ಕುಶಾಲನಗರ, ಡಿ. ೨: ಕುಶಾಲನಗರದಲ್ಲಿ ನಡೆಯಲಿರುವ ೩೭ನೇ ವರ್ಷದ ಹನುಮ ಜಯಂತಿ ಅಂಗವಾಗಿ ಹನುಮ ಗೀತೆಯ ಧ್ವನಿ ಸುರುಳಿ ಬಿಡುಗಡೆ ಕಾರ್ಯಕ್ರಮ ನಡೆಯಿತು.
ಖ್ಯಾತಗಾಯಕರಿಂದ ಮೂಡಿಬಂದ ಧ್ವನಿ ಸುರುಳಿಯನ್ನು ಹಿರಿಯ ಬಿಜೆಪಿ ಮುಖಂಡ ಜಿ.ಎಲ್. ನಾಗರಾಜ್ ಬಿಡುಗಡೆಗೊಳಿಸಿದರು.
ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಬಿ. ಭಾರತೀಶ್, ದೇವಸ್ಥಾನ ಸೇವಾ ಟ್ರಸ್ಟ್ನ ರಾಧಾಕೃಷ್ಣ ಭಟ್, ಶ್ರೀ ರಾಮಾಂಜನೇಯ ಉತ್ಸವ ಸಮಿತಿಯ ಅಧ್ಯಕ್ಷ ವಿ.ಎಸ್. ಪ್ರಶಾಂತ್, ಉಪಾಧ್ಯಕ್ಷ ಕೆ.ವಿ. ಅನುದೀಪ್, ಕಾರ್ಯದರ್ಶಿ ಪಿ.ಪಿ. ನವನೀತ್, ಪ್ರಮುಖರಾದ ಎಸ್. ಪ್ರವೀಣ್, ಕೆ.ಎಸ್. ಚಂದ್ರಶೇಖರ್, ಕೆ. ವಿರಾಜೀವ, ಜನಾರ್ಧನ, ಎಲ್. ಹರೀಶ್, ಟಿ. ವಿನು ಮತ್ತಿತರರು ಇದ್ದರು.