ಮಡಿಕೇರಿ, ಡಿ. ೧: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಅರ್ಥಶಾಸ್ತç ವಿಭಾಗ ನಡೆಸಿದ ಮುಂಬಯಿಯ ಅರ್ಥಶಾಸ್ತç ತಜ್ಞ ಎ.ಡಿ.ಶ್ರಾಫ್ ಸ್ಮರಣಾರ್ಥ ಅಂತರ ಕಾಲೇಜು ಭಾಷಣ ಸ್ಪರ್ಧೆಯಲ್ಲಿ ಮೂರ್ನಾಡು ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ರೀರಕ್ಷಾ ಪ್ರಭಾಕರ್ ಪ್ರಥಮ ಬಹುಮಾನ ಗಳಿಸಿದ್ದಾರೆ. ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಪೂವಮ್ಮ ದ್ವಿತೀಯ ಹಾಗೂ ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿನಿ ಸವಿತಾ ತೃತೀಯ ಬಹುಮಾನ ಗಳಿಸಿದ್ದಾರೆ.

ಕಾವೇರಿ ಕಾಲೇಜಿನ ತೌಸೀಫ್ ನಾಲ್ಕನೇ ಬಹುಮಾನ ಮತ್ತು ಕಾರ್ಯಪ್ಪ ಕಾಲೇಜಿನ ವಿದ್ಯಾರ್ಥಿ ಹರಿಪ್ರಸಾದ್ ಐದನೇ ಬಹುಮಾನ ಗಳಿಸಿದ್ದಾರೆ.

ಸ್ಪರ್ಧೆಯನ್ನು ದೀಪಬೆಳಗಿ ಉದ್ಘಾಟಿಸಿದ ಮುಖ್ಯ ಅತಿಥಿ ‘ಶಕ್ತಿ’ಯ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಪ್ರತಿ ರಾಷ್ಟçದ ಕೊಡುಗೆಯೂ ಮುಖ್ಯ ಎಂದರು. ಉಕ್ರೇನ್ ಮೇಲೆ ದಾಳಿ ನಡೆದರೆ, ಅದರ ದುಷ್ಪರಿಣಾಮ ಪ್ರತಿ ದೇಶದ ಹಳ್ಳಿಯ ಮೇಲೂ ಬೆಲೆ ಏರಿಕೆಯ ರೂಪದಲ್ಲಿ, ಇಂಧನದ ಕೊರತೆಯ ರೂಪದಲ್ಲಿ ಬೀರುತ್ತದೆ. ಇಂದು ಒಂದು ದೇಶದ ಆರ್ಥಿಕ ಸುಸ್ಥಿರತೆ ಅಲ್ಲಲ್ಲಿನ ಆಡಳಿತ, ಆರ್ಥಿಕ ನೀತಿ, ಕೈಗಾರಿಕಾ ಸ್ಥಿರತೆ, ವಸ್ತುಗಳ ಗುಣಮಟ್ಟ, ಭ್ರಷ್ಟಾಚಾರ ರಹಿತ ಆಡಳಿತವನ್ನಷ್ಟೇ ಅವಲಂಬಿಸದೆ - ವಿದೇಶದ ಆಗುಹೋಗುಗಳನ್ನು ಅವಲಂಬಿಸಿದ್ದು, ಅರ್ಥಶಾಸ್ತç ನೆಲದ ಭವಿಷ್ಯ ನಿರ್ಧರಿಸುತ್ತದೆ ಎಂದರು.

ದುರಾಡಳಿತ ಮತ್ತು ಭ್ರಷ್ಟಾಚಾರದಿಂದ ಶ್ರೀಲಂಕಾವನ್ನು ಧಳ್ಳುರಿಗೆ ತಳ್ಳಿ, ಅರ್ಥವ್ಯವಸ್ಥೆ ಕುಸಿಯಲು ಅಧಿಕಾರ ಉಳ್ಳವರು ಹೇಗೆ ಕಾರಣರಾದರು ಎಂದು ಅನಂತಶಯನ ವಿವರಿಸಿದರು.

ಪ್ರಾಂಶುಪಾಲ ಡಾ. ಸಿ. ಜಗತ್ ತಿಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಗೆ ಒತ್ತು ನೀಡಿ ದೇಶ ನಿರ್ಮಾತೃಗಳಾಗಬೇಕು ಎಂದರು. ಸಮವಸ್ತç ಧರಿಸಿ ಹೊರಗೆ ಓಡಾಡುವ ವಿದ್ಯಾರ್ಥಿಗಳು ಜವಾಬ್ದಾರಿ ಪ್ರದರ್ಶಿಸಬೇಕು ಎಂದು ಕಿವಿಮಾತು ಹೇಳಿದರು.

ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಇ. ತಿಪ್ಪೆಸ್ವಾಮಿ ಮಾತನಾಡಿ, ಎ.ಡಿ. ಶ್ರಾಫ್ ಸ್ಪರ್ಧೆಯ ಹಿನ್ನೆಲೆ ವಿವರಿಸಿದರು. ಅರ್ಥವ್ಯವಸ್ಥೆ ನಿರ್ವಹಣೆ ಬಹುಮುಖ್ಯ ಎಂದರಲ್ಲದೆ, ವಿದ್ಯಾರ್ಥಿಗಳು ವಿಷಯವನ್ನು ಸಮಗ್ರವಾಗಿ ಅರ್ಥೈಸಿ ಮುನ್ನಡೆ ಇಡಬೇಕು ಎಂದರು.

ಡಾ. ಎಚ್.ಕೆ. ರೇಣುಶ್ರೀ, ಡಾ. ಪೂರ್ಣಿಮಾ ಮಾತನಾಡಿದರು. ದರ್ಶನ್ ಹಾಗೂ ಸಹನಾ ನಿರೂಪಣೆೆ ಮಾಡಿದರು. ಅನುಶ್ರೀ ಮತ್ತು ಕೃತಿಕಾ ಪ್ರಾರ್ಥಿಸಿದರು.