ಮಡಿಕೇರಿ, ಡಿ. ೧: ಸೆಂಟರ್ ಇಂಡಿಯನ್ ಟ್ರೇಡ್ ಯೂನಿಯನ್‌ನ ೧೭ನೇ ಅಖಿಲ ಭಾರತ ಸಮ್ಮೇಳನದ ಹಿನ್ನೆಲೆ ಸಿಐಟಿಯು ಕೊಡಗು ಜಿಲ್ಲಾ ಸಮಿತಿ ವತಿಯಿಂದ ಪೂರ್ವಭಾವಿ ಸಭೆ ಮತ್ತು ಲಾಂಚನ ಬಿಡುಗಡೆ ಕಾರ್ಯಕ್ರಮ ನಡೆಯಿತು.

ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಧರ್ಮೇಶ್ ಜ. ೧೮ ರಿಂದ ೨೨ ರವರೆಗೆ ಬೆಂಗಳೂರಿನಲ್ಲಿ ನಡೆಯುವ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸುವಂತೆ ಕರೆ ನೀಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್. ಭರತ್, ಕೇಂದ್ರ ಸರ್ಕಾರದ ಬಂಡವಾಳಶಾಹಿ ಪರ ಆರ್ಥಿಕ ನೀತಿಯ ಪರಿಣಾಮ ದೇಶದ ರೈತರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಿಗಳು, ಉದ್ದಿಮೆದಾರರು ಸಂಕಷ್ಟದಲ್ಲಿದ್ದು, ನಿರುದ್ಯೋಗ, ಬಡತನ ಹಾಗೂ ಹಸಿವು ಹೆಚ್ಚಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಮ್ಮೇಳನದ ಸ್ವಾಗತ ಸಮಿತಿಗಳನ್ನು ರಚಿಸಿ ಆ ಸಮಿತಿಗಳ ಮೂಲಕ ಆರ್ಥಿಕ, ಸಾಮಾಜಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಷಯಗಳ ಆಧಾರದ ವಿಚಾರ ಸಂಕಿರಣಗಳು, ಜಾಥಾಗಳು ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಭರತ್ ತಿಳಿಸಿದರು.

ಸಭೆಯಲ್ಲಿ ಹಿರಿಯ ವಕೀಲ ಕುಂಞಬ್ದುಲ್ಲ, ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಲಕ್ಷö್ಮಣ್, ಎಐಟಿಯುಸಿ ಜಿಲ್ಲಾಧ್ಯಕ್ಷ ಸೋಮಪ್ಪ, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಸಿ. ಸಾಬು, ತೋಟ ಕಾರ್ಮಿಕರ ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎನ್.ಡಿ. ಕುಟ್ಟಪ್ಪನ್, ಬಿಎಸ್‌ಎನ್‌ಎಲ್ ನಿವೃತ್ತ ಅಧಿಕಾರಿ ಎನ್.ಡಿ. ಕುಟ್ಟಪ್ಪನ್, ಸಿಐಟಿಯು ಪದಾಧಿಕಾರಿ ಕೆ.ಎಸ್. ರತೀಶ್, ಗ್ರಾ.ಪಂ. ನೌಕರರ ಸಂಘದ ಕಾರ್ಯದರ್ಶಿ ನವೀನ್ ಕುಮಾರ್, ಅಂಗನವಾಡಿ ಸಂಘದ ಪ್ರಮುಖರಾದ ಭಗೀರತಿ, ಬಿಸಿಯೂಟ ನೌಕರರ ಸಂಘದ ಪ್ರಮುಖರಾದ ಕುಸುಮ, ಕೊಡಗು ಜಿಲ್ಲಾ ಜನರಲ್ ವರ್ಕರ್ ಯೂನಿಯನ್ ಜಿಲ್ಲಾಧ್ಯಕ್ಷ ಹೆಚ್.ಬಿ. ರಮೇಶ್ ಉಪಸ್ಥಿತರಿದ್ದರು.

೧೭ನೇ ಅಖಿಲ ಭಾರತ ಸಮ್ಮೇಳನದ ಲಾಂಚನವನ್ನು ಪ್ರಮುಖರು ಇದೇ ಸಂದರ್ಭ ಬಿಡುಗಡೆಗೊಳಿಸಿದರು.

ಸ್ವಾಗತ ಸಮಿತಿ ರಚನೆ

ಸುಮಾರು ೫೫ ಮಂದಿಯ ಸ್ವಾಗತ ಸಮಿತಿಯನ್ನು ರಚಿಸಲಾಗಿದ್ದು, ಗೌರವ ಅಧ್ಯಕ್ಷರಾಗಿ ವಿ.ಪಿ. ಶಶಿಧರ್, ಮಹಾ ಪೋಷಕರಾಗಿ ಟಿ.ಪಿ. ರಮೇಶ್, ಗೌರವ ಸಲಹೆಗಾರರಾಗಿ ಕುಞಬ್ದುಲ್ಲ, ಕಾರ್ಯಾಧ್ಯಕ್ಷರಾಗಿ ಪಿ.ಆರ್. ಭರತ್, ಪ್ರಧಾನ ಕಾರ್ಯದರ್ಶಿಯಾಗಿ ಎ.ಸಿ. ಸಾಬು, ಖಜಾಂಚಿಯಾಗಿ ಎನ್.ಡಿ. ಕುಟ್ಟಪ್ಪನ್, ಪೋಷಕರಾಗಿ ವಿದ್ಯಾಧರ್, ಬೇಬಿ ಮ್ಯಾಥ್ಯು, ಕೆ.ಎಂ. ಗಣೇಶ್, ನೆರವಂಡ ರಮೇಶ್, ಉಪಾಧ್ಯಕ್ಷರಾಗಿ ಕೃಷ್ಣನ್, ಸೋಮಪ್ಪ, ಲಕ್ಷö್ಮಣ್ ಆಯ್ಕೆಯಾದರು.