬುದೇ ವೈಕುಂಠ’, ‘ಹನುಮನಿಲ್ಲದ ಹಳ್ಳಿಯೇ? ಗಣಪನಿಲ್ಲದ ಗ್ರಾಮವೇ?’.
ಇವೇ ಮುಂತಾದ ಜನಪದ ಸಾಹಿತ್ಯದ ವಚನಗಳೂ, ಬಗೆಬಗೆಯ ಭಾವ ಭಂಗಿಗಳಿAದ ಶೋಭಿಸುತ್ತಿರುವ ಅವನ ವಿಗ್ರಹಗಳೂ, ಚಿತ್ರಗಳೂ, ಗುಡಿ ಗೋಪುರಗಳೂ, ನಮ್ಮ ಮನಸ್ಸಿನ ಮೇಲೆ ಬೀರಿರುವ ಪ್ರಭಾವವನ್ನು ಸಾರುತ್ತವೆ. ಆಂಜನೇಯನನ್ನು ಉಪಾಸನೆ ಮಾಡುವವರು ಈ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಾರೆ.
ಹನುಮಂತ ಕೇಸರಿ ಪುತ್ರ; ಸಿಂಹದ ಮರಿ, ಶೌರ್ಯ ಧೈರ್ಯಗಳ ಮೂರ್ತಿ, ವೀರರ ಕಣ್ಮಣಿ; ಆದರ್ಶ ಭಕ್ತ; ಭಕ್ತಿ ಶಕ್ತಿಗಳ ಸಂಗಮ; ರುದ್ರಾಂಶ ಸಂಭೂತ; ನ್ಯಾಯ ನೀತಿಗಳ ನೆಲೆಗಟ್ಟು; ಬುದ್ಧಿವಂತರಲ್ಲಿ ಅಗ್ರಗೇಸರ ಜಿತೇಂದ್ರಿಯ; ಸುಗ್ರೀವ ರಾಜನ ಸೇನಾಪತಿ ಹಾಗೂ ಆಪ್ತಮಿತ್ರ. ಮಾರುತಿಯ ಜನ್ಮದಿನ ಒಂದು ರೀತಿಯ ವೀರ ಪೂಜೆ, ನಿಸ್ವಾರ್ಥ ಸೇವೆಗೆ ಸಲ್ಲುವ ಗೌರವ; ವೀರ್ಯ ವಿನಯಗಳ ಪ್ರಯೋಗವನ್ನು ಆಂಜನೇಯನಲ್ಲಿ ಕಾಣಬೇಕು. ಅವನು ಒಂದೆಡೆ ಶೌರ್ಯದ ಸಿರಿಯಾದರೆ, ಇನ್ನೊಂದೆಡೆ ಭಕ್ತಿಯ ಝರಿ.
ಸೂರ್ಯೋದಯ ಕಾಲದಲ್ಲಿ ಜನಿಸಿದ ಹನುಮಂತ ಹುಟ್ಟುತ್ತಲೇ ಕೆಂಪಾದ ಸೂರ್ಯನನ್ನು ಆಗಸದಲ್ಲಿ ಕಂಡು, ಹಣ್ಣೆಂದು ಭ್ರಮಿಸಿ ಸೂರ್ಯಮಂಡಲಕ್ಕೆ ಜಿಗಿದು ಸೂರ್ಯನಿಂದ ‘ಶಹಭಾಸ್’ ಗಿರಿ ಪಡೆದು ವಜ್ರ ದೇಹಿಯಾದ. ರಾಮ ಕಥೆಯಿರುವ ತನಕ ತಾನು ಬದುಕಿರಬೇಕೆಂದು ವರ ಪಡೆದ ಚಿರಂಜೀವಿ - ಹನುಮಂತ. ಸದಾ ರಾಮನಿದ್ದಲ್ಲಿ ಹನುಮನಿರಬೇಕು.
