ನಾಪೋಕ್ಲು, ಡಿ. ೧: ನಾಪೋಕ್ಲು ಶಿವಾಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅನುಪಮಾ ಜ್ಞಾಪಕಾರ್ಥ ಮುಕ್ತ ಹಾಕಿ ಪಂದ್ಯಾಟದ ಎರಡನೇ ದಿನದ ಪಂದ್ಯಾಟದಲ್ಲಿ ಮಲ್ಮ ಎ, ಬೇಂಗ್‌ನಾಡ್ ಫೋನಿಕ್ಸ್, ಪೊದ್ದಮಾನಿ, ಬೇಗೂರು, ಡಾಲ್ಫಿನ್ಸ್, ಮೂರ್ನಾಡು, ಶಿವಾಸಿ ಎ ತಂಡಗಳು ಜಯಗಳಿಸುವದರ ಮುಂದಿನ ಸುತ್ತು ಪ್ರವೇಶಿಸಿವೆ.
ಮಲ್ಮ ಎ ಮತ್ತು ಬ್ಲೇಸ್ ತಂಡಗಳ ನಡುವೆ ನಡೆದ ಮೊದಲ ಪಂದ್ಯದಲ್ಲಿ ಮಲ್ಮ ತಂಡವು ಬ್ಲೇಸ್ ತಂಡವನ್ನು ೯-೮ ಗೋಲುಗಳ ಅಂತರದಿAದ ಸಡನ್ ಡೆತ್‌ನಲ್ಲಿ ಮಣಿಸಿ ಮುಂದಿನ ಸುತ್ತು ಪ್ರವೇಶಿಸಿತು. ಬೇಂಗ್‌ನಾಡ್ ಫೋನಿಕ್ಸ್ ಮತ್ತು ಅಮ್ಮತ್ತಿ ತಂಡಗಳ ನಡುವಿನ ಪಂದ್ಯದಲ್ಲಿ ಬೇಂಗ್‌ನಾಡ್ ತಂಡವು ಅಮ್ಮತ್ತಿ ತಂಡವನ್ನು ೫-೨ ಗೋಲುಗಳ ಅಂತರದಿAದ ಶೂಟ್‌ಔಟ್‌ನಲ್ಲಿ ಮಣಿಸಿತು. ಡ್ರಿಬ್ರ‍್ಸ್ ಮತ್ತು ಪೊದ್ದಮಾನಿ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಪೊದ್ದಮಾನಿ ತಂಡವು ಡ್ರಿಬ್ರ‍್ಸ್ ತಂಡವನ್ನು ೩-೧ ಗೋಲುಗಳ ಅಂತರದಿAದ ಪರಾಭವಗೊಳಿಸಿತು. ಬೇಗೂರು ಮತ್ತು ನಾಲಡಿ ಎ ತಂಡಗಳ ನಡುವಿನ ಪಂದ್ಯದಲ್ಲಿ ಬೇಗೂರು ತಂಡವು ನಾಲಡಿ ಎ ತಂಡವನ್ನು ೫-೪ ಗೋಲುಗಳ ಅಂತರದಿAದ ಶೂಟ್‌ಔಟ್‌ನಲ್ಲಿ ಮಣಿಸಿತು. ಡಾಲ್ಫಿನ್ಸ್ ಮತ್ತು ಕುಂದ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಡಾಲ್ಫಿನ್ಸ್ ತಂಡವು ಕುಂದ ತಂಡವನ್ನು ೫-೩ ಗೋಲುಗಳ ಅಂತರದಿAದ ಶೂಟ್‌ಔಟ್‌ನಲ್ಲಿ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು. ಮೂರ್ನಾಡು ಮತ್ತು ಹಾತೂರು ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಮೂರ್ನಾಡು ತಂಡವು ಹಾತೂರು ತಂಡವನ್ನು ೬-೫ ಗೋಲುಗಳ ಅಂತರದಿAದ ಸಡನ್ ಡೆತ್‌ನಲ್ಲಿ ಸೋಲಿಸಿತು. ಶಿವಾಜಿ ಎ ಮತ್ತು ನಾಲಡಿ ಬಿ ತಂಡಗಳ ನಡುವೆ ನಡೆದ ಸೆಣಸಾಟದಲ್ಲಿ ಶಿವಾಜಿ ತಂಡವು ನಾಲಡಿ ಬಿ ತಂಡವನ್ನು ೨-೦ ಗೋಲುಗಳ ಅಂತರದಿAದ ಸೋಲಿಸಿ ಮುಂದಿನ ಸುತ್ತು ಪ್ರವೇಶಿಸಿತು.