ಮಡಿಕೇರಿ, ಡಿ. ೨: ಮಡಿಕೇರಿಯ ಶ್ರೀ ಇಗ್ಗುತಪ್ಪ ಕೊಡವಕೇರಿ ಸಂಘದ ಒತ್ತೊರ್ಮೆ ಕೂಟ ಇತ್ತೀಚೆಗೆ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ ವಿವಿಧ ಕಾರ್ಯಕ್ರಮ ನಡೆಯಿತು. ಮಕ್ಕಳು ಹಾಗೂ ಸದಸ್ಯರಿಗೆ ಕ್ರೀಡಾ ಸ್ಪರ್ಧೆ ಆಯೋಜಿಸಲಾಗಿತ್ತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷೆ ಶೋಭಾ ಸುಬ್ಬಯ್ಯ ಅವರು ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾತನಾಡಿದರು.

ಕೊಡವ ಪದ್ಧತಿ - ಸಂಸ್ಕೃತಿಯ ಮಹತ್ವದ ಬಗ್ಗೆ ಮುಂಡೋಟಿರ ರಾಣಿ ಅಪ್ಪಯ್ಯ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ ಕಳೆದ ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಚೌರೀರ ಕಾವೇರಿ ಪೂಣಚ್ಚ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಮುಕ್ಕಾಟಿರ ಪೊನ್ನಮ್ಮ, ಕಾರ್ಯದರ್ಶಿ ಚೆಯ್ಯಂಡ ಸತ್ಯ, ಖಜಾಂಚಿ ಕಲಿಯಂಡ ಮಧು, ಚೌರೀರ ಕಾವೇರಿ ಪೂಣಚ್ಚ ಉಪಸ್ಥಿತರಿದ್ದರು.

ನಿರ್ದೇಶಕರಾದ ಮುಕ್ಕಾಟಿರ ವಿಮಲ ಹಾಗೂ ಮೂವೆರ ಸರಿತಾ ಹರೀಶ್ ಪ್ರಾರ್ಥಿಸಿ, ಮುಕ್ಕಾಟಿರ ಪೊನ್ನಮ್ಮ ಸ್ವಾಗತಿಸಿದರು. ಮಲಚೀರ ಪ್ರವೀಣ್ ಪ್ರಾಸ್ತಾವಿಕವಾಗಿ ಮಾತನಾಡಿ, ಚೆಯ್ಯಂಡ ಸತ್ಯ ನಿರೂಪಿಸಿದರು. ಬೊಳ್ಳಾರ್‌ಪಂಡ ಲೀಲಾ ವಂದಿಸಿದರು. ನೆರವಂಡ ಬಬಿನಾ, ಮುಕ್ಕಾಟಿರ ವಿಮಲ ಹಾಗೂ ಮೂವೆರ ಸರಿತಾ ಕ್ರೀಡಾಸ್ಪರ್ಧೆ ನಡೆಸಿಕೊಟ್ಟರು.