ಹನುಮಂತನ ಪರಿಚಯ ವನ್ನು ನಮಗೆ ಮಾಡಿಕೊಡುವ ಪ್ರಾಚೀನತೆಯ ಸಾಹಿತ್ಯವಾದ ವಾಲ್ಮೀಕಿ ರಾಮಾಯಣದ ಪ್ರಕಾರ ಹೇಳುವುದಾದರೆ; ಅವನೊಬ್ಬ ವಾನರ ಜಾತಿಯ ಮುಖಂಡ; ಕಿಷ್ಕಿಂದೆಯ ಅರಸನಾದ ಕಪಿ ರಾಜ ಸುಗ್ರೀವನ ಮನೀಷಿಯು, ಹಿತೈಷಿಯೂ ಆದ ಸಂಚಿವ, ಕೇಸರಿಯೆಂಬ ವಾನರ ನಾಯಕನ ಪತ್ನಿ ಅಂಜನಾದೇವಿಯ ಪುತ್ರ.
ಸಮುದ್ರ ಲಂಘನ, ಸೀತಾನ್ವೇಷಣೆ, ರಾಕ್ಷಸ ನಿಗ್ರಹ, ಲಂಕಾದಹನ, ಪರ್ವತಾ ರೋಹಣವೇ ಮುಂತಾದ ಇವನ ಎಲ್ಲಾ ಸಾಹಸಗಳೂ ರೋಮಾಂಚನಕರವಾದವು. ಬ್ರಹ್ಮಾದಿ ದೇವ ಪ್ರಧಾನರ ಅಸಾಧಾರಣ ವರ ಬಲದಿಂದ ಸಂಪನ್ನನಾದವನು. ಇಷ್ಟಾದರೂ ಆತ ಅತ್ಯಂತ ವಿನೀತಿ, ರಾಮನ ದಾಸನೆಂದು ತನ್ನನ್ನು ಕರೆದುಕೊಳ್ಳುವುದರಲ್ಲಿ ಹೆಮ್ಮೆ ಪಡುವ ದಾಸ ಶ್ರೇಷ್ಠ.
ಕಪಿಯ ರೂಪ ಮತ್ತು ಸ್ವಭಾವಗಳನ್ನು ಹೊಂದಿದ್ದರೂ, ಅವನು ದೇವತಾ ಪುತ್ರನೇ. ಇತಿಹಾಸ ರತ್ನವಾದ ಮಹಾ ಭಾರತವೂ ಮಾರುತಿಯ ವಿಷಯದಲ್ಲಿ ರಾಮಾಯಣವು ಹೇಳುವ ಅಭಿಪ್ರಾಯವನ್ನೇ ಸಮರ್ಥಿಸಿ ಆತನು ಭೀಮಸೇನನಿಗೂ, ಅರ್ಜುನನಿಗೂ ಮಾಡಿದ ಪರಮೋಪಕಾರವನ್ನು ಉಲ್ಲೇಖಿಸುತ್ತದೆ.
ಶ್ರೀ ಮದ್ಗಾಗತವು ಆತನು ಪರಮ ಭಾಗವತ, ಕಿಂ ಪುರುಷ ವರ್ಷದಲ್ಲಿ ಸದಾ ಸೀತಾ-ರಾಮನ ಉಪಾಸನೆಯಲ್ಲಿ ಮಗ್ನನಾಗಿ ರುವನು ಎನ್ನುತ್ತದೆ. ಶಿವ ಪುರಾಣವು ಅವನ ದಿವ್ಯ ಮಹಿಮೆ ಯನ್ನು ಕೊಂಡಾಡುತ್ತಾ ಅವನು ರುದ್ರ ದೇವರ ಅವತಾರ ಎಂದು ಉದ್ಗೋಷಿಸುತ್ತದೆ. ನಮ್ಮ ಸಂಪ್ರದಾಯವೂ ಕೂಡ ಮೇಲ್ಕಂಡ ಗ್ರಂಥಗಳ ಅಭಿಪ್ರಾಯ ವನ್ನು ಎತ್ತಿ ಹಿಡಿದು ಅವನನ್ನು ದೇವರನ್ನಾಗಿ ಆರಾಧಿಸುತ್ತಾ ಬಂದಿದೆ. ಹನುಮ ಜಯಂತಿಯನ್ನು ಅನುಷ್ಠಾನ ಮಾಡುವ ದಿವಸದ ಬಗ್ಗೆ ಮೂರು ಸಂಪ್ರದಾಯ ಗಳನ್ನು ನೋಡುತ್ತೇವೆ. ೧ ಚೈತ್ರ ಶುಕ್ಲ ಪೂರ್ಣಿಮೆಯಂದು ಆಚರಿಸುವ ಪದ್ಧತಿ. ೨ ಕಾರ್ತಿಕ ಕೃಷ್ಣ ಚತುರ್ದಶಿಯಂದು ಆಚರಿಸುವ ಪದ್ಧತಿ, ೩ ಮಾರ್ಗಶಿರ ಶುಕ್ಲತ್ರಿಯೋದಶಿ ಯಂದು ಆಚರಿಸುವ ಪದ್ಧತಿ. ಇವುಗಳಲ್ಲಿ ಕೊನೆಯದು ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಬಳಕೆಯಲ್ಲಿದೆ.
ಈ ದಿವಸ ವ್ರತವನ್ನು ಆಚರಿಸುವವರು ಉಪವಾಸ ಮಾಡಬೇಕು. ಅಶಕ್ತರಾದವರು ದೇವರಿಗೆ ನಿವೇದನೆ ಮಾಡಿದ ಫಲಮೂಲ, ಕ್ಷೀರ ಮುಂತಾದ ಸಾತ್ವಿಕ ದ್ರವ್ಯಗಳನ್ನು ಸೇವಿಸಬಹುದು. ವ್ರತದ ಆಚರಣೆಯಿಲ್ಲದೆ ಪ್ರಾಣ ದೇವರ ಪೂಜೆಯನ್ನು ಮಾತ್ರ ಮಾಡುವವರು ಪೂಜಾ ಸಮಯದವರೆಗೂ ಉಪವಾಸವಿದ್ದು, ಅನಂತರ ದೇವರ ಪ್ರಸಾದವನ್ನು ಸ್ವೀಕರಿಸಬೇಕು. ನೈವೇದ್ಯಗಳಲ್ಲಿ ಪ್ರಶಸ್ತವಾದದು ಕಡಲೆ ಮತ್ತು ಬೆಲ್ಲಗಳಿಂದ ತಯಾರಾದ ಪ್ರಸಾದ. ದಾಸವರೇನ್ಯನೂ, ಭಗವಂತ - ಭಗವತಿಯರಿಗೆ ಪ್ರಿಯತಮನೂ ಆಗಿರುವ ಶ್ರೀ ಹನುಮಂತನ ಜಯಂತಿಯ ಆಚರಣೆಯಿಂದ ಆದಿ - ವ್ಯಾಧಿ ಪರಿಹಾರಕ್ಕಾಗಿ ಭಗವತ್ ಪ್ರೀತಿ ಉಂಟಾಗುವುದರಿAದ; ಶ್ರೇಯಸ್ಸನ್ನೂ ಬಯಸುವ ಪ್ರತಿಯೊಬ್ಬನೂ ಆಚರಿಸಬೇಕಾದ ಮಂಗಳ ವ್ರತಗಳಲ್ಲಿ ಒಂದಾಗಿದೆ ಈ ಹಬ್ಬ. ಮಡಿಕೇರಿಯಲ್ಲೂ ಆಂಜನೇಯ ದೇವಸ್ಥಾನ, ರಾಮ ಮಂದಿರ ಮುಂತಾದ ದೇವಸ್ಥಾನಗಳಲ್ಲಿ, ಕುಶಾಲನಗರ, ಹುಣಸೂರು ದೇವಸ್ಥಾನ ಗಳಲ್ಲಿಯೂ ವಿಜೃಂಭಣೆಯಿAದ ವಿವಿಧ ಕಾರ್ಯಕ್ರಮಗಳಿಂದ ಹನುಮ ಜಯಂತಿಯನ್ನು ಆಚರಿಸುತ್ತಾರೆ. ಹನುಮ ಜಯಂತಿಯAದು ಹನುಮನನ್ನು ಭಕ್ತಿಯಿಂದ ಪೂಜಿಸಿ ಆತನ ಕೃಪೆಗೆ ಪಾತ್ರರಾಗೋಣ.
- ಹರೀಶ್ ಸರಳಾಯ, ಮಡಿಕೇರಿ.