ಮಡಿಕೇರಿ, ಡಿ. ೨: ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೇರಂಬಾಣೆ - ಕೊಳಗದಾಳು - ಬೆಟ್ಟತ್ತೂರು - ಮದೆ ಗ್ರಾಮದ ಮೂಲಕ ಮಂಗಳೂರು ರಾಜ್ಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ತೀರಾ ಹದಗೆಟ್ಟಿದ್ದು, ಈ ರಸ್ತೆ ನಿರ್ಮಾಣ ಮಾಡಿಕೊಡುವಂತೆ ಗ್ರಾಮಸ್ಥರು ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಲೋಕೋಪಯೋಗಿ ಇಲಾಖೆ ಅಭಿಯಂತರರಿಗೆ ಮನವಿ ಸಲ್ಲಿಸಿದ್ದಾರೆ.
ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಚೇರಂಬಾಣೆ ಮುಖ್ಯ ರಸ್ತೆಯಿಂದ ಕೊಳಗದಾಳು, ಬೆಟ್ಟತ್ತೂರು, ಮದೆ ಗ್ರಾಮದ ಮೂಲಕ ಮಂಗಳೂರು ಹೆದ್ದಾರಿಗೆ ಸಂಪರ್ಕ ಇರುವ ೧೮ ಕಿ.ಮೀ. ಉದ್ದದ ರಸ್ತೆ ತೀರಾ ಹದಗೆಟ್ಟಿದ್ದು, ಗುಂಡಿ ಬಿದ್ದು ಹಾಳಾಗಿರುತ್ತದೆ. ಚೇರಂಬಾಣೆಯಿAದ ೭ ಕಿ.ಮೀ. ನಿಂದ ೧೧ ಕಿ.ಮೀ. ವರೆಗೆ ಸುಮಾರು ೪ ಕಿ.ಮೀ. ನಲ್ಲಿ ೪ ವರ್ಷದಿಂದ ಯಾವುದೇ ಕಾರು, ಆಟೋ, ಲಾರಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ರಸ್ತೆ ಮಾಡಿ ೩೫ ವರ್ಷಗಳಾಗಿದ್ದು, ೪ ಕಿ.ಮೀ. ರಸ್ತೆಗೆ ೨೦೧೮-೧೯ನೇ ಸಾಲಿನಲ್ಲಿ ೨ ಕೋಟಿ ಹಣ ಬಿಡುಗಡೆ ಆಗಿದೆ. ಇ ಪ್ರಕ್ಯೂರ್‌ಮೆಂಟ್ ಟೆಂಡರ್ ಮೂಲಕ ಲೋಕೋಪಯೋಗಿ ಗುತ್ತಿಗೆದಾರ ಗುತ್ತಿಗೆ ಪಡೆದು, ೪ ವರ್ಷ ಕಳೆದರೂ ಇಲ್ಲಿಯವರೆಗೆ ಕಾಮಗಾರಿ ಪ್ರಾರಂಭ ಮಾಡಿಲ್ಲ. ಕಾರಣ ಕೇಳಿದರೆ ಸಬೂಬು ಹೇಳಿ ಸತಾಯಿಸುತ್ತಾರೆ. ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಭಿಸಿ ಸಾರ್ವಜನಿಕ ವಾಹನಗಳಿಗೆ ಓಡಾಡುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಇಲ್ಲದಿದ್ದರೆ ಧರಣಿ, ರಸ್ತೆ ತಡೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭ ಬಡ್ಡಿರ ನಂದಕುಮಾರ್, ಬಾಚರಣಿಯಂಡ ಹ್ಯಾರಿ ತಮ್ಮಯ್ಯ, ಕಡ್ಯದ ಪುಟ್ಟಯ್ಯ, ಚೌಕಿ ಆನಂದ, ಮುಕ್ಕಾಟಿ ಸಾಬು, ಮುಕ್ಕಾಟಿ ಸುಗು, ಮುಕ್ಕಾಟಿ ಮಂಜು, ಅಯ್ಯಂಡ ವಸಂತ, ಕೂಪದಿರ ರಮೇಶ್, ಬೊಪ್ಪಡ್‌ತಂಡ ಪೂಣಚ್ಚ, ಬೊಪ್ಪಡ್‌ತಂಡ ಡಾಲಿ, ಪಾರೆಮಜಲು ತಮ್ಮಯ್ಯ, ಬಾಚರಣಿಯಂಡ ಲವ, ಅಯ್ಯಂಡ ಗಣೇಶ್, ಬಡ್ಡಿರ ಕೀರ್ತಿ ಪೂವಯ್ಯ, ಬಾಚರಣಿಯಂಡ ಕಾರ್ಯಪ್ಪ, ಅಯ್ಯಂಡ ಅನುಪೆಮ್ಮಯ್ಯ, ಬೊಪ್ಪಡ್‌ತಂಡ ತಾಟು, ಅಯ್ಯಂಡ ಹರೀಶ್, ಚೀರಮಂಡ ದಿನೇಶ್, ಅಜ್ಜೀರಂಡ ಸುರೇಶ್, ಬಡ್ಡಿರ ದೇವಯ್ಯ (ಜಗದೀಶ್), ಅಲ್ಲಾರಂಡ ಧರ್ಮೇಶ್, ನಾರಾಯಣ, ಸುಬ್ರಮಣಿ, ಕೆ.ಎಂ. ಪೂವಯ್ಯ, ಅಣ್ಣು ಪೂಜಾರಿ, ಚೀರಮನ ಮಿಥುನ್ ಇನ್ನಿತರ ಪ್ರಮುಖರು ಹಾಜರಿದ್ದರು.