ವೀರಾಜಪೇಟೆ, ಡಿ. ೩: ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘ ಸಂತ ಅನ್ನಮ್ಮ ದೇವಾಲಯ ವೀರಾಜಪೇಟೆ ಇವರುಗಳ ವತಿಯಿಂದ ೧೧ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ಸೂಪರ್ ಸೆವೆನ್ಸ್ ಕಾಲ್ಚೆಂಡು ಪಂದ್ಯಾಟವು ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಆರಂಭಗೊAಡಿದ್ದು, ಪಂದ್ಯಾಟಕ್ಕೆ ಧರ್ಮಗುರುಗಳಾದ ರೆ.ಫಾ. ದಯಾನಂದ ಪ್ರಭು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕ್ರೀಡೆ ಎಂಬುದು ಸರ್ವ ಯುವ ಮನಸ್ಸುಗಳನ್ನು ಒಗ್ಗೂಡಿಸುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಒಗ್ಗಟ್ಟಿನಿಂದ ಶಿಸ್ತಿನಿಂದ ಪ್ರದರ್ಶನವನ್ನು ನೀಡಿದಲ್ಲಿ ಕ್ರೀಡೆಗೆ ಮಹತ್ವ ನೀಡಿದಂತೆ ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ನಿವೃತ್ತ ಡಿಡಿಪಿಐ ವೀರಾಜಪೇಟೆ, ಡಿ. ೩: ಸಂತ ಅನ್ನಮ್ಮ ಕ್ರೆöÊಸ್ತ ಸ್ನೇಹಿತರ ಸಂಘ ಸಂತ ಅನ್ನಮ್ಮ ದೇವಾಲಯ ವೀರಾಜಪೇಟೆ ಇವರುಗಳ ವತಿಯಿಂದ ೧೧ ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ಸೂಪರ್ ಸೆವೆನ್ಸ್ ಕಾಲ್ಚೆಂಡು ಪಂದ್ಯಾಟವು ಸಂತ ಅನ್ನಮ್ಮ ಕಾಲೇಜು ಮೈದಾನದಲ್ಲಿ ಆರಂಭಗೊAಡಿದ್ದು, ಪಂದ್ಯಾಟಕ್ಕೆ ಧರ್ಮಗುರುಗಳಾದ ರೆ.ಫಾ. ದಯಾನಂದ ಪ್ರಭು ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಕ್ರೀಡೆ ಎಂಬುದು ಸರ್ವ ಯುವ ಮನಸ್ಸುಗಳನ್ನು ಒಗ್ಗೂಡಿಸುತ್ತದೆ. ಕ್ರೀಡೆಗಳಲ್ಲಿ ಭಾಗವಹಿಸುವುದು ಮುಖ್ಯ. ಒಗ್ಗಟ್ಟಿನಿಂದ ಶಿಸ್ತಿನಿಂದ ಪ್ರದರ್ಶನವನ್ನು ನೀಡಿದಲ್ಲಿ ಕ್ರೀಡೆಗೆ ಮಹತ್ವ ನೀಡಿದಂತೆ ಎಂದು ಅಭಿಪ್ರಾಯಿಸಿದರು.

ವೇದಿಕೆಯಲ್ಲಿ ನಿವೃತ್ತ ಡಿಡಿಪಿಐ ಲೋಬೋ, ಬಿ.ಜೆ.ಪಿ ಅಲ್ಪಸಂಖ್ಯಾತ ಘಟಕದ ಪ್ರಮುಖ ಜೋಕಿಂ ರಾಡ್ರಿಗಸ್ ಮತ್ತು ಸಂಘದ ಅಧ್ಯಕ್ಷ ಇ.ಪಿ. ನೆಲ್ಸನ್ ಉಪಸ್ಥಿತರಿದ್ದರು.

ಸಂಘದ ಸದಸ್ಯ ಜೂಡಿವಾಜ್ ಸ್ವಾಗತಿಸಿ, ನಿರೂಪಿಸಿದರು. ವರ್ಗಿಸ್ ವಂದಿಸಿದರು.

ಎರಡು ದಿನಗಳ ಕಾಲ ನಡೆಯುವ ಕಾಲ್ಚೆಂಡು ಪಂದ್ಯಾಟದಲ್ಲಿ ಒಟ್ಟು ೧೬ ತಂಡಗಳು ಭಾಗವಹಿಸಿವೆ. ಉದ್ಘಾಟನಾ ಪಂದ್ಯಾಟವು ಅರಸು ಫ್ರೆಂಡ್ಸ್ ಅರಸುನಗರ ಮತ್ತು ಇಮ್ಯಾನ್ಯುವಲ್ ಎಫ್.ಸಿ. ತಂಡಗಳ ಮಧ್ಯೆ ನಡೆದು ೩-೧ ಗೊಲುಗಳಿಂದ ಅರಸು ಫ್ರೆಂಡ್ಸ್ ತಂಡವನ್ನು ಇಮ್ಯಾನ್ಯುವೆಲ್ ಎಫ್.ಸಿ. ತಂಡ ಮಣಿಸಿ ಮುಂದಿನ ಸುತ್ತಿಗೆ ಅರ್ಹತೆ ಪಡೆಯಿತು. ತಾ. ೪ ರಂದು (ಇಂದು) ಸಮಾರೋಪ ಸಮಾರಂಭ ನಡೆಯಲಿದೆ.