ಮಡಿಕೇರಿ, ಡಿ. ೩: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷರಾಗಿ ಕೊಡಗು ಪ್ರೆಸ್ ಕ್ಲಬ್ ಮಾಜಿ ಅಧ್ಯಕ್ಷ ಡಾ. ಉಳ್ಳಿಯಡ ಎಂ. ಪೂವಯ್ಯ ಆಯ್ಕೆಯಾಗಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಅಧ್ಯಕ್ಷತೆ ಯಲ್ಲಿ ನಡೆದ ಬೆಳ್ಳಿ ಮಹೋತ್ಸವ ಆಚರಣಾ ಪೂರ್ವಭಾವಿ ಸಭೆಯಲ್ಲಿ ಉಳ್ಳಿಯಡ ಎಂ. ಪೂವಯ್ಯ ಆಯ್ಕೆಯಾದರು.
ಸಮಿತಿಯ ಮಹಾಪೋಷಕರಾಗಿ ಶಕ್ತಿ ಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಗೌರವಾಧ್ಯಕ್ಷರಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ, ಕಾರ್ಯದರ್ಶಿಯಾಗಿ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನು ಕಾರ್ಯಪ್ಪ ಆಯ್ಕೆಯಾದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಕಾರ್ಯಾಧ್ಯಕ್ಷರಾಗಿ, ಕೆ.ಕೆ. ರೆಜಿತ್ ಕುಮಾರ್ ಪ್ರಧಾನ ಕಾರ್ಯದರ್ಶಿಯಾಗಿ, ಬೊಳ್ಳಜಿರ ಬಿ. ಅಯ್ಯಪ್ಪ ಖಜಾಂಚಿ ಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇತರ ಪದಾಧಿಕಾರಿಗಳ ಆಯ್ಕೆ ಹಾಗೂ ಉಪಸಮಿತಿಗಳ ನೇಮಕಕ್ಕೆ ಸಂಬAಧಿಸಿದAತೆ ತಾ. ೧೨ ರಂದು ಸಭೆ ನಡೆಸಲು ನಿರ್ಧರಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ, ಕಾರ್ಯಕ್ರಮ ಮಾರ್ಗದರ್ಶಿ ಆಗುವ ರೀತಿ ಇರಬೇಕು. ವಿವಿಧ ಕಾರ್ಯಕ್ರಮ ಗಳೊಂದಿಗೆ ಹಿರಿಯ ಪತ್ರಕರ್ತರೊಬ್ಬರ ಹೆಸರನ್ನು ನಗರದ ವೃತ್ತವೊಂದಕ್ಕೆ ಇಡುವಂತಾಗಬೇಕು. ಹಿರಿಯ ಪತ್ರಕರ್ತ ಬಿ.ಎಸ್. ಗೋಪಾಲಕೃಷ್ಣ ಹಲವರಿಗೆ ಅವಕಾಶ ನೀಡಿದವರು. ಸಾಕಷ್ಟು ಪತ್ರಕರ್ತರನ್ನು ಸೃಷ್ಟಿ ಮಾಡಿದ್ದಾರೆ. ಪಂದ್ಯAಡ ಬೆಳ್ಯಪ್ಪ ಗಾಂಧಿ, ನೆಹರೂ ಜೊತೆ ಸಂಪರ್ಕ ದಲ್ಲಿ ಇದ್ದವರು. ಇಂತವರ ದೊಡ್ಡ ಮಟ್ಟದ ಸ್ಮಾರಕ ನಿರ್ಮಾಣ ಮಾಡುವ ಮೂಲಕ ಶಾಶ್ವತವಾಗಿ ಹೆಸರು ಉಳಿಯುವಂತೆ ಮಾಡಬೇಕೆಂದು ಕರೆ ನೀಡಿದರು.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಮಹಾಪೋಷಕರಾದ ಜಿ. ರಾಜೇಂದ್ರ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಸಭೆಯಲ್ಲಿ ಬಂದ ಸಲಹೆಯಂತೆ ಕಾರ್ಯಕ್ರಮಗಳ ಬಗ್ಗೆ ನಿರ್ಧಾರವಾಗಬೇಕು. ಸಮಿತಿಗಳು ನಾಮಕಾವಸ್ತೆಗೆ ಇರಬಾರದು. ಜೊತೆಗೆ ಸ್ಮರಣ ಸಂಚಿಕೆ ಹೊರತರಬಹುದಾಗಿದೆ ಎಂದು ಸಲಹೆ ನೀಡಿದರು.
ಗೌರವಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸಮಿತಿಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಅರ್ಥಪೂರ್ಣವಾಗಿ ಬೆಳ್ಳಿ ಮಹೋತ್ಸವ ಆಚರಿಸುವಂತಾಗ ಬೇಕೆಂದರು.
ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್ ಕುಮಾರ್ ಮಾತನಾಡಿ, ಪ್ರೆಸ್ ಕ್ಲಬ್ ವತಿಯಿಂದ ಸೌಹಾರ್ದ ಸಹಕಾರ ಸಂಘ ರಚನೆ ಮಾಡಲು ನಿರ್ಧರಿಸಲಾ ಗಿದ್ದು, ಬೆಳ್ಳಿ ಮಹೋತ್ಸವ ನೆನಪಿಗೆ ಸಂಘ ಕಾರ್ಯಾರಂಭ ಮಾಡು ವಂತಾಗಲಿ ಎಂದು ಆಶಿಸಿದರು.
ಕೊಡಗು ಪ್ರೆಸ್ ಕ್ಲಬ್ ಖಜಾಂಚಿ ಬೊಳ್ಳಜೀರ ಬಿ. ಅಯ್ಯಪ್ಪ, ಹಿರಿಯ ಉಪಾಧ್ಯಕ್ಷ ಆರ್. ಸುಬ್ರಮಣಿ, ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ, ಸಂಘಟನಾ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ನಿರ್ದೇಶಕರಾದ ಸುನಿಲ್ ಪೊನ್ನೇಟಿ, ನವೀನ್ ಡಿಸೋಜ, ವಿಶ್ವ ಕುಂಬೂರು, ಪುತ್ತಂ ಪ್ರದೀಪ್, ಕುಪ್ಪಂಡ ದತ್ತಾತ್ರಿ ಮತ್ತಿತರರು ಇದ್ದರು.
೭೫ ಸಾವಿರ ರೂಪಾಯಿ ಘೋಷಣೆ
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವಕ್ಕೆ ಕೊಡಗು ಪ್ರೆಸ್ ಕ್ಲಬ್ ಸಂಘಟನಾ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್ ೨೫,೦೦೦ ರೂಪಾಯಿ ಘೋಷಿಸಿದರು. ಬೆಳ್ಳಿಹಬ್ಬ ಪ್ರಯುಕ್ತ ತಮ್ಮ ತಂದೆ-ತಾಯಿ ಹೆಸರಿನಲ್ಲಿ ಕಾರ್ಯಕ್ರಮ ಆಯೋಜಿಸಲು ಹಣ ನೀಡುವುದಾಗಿ ಹೇಳಿದರು.
ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿಗೆ ೫೦,೦೦೦ ರೂಪಾಯಿ ನೀಡುವುದಾಗಿ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಘೋಷಿಸಿದರು.