*ಗೋಣಿಕೊಪ್ಪ, ಡಿ. ೨: ಕೊಡಗು ಹಿಂದೂ ಮಲಯಾಳಿ ಸಮಾಜ, ಗೋಣಿಕೊಪ್ಪ ಯೂತ್ ವಿಂಗ್ ಹಾಗೂ ಕೊಡಗು ರಕ್ತನಿಧಿ ಘಟಕ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.
ಗೋಣಿಕೊಪ್ಪ ಹಿಂದೂ ಮಲಯಾಳಿ ಸಮಾಜದ ಸಭಾಂಗಣದಲ್ಲಿ ೬೬ ಜನ ರಕ್ತದಾನ ಮಾಡುವ ಮೂಲಕ ರಕ್ತದಾನದ ಶ್ರೇಷ್ಠತೆಯನ್ನು ಸಾರಿದರು.
ಇವರಲ್ಲಿ ೧೭ ಮಂದಿ ಮಹಿಳೆಯರು ರಕ್ತದಾನ ಮಾಡಿರುವುದು ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಕೊಡಗು ಹಿಂದೂ ಮಲಯಾಳಿ ಸಮಾಜ ಗೋಣಿಕೊಪ್ಪ ಯೂತ್‌ವಿಂಗ್ ಅಧ್ಯಕ್ಷ ಎ.ಎಂ. ಅಖಿಲ್ ಅಧ್ಯಕ್ಷತೆಯಲ್ಲಿ ರಕ್ತದಾನ ಶಿಬಿರಕ್ಕೆ ಕೊಡಗು ಹಿಂದೂ ಮಲಯಾಳಿ ಸಮಾಜದ ಅಮೃತ್ ರಾಜ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯ ಕಾಪಾಡಿ ಕೊಳ್ಳಬಹುದಾಗಿದೆ. ಇದರೊಂದಿಗೆ ಇತರರ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ. ರಕ್ತದಾನ ಬಹು ಶ್ರೇಷ್ಠತೆಯಿಂದ ಕೂಡಿದ್ದು, ಪ್ರತಿಯೊಬ್ಬರು ಕನಿಷ್ಟ ವರ್ಷಕ್ಕೊಮ್ಮೆ ರಕ್ತದಾನ ಮಾಡುವುದು ಉತ್ತಮ. ಈ ನಿಲುವಿನಲ್ಲಿ ಮಲಯಾಳಿ ಸಮಾಜ ರಕ್ತದಾನದ ಶ್ರೇಷ್ಠತೆಯನ್ನು ಸಮಾಜಕ್ಕೆ ತಿಳಿಸುವ ಕಾರ್ಯಕ್ಕೆ ಮುಂದಾಗಿದೆ ಎಂದು ಹೇಳಿದರು.
ಕೊಡಗು ರಕ್ತನಿಧಿ ಘಟಕದ ವೈದ್ಯಾಧಿಕಾರಿ ಡಾ. ಕೆ. ಕರುಂಬಯ್ಯ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ರಕ್ತದ ಮಹತ್ವ ಹೆಚ್ಚಿದೆ. ಯುವಕರು ರಕ್ತದಾನ ಮಾಡಲು ಪ್ರೇರಣೆಗೊಂಡಾಗ ಅಗತ್ಯ ಇರುವ ರಕ್ತವನ್ನು ಸಂಗ್ರಹಿಸಿಡಲು ಸಾಧ್ಯವಿದೆ.
ರಕ್ತದಾನ ಮಾಡುವ ಬಗ್ಗೆ ಬಹಳಷ್ಟು ಜನರು ಮೌಢ್ಯತೆಯನ್ನು ಹೊಂದಿದ್ದಾರೆ. ರಕ್ತ ನೀಡುವುದರಿಂದ ಯಾವುದೇ ಅಡ್ಡಪರಿಣಾಮಗಳು ಉಂಟಾಗುವುದಿಲ್ಲ. ರಕ್ತದಾನದಿಂದ ರಕ್ತದೊತ್ತಡ ಮತ್ತು ಹೃದಯಾಘಾತ ಸಂಬAಧಿಸಿದAತೆ ನಿಯಂತ್ರಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಹಲವು ಬಾರಿ ರಕ್ತದಾನ ಮಾಡಿದ ಪತ್ರಕರ್ತ ವಿ.ವಿ. ಅರುಣ್ ಕುಮಾರ್, ಅಮ್ಮತ್ತಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಸುಷ ಮೋಹನ್, ಉದ್ಯಮಿ ವೇಣು ಕಣ್ಣನ್ ಅವರನ್ನು ಸನ್ಮಾನಿಸಲಾಯಿತು.
ಉದ್ಯಮಿ ಕೆ.ಜಿ. ಜಯೇಂದ್ರ, ಸಮಾಜ ಸೇವಕ ಮಂಜು ಸುರೇಶ್‌ರೈ, ಯೂತ್ ವಿಂಗ್ ಗೌರವಾಧ್ಯಕ್ಷ ವೇಣು ಕಣ್ಣನ್, ಕೊಡಗು ಹಿಂದೂ ಮಲಯಾಳಿ ಸಮಾಜದ ಶ್ರಿಮಂಗಲ ಉಪಸಮಿತಿ ಅಧ್ಯಕ್ಷ ಮುರುಳಿ ಮೋಹನ್, ಪಾಲಿಬೆಟ್ಟ ಉಪಸಮಿತಿ ಅಧ್ಯಕ್ಷ ರಿನೀಶ್ ಹಾಗೂ ಯೂತ್ ವಿಂಗ್ ಮತ್ತು ಮಲಯಾಳಿ ಸಮಾಜ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.