ಕೊಡ್ಲಿಪೇಟೆ, ಡಿ. ೧: ಜಿಲ್ಲೆಯ ಗಡಿಭಾಗ ಕೊಡ್ಲಿಪೇಟೆ ಹೋಬಳಿಯ ಕೆಲಕೊಡ್ಲಿ ಗ್ರಾಮದಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹೇಮಾವತಿ ಜಲಾಶಯ ಹಿನ್ನೀರು ಪ್ರದೇಶದ ಸೇತುವೆಯ ಕಾಮಗಾರಿ ಪೂರ್ಣಗೊಂಡಿದ್ದು, ಸೇತುವೆಯಲ್ಲಿನ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿರುವುದರಿಂದ ಸಾರ್ವಜನಿಕರ ನಿತ್ಯ ಸಂಚಾರಕ್ಕೆ ತೊಡಕುಂಟಾಗಿದೆ . ಶೀಘ್ರದಲ್ಲೇ ಈ ಬಗ್ಗೆ ಕ್ರಮ ವಹಿಸುವಂತೆ ಕೊಡ್ಲಿಪೇಟೆ ಕಂದಾಯ ಕಚೇರಿ ಮೂಲಕ ಕೊಡ್ಲಿಪೇಟೆಯ ಗ್ರಾಮಸ್ಥರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾಧಿಕಾರಿ ಅವರು ಸ್ಥಳ ಪರಿಶೀಲನೆ ನಡೆಸಿ ಹೇಮಾವತಿ ಜಲಾಶಯ ಯೋಜನೆಯ ಅಧಿಕಾರಿಗಳಿಗೆ ಶೀಘ್ರದಲ್ಲೇ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಲು ಮನವಿ ಮೂಲಕ ಒತ್ತಾಯಿಸಲಾಯಿತು.
ಕೊಡ್ಲಿಪೇಟೆಯಿಂದÀ ಶನಿವಾರಸಂತೆಗೆ ತೆರಳುವ ಮುಖ್ಯರಸ್ತೆ, ಮಾರ್ಕೆಟ್ ರಸ್ತೆ, ಕೊಡ್ಲಿಪೇಟೆ - ಹಂಪಾಪುರ, ಕೊಡ್ಲಿಪೇಟೆ ಕಲಕೊಡ್ಲಿ ರಸ್ತೆ ಸೇರಿದಂತೆ ಕೊಡ್ಲಿಪೇಟೆ ಹೋಬಳಿಯ ಹಲವಾರು ಗ್ರಾಮಗಳ ರಸ್ತೆಗಳು ಮಳೆಯಿಂದಾಗಿ ಹಾನಿಯಾಗಿದ್ದು, ದುರಸ್ತಿಗೊಳಿಸುವಂತೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸುವಂತೆಯೂ ಮನವಿ ಪತ್ರದ ಮೂಲಕ ಕೋರಲಾಯಿತು.
ಈ ಸಂದರ್ಭ ಕೊಡ್ಲಿಪೇಟೆ ಕ.ರ.ವೇ ಅಧ್ಯಕ್ಷ ಭೂಪಾಲ್, ಕೊಡ್ಲಿಪೇಟೆ ನಾಗರಿಕ ಸಮಿತಿಯ ಸುಬ್ರಮಣ್ಯ, ಕೊಡ್ಲಿಪೇಟೆ ಚೇಂಬರ್ ಆಫ್ ಕಾಮರ್ಸ್ನ ಯತೀಶ್ ಕುಮಾರ್, ಯು.ಎಸ್. ಕರಿ ಬಸಪ್ಪ, ನಿವೃತ್ತ ಶಿಕ್ಷಕ ಕಾಳಯ್ಯ, ಕೊಡ್ಲಿಪೇಟೆ ಪಂಚಾಯಿತಿ ಸದಸ್ಯ ನಂದೀಶ್, ಕೊಡ್ಲಿಪೇಟೆ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ ಪ್ರಸನ್ನ ಅವರುಗಳು ಹಾಜರಿದ್ದರು